Saturday, November 23, 2024
ಸುದ್ದಿ

ವಿವೇಕಾನಂದ ಮಹಾವಿದ್ಯಾಲಯದಲ್ಲಿ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ- ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು : ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಐಕ್ಯೂ ಎಸಿ ಇದರ ಸಹಯೋಗದಲ್ಲಿ ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ ಕಾರ್ಯಕ್ರಮ ನಡೆದಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ, ಭಜರಂಗದಳದ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ ಭಾಗಿಯಾಗಿದ್ರು. ಬಳಿಕ ಮಾತನಾಡಿದ ಇವರು ಶಿಕ್ಷಣ ಎನ್ನುವಂತದ್ದು ಅಂಕಾಧಾರಿತವಾಗಿದೆ. ಆದರೆ ಅದು ಸಲ್ಲದು. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿತುಕೊಳ್ಳುವುದು ಅನಿವಾರ್ಯ. ಇಂದಿನ ಯುವ ಶಕ್ತಿಯೇ ಭವಿಷ್ಯದ ರಾಷ್ಟ್ರಶಕ್ತಿ. ಹಾಗಿರುವಾಗ ಇದೇ ಯುವ ಜನತೆಗೆ ದಾರಿ ತಪ್ಪಲು ಸಾವಿರಾರು ಅವಕಾಶಗಳಿದೆ. ಸಮಾಜದಲ್ಲಿ ಸಂಸ್ಕಾರವAತರ ಅಗತ್ಯವಿದೆ. ಪ್ರತಿಯೊಬ್ಬರೂ ಕೂಡ ಸಮಾಜ ಸುಧಾರಣೆಗಾಗಿ ನಾವೇನು ಮಾಡಬಹುದು ಎಂಬುದನ್ನು ಯೋಚಿಸಬೇಕು. ಸಮಾಜಮುಖಿ ಚಿಂತನೆಗಳು ವಿದ್ಯಾರ್ಥಿಗಳಲ್ಲಿ ಜೀವಂತವಾಗಬೇಕು
ನಾವು ಪಡೆದ ಶಿಕ್ಷಣ ನಮ್ಮ ಕುಟುಂಬವನ್ನು ಸಲಹುದಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಸಮಾಜಕ್ಕೂ ಉಪಯೋಗಕ್ಕೆ ಬರಬೇಕು. ಆಗ ಮಾತ್ರ ಶಿಕ್ಷಣವು ಶ್ರೇಷ್ಠತೆಯನ್ನು ಪಡೆಯಲು ಸಾಧ್ಯ .ಇದಕ್ಕೆಲ್ಲ ಸಂಸ್ಕಾರ ಮುಖ್ಯ. ಉತ್ತಮ ಸಂಸ್ಕಾರ ದಿಂದ ರಾಷ್ಟ್ರನಿರ್ಮಾಣವಾಗುತ್ತದೆ. ಸ್ವಾರ್ಥಯುತ ಜೀವನವನ್ನು ನಡೆಸದೆ ಸಮಾಜಕ್ಕೆ ನಮ್ಮ ಕೈಯಿಂದ ಏನು ಸಹಾಯ ಮಾಡಲು ಸಾಧ್ಯ ಎಂದು ಯೋಚಿಸುವಂತ ಮನೋಭಾವ ವಿದ್ಯಾರ್ಥಿಗಳಲ್ಲಿ ಮೂಡಬೇಕು. ವೈಯುಕ್ತಿಕ ಆಕಾಂಕ್ಷೆಯನ್ನು ಮರೆತು ಸಮಾಜದ ಕುರಿತು ಚಿಂತನೆ ಮಾಡಬೇಕು. ದೇಶದ ಪ್ರತಿಯೊಬ್ಬ ವ್ಯಕ್ತಿಯು ದೇಶಭಕ್ತನಾಗಿದ್ದರೆ ಮಾತ್ರ ಅಖಂಡ ಭಾರತವನ್ನು ನಿರ್ಮಿಸಲು ಸಾಧ್ಯ. ಜಾತಿ, ಮತ ,ಪಕ್ಷ, ಎಂಬ ಭೇದವನ್ನು ಮರೆತು ನಾವು ಭಾರತೀಯರು ಎಂಬ ಮನೋಭಾವನೆಯನ್ನು ಬೆಳೆಸಿಕೊಂಡು ಬದುಕಬೇಕು.ಇದರ ಜೊತೆಗೆ ಸಂಸ್ಕೃತಿಯ ಪುನರುತ್ಥಾನವಾಗಲಿ ಎಂದು ನುಡಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಶ್ರೀಪತಿ ಕಲ್ಲುರಾಯ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿ, ನಮ್ಮ ಭವಿಷ್ಯಕ್ಕಾಗಿ ಹತ್ತಾರು ದಾರಿಗಳಿವೆ, ಆದುದರಿಂದ ನಿಮ್ಮ ದಾರಿಯನ್ನು ನೀವೇ ಹುಡುಕಿಕೊಳ್ಳಿ. ಸರಿಯಾದ ದೃಷ್ಟಿಕೋನ ಇಟ್ಟುಕೊಂಡು ಉತ್ತಮ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಸಾಗುವ ದಾರಿ ಯಾವುದಾದರೂ ಕೂಡ ಅನೇಕ ಸವಾಲುಗಳಿರುತ್ತವೆ, ಅದನ್ನು ನಿರ್ವಹಿಸಲು ಸಮರ್ಥವಾಗಿ ಸಿದ್ಧರಾಗಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ ವಿಷ್ಣು ಗಣಪತಿ ಭಟ್ ಮಾತನಾಡಿ, ತಾಳ್ಮೆ ವಿದ್ಯಾರ್ಥಿಗಳಿಗೆ ಅತಿ ಅಗತ್ಯ.ತಾಳ್ಮೆ ಇಲ್ಲದ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಶಸ್ಸನ್ನು ಕಾಣುವುದು ಕಷ್ಟ ಸಾಧ್ಯ. ಜೊತೆಗೆ ಜೀವನದಲ್ಲಿ ಮುಖ್ಯವಾದುದು ಗುಣ ಮತ್ತು ನಡತೆ. ಸುಶಿಕ್ಷಿತ ಉತ್ತಮ ವ್ಯಕ್ತಿತ್ವವುಳ್ಳ ವಿದ್ಯಾರ್ಥಿಗಳು ಸಮಾಜಕ್ಕೆ ಅಗತ್ಯ ಅಂತ ವಿದ್ಯಾರ್ಥಿಗಳಾಗಿ ತಾವೆಲ್ಲ ಹೊರಹೋಗಬೇಕು ಎಂದು ನುಡಿದರು.
ಅಂತಿಮ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಭಾರತಮಾತೆಯ ಭಾವಚಿತ್ರವನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಶೈಕ್ಷಣಿಕ ರಂಗದಲ್ಲಿ ಸಾಧನೆ ಮಾಡಿದಂತಹ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂತಿಮ ಪದವಿ ವಿದ್ಯಾರ್ಥಿ ಗಳು ತಮ್ಮ ಅನುಭವದ ಮಾತುಗಳನ್ನು ಹಂಚಿಕೊAಡರು ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿ ಗಳಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ವಿಶ್ರಾಂತ ಪ್ರಾಂಶುಪಾಲ ವೇದವ್ಯಾಸ ಆರ್ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಐ ಕ್ಯೂಎಸಿ ಘಟಕದ ಸಂಯೋಜಕ ಪ್ರೊ. ಶಿವಪ್ರಸಾದ್, ಕಾಲೇಜಿನ ಅಡಳಿತ ಮಂಡಳಿಯ ಸಂಚಾಲಕ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ. ಮನಮೋಹನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಉಪನ್ಯಾಸಕ , ಉಪನ್ಯಾಸಕೇತರ ವರ್ಗ, ಹಿರಿಯ ವಿದ್ಯಾರ್ಥಿ ಗಳು,ಪೋಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅನುಷಾ , ಶಿಲ್ಪಾ , ಅನನ್ಯ ಲಕ್ಷ್ಮಿ ಪ್ರಾರ್ಥಿಸಿದರು.ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಬಿ ಶ್ರೀಧರ್ ನಾಯ್ಕ್ ಸ್ವಾಗತಿಸಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಅರುಣ್ ಪ್ರಕಾಶ್ ವಂದಿಸಿ , ಕನ್ನಡ ವಿಭಾಗದ ಉಪನ್ಯಾಸಕಿ ಡಾ ಗೀತಾ ಕುಮಾರಿ ಟಿ, ಆಂಗ್ಲ ವಿಭಾಗದ ಉಪನ್ಯಾಸಕಿ ಸರಸ್ವತಿ ಸಿ.ಕೆ ನಿರೂಪಿಸಿದರು.