99 ವರ್ಷದ ನಿವೃತ್ತ ಶಾಲಾ ಪ್ರಾಂಶುಪಾಲನೊಬ್ಬ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ. ಆರೋಪಿ ಪ್ರಾಂಶುಪಾಲನನ್ನು ಈಗ ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಹೊಟ್ಟೆ ನೋವು ಎಂದು ಪೋಷಕರ ಮುಂದೆ ಅಳಲು ತೋಡಿಕೊಂಡಾಗಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರ ವಿಚಾರಣೆ ವೇಳೆ ಮಗು, ವೃದ್ಧನ ನಿಜ ಕೃತ್ಯದ ಕುರಿತು ಬಾಯಿ ಬಿಟ್ಟಿದೆ.
ವೃದ್ಧ ತಾನು ಮಾಡಿದ ತಪ್ಪನ್ನು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಬಂಧಿತ ಆರೋಪಿ, ಚೆನ್ನೈ ವಾಸಿ. ಆತನಿಗೆ ಏಳು ಜನ ಮಕ್ಕಳು. 2 ಗಂಡು, 5 ಹೆಣ್ಣು ಹಾಗೂ ಮೊಮ್ಮಕ್ಕಳನ್ನು ಹೊಂದಿದ್ದಾನೆ. ಅಲ್ಲದೆ ಐದು ಮನೆಗಳನ್ನು ಕಟ್ಟಿಸಿ ಬಾಡಿಗೆ ನೀಡಿದ್ದಾನೆ. ಇವುಗಳ ಪೈಕಿ ಒಂದು ಮನೆಯಲ್ಲಿ 10 ವರ್ಷದ ಮಗುವಿನ ಕುಟುಂಬ 2 ವರ್ಷಗಳಿಂದ ವಾಸ್ತವ್ಯ ಹೂಡಿತ್ತು.