ಆರು ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ಹಿಂದೂ ಮೀನು ವ್ಯಾಪಾರಿಗಳ ಅಂಗಡಿ ಧ್ವಂಸ ಹಾಗೂ ಮಾರಕಾಸ್ತ್ರ ದಾಳಿ ಪ್ರಕರಣ, ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ನವಾಜ್’ಗೆ ಚೂರಿಯಿಂದ ಇರಿದ ಪರೋಠಾ ನೌಫಾಲ್ ಅಂದರ್..! ; ಕಡಬ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ – ಕಹಳೆ ನ್ಯೂಸ್
ಕಡಬ : ಆರು ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ನಡೆದ ಮೀನು ಅಂಗಡಿ ಧ್ವಂಸ ಹಾಗೂ ಮಾರಕಾಸ್ತ್ರ ದಾಳಿ ಪ್ರಕರಣ ಸಂಭಂದಿಸಿದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಚುಚ್ಚಿದ ಘಟನೆ ಕಡಬ ಕೊಯಿಲ ಗ್ರಾಮದ ಎಂತಾರು ಎಂಬಲ್ಲಿ ತಡರಾತ್ರಿ ನಡೆದಿದೆ.
ನೌಫಾಲ್ ಹಾಗು ನವಾಜ್ ಮಧ್ಯೆ ಈ ಗಲಾಟೆ ನಡೆದಿದ್ದು ಈ ವೇಳೆ ನೌಫಾಲ್ ನವಾಜ್’ನ ಹೊಟ್ಟೆಗೆ ಚೂರಿಯಿಂದ ಇರಿದಿದ್ದು ಪರಿಣಾಮ ನವಾಜ್ ಗೆ ತೀವ್ರವಾದ ಗಾಯವಾಗಿದ್ದು ಸದ್ಯ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸದ್ಯ ಈ ಕುರಿತು ನವಾಜ್ ನೌಫಾಲ್ ವಿರುದ್ಧ ಕಡಬ ಪೊಲೀಸರಿಗೆ ದೂರು ನೀಡಿದ್ದು ಐಪಿಸಿ ಸೆಕ್ಷನ್ 504,323,326,506 ರ ಅಡಿಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಸದ್ಯ ಆರೋಪಿ ನೌಫಲ್ ನನ್ನು ಕಡಬ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ತನಿಖೆ ಮುಂದುವರಿದಿದೆ.
ಸಾರಾಂಶ – ಈ ಪ್ರಕರಣದ ಪಿರ್ಯಾದಿದಾರರಾದ ಮಹಮ್ಮದ್ ನವಾಝ್ ಎಂಬವರು ನೀಡಿದ ಹೇಳಿಕೆಯ ಸಾರಾಂಶವೆನೆಂದರೆ ಪಿರ್ಯಾದುದಾರರು ದಿನಾಂಕ:15.08.2022 ರಂದು ಸಂಜೆ ಮನೆಯಲ್ಲಿರುವ ಸಮಯ ತನ್ನ ಮೊಬೈಲ್ ರಿಜಾರ್ಜ್ ಖಾಲಿಯಾಗಿದ್ದರಿಂದ ಮನೆಯ ಪಕ್ಕದಲ್ಲಿದ್ದ ಆರೋಪಿ ನೌಫಾಲ್ ಎಂಬಾತನ ಅಂಗಡಿಗೆ ಹೋಗಿ Phone Pay ಮೂಲಕ 50 ರೂಪಾಯಿ ರಿಜಾರ್ಜ್ ಮಾಡಲು ಕೇಳಿಕೊಂಡಾಗ ಅಂಗಡಿಯಲ್ಲಿದ್ದ ನೌಫಾಲ್ ಅಂಗಡಿಯಲ್ಲಿ ಕೆಲಸ ಮಾಡುವ ಹಿಂದಿ ಮಾತನಾಡುವ ಕೆಲಸಗಾರರು Phone Pay ಇಲ್ಲ ಎಂದು ತಿಳಿಸಿದ್ದು ಬಳಿಕ ಆತೂರು ಮಸೀದಿ ಬಳಿಯ ದಿಲ್ಫರ್ ಮೆಡಿಕಲ್‌ಗೆ ಹೋಗಿ 50 ರೂ Google Pay ರಿಜಾರ್ಜ್ ಮಾಡಿಸಿಕೊಂಡು ಸಂಜೆ 17.15 ಗಂಟೆಗೆ ಮನೆಗೆ ಹೋಗಿರುತ್ತಾರೆ ನಂತರ ಪಿರ್ಯಾದಿಯ ಅಣ್ಣ ರಹೀಂ ಎಂಬಾತನು ಪಿರ್ಯಾದಿಗೆ ಫೋನ್ ಕರೆ ಮಾಡಿ ನೀನು ಯಾಕೇ ನೌಫಾಲ್ ಅಂಗಡಿಗೆ ರಿಜಾರ್ಜ್ ಮಾಡಿಸಲು ಹೋಗಿದ್ದು ಆತನು ನನಗೆ ಫೋನ್ ಮಾಡಿ ನಿನ್ನ ತಮ್ಮ ನನ್ನ ಅಂಗಡಿಗೆ ಯಾಕೆ ಬರೋದು ಎಂದು ನನಗೆ ಅವಾಚ್ಯವಾಗಿ ಬೈದನು ಎಂದು ತಿಳಿಸಿರುತ್ತಾನೆ ನಂತರ ಪಿರ್ಯಾದಿಯು ಆರೋಪಿ ನೌಫಾಲ್ ಎಂಬಾತನಿಗೆ ಪೋನ್ ಮಾಡಿ ನನ್ನ ಅಣ್ಣ ರಹೀಂನಿಗೆ ನೀನು ಯಾಕೆ ಬೈದದ್ದು ಎಂದು ಕೇಳಿದಾಗ ನೀನು ಅಂಗಡಿಯ ಹತ್ತಿರ ಬಾ ಮಾತನಾಡಲು ಇದೆ ಎಂದು ಪಿರ್ಯಾದಿಯನ್ನು ಬರಮಾಡಿಕೊಂಡು ಬಳಿಕ ಆರೋಪಿತನು 6 ತಿಂಗಳ ಹಿಂದೆ ಉಪ್ಪಿನಂಗಡಿಯಲ್ಲಿ ಮೀನು ವ್ಯಾಪಾರಕ್ಕೆ ಸಂಬಂದಿಸಿದ ಗಲಾಟೆಗೆ ಸಂಬಂದಿಸಿದಂತೆ ನನ್ನ ತಮ್ಮ ಸಿನಾನ್ ಬಗ್ಗೆ ನೀನು ಯಾಕೇ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದು “ಬೇವರ್ಸಿ ಸೂಳೆ ಮಗನೇ” ಎಂದು ಹೇಳಿ ಬಳಿಕ ಪಿರ್ಯಾದಿಯ ಶರ್ಟ್ ಕಾಲರ್ ಹಿಡಿದು ಗಲಾಟೆ ಮಾಡಿ ನಂತರ ಅಂಗಡಿಯಲ್ಲಿಯೇ ಇದ್ದ ಚಾಕುವಿನಿಂದ ಪಿರ್ಯಾದಿಯ ಹೊಟ್ಟೆಗೆ ಚುಚ್ಚಿದಾಗ ಪಿರ್ಯಾದಿಗೆ ತೀವ್ರ ರಕ್ತಸ್ರಾವವಾಗಿ ತೀವ್ರಗಾಯವಾಗಿರುತ್ತದೆ. ನಂತರ ಸ್ಥಳದಲ್ಲಿದ್ದ ಸಾರ್ವಜನಿಕರು ಮತ್ತು ಪಿರ್ಯಾದಿಯ ಸ್ನೇಹಿತರಾದ ಹಕೀಲ್ ಮತ್ತು ಆಸೀಫ್ ಎಂಬವರು ಪುತ್ತುರು ಮಹಾವೀರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿರುತ್ತದೆ