ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಸ್ವಾತಂತ್ರ್ಯ ಅಮೃತಮಹೋತ್ಸವ : ಭಾರತವನ್ನು ವಿಶ್ವಗುರುವನ್ನಾಗಿಸಲು ಯುವ ಜನತೆ ತಯಾರಾಗಬೇಕು – ಡಾ.ಕಲ್ಲಡ್ಕ ಪ್ರಭಾಕರ್ ಭಟ್ –ಕಹಳೆ ನ್ಯೂಸ್
ಪುತ್ತೂರು : ಒನಕೆ ಓಬವ್ವ ನಂತಹ ಹಲವು ವೀರ ಮಹಿಳೆಯರು ಹಾಗೂ ಭಗತ್ ಸಿಂಗ್ ನಂತಹ ನೂರಾರು ಕ್ರಾಂತಿಕಾರಿ ಹೋರಾಟಗಾರರ ರಕ್ತ ತರ್ಪಣದ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಭಾರತದ ಮುಂದಿನ ಇಪ್ಪತ್ತೈದು ವರ್ಷವನ್ನು ಯೋಚನೆ ಮಾಡಿಕೊಂಡು ಚುರುಕು ಬುದ್ಧಿ ಹಾಗೂ ಬಿಸಿರಕ್ತದಿಂದ ದೇಶದ ಸರ್ವ ಶ್ರೇಷ್ಠತೆ ಮತ್ತು ಭಾರತವನ್ನು ವಿಶ್ವಗುರುವನ್ನಾಗಿ ಮಾಡಿಸಲು ಯುವ ತರುಣರು ತಯಾರಾಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ೭೫ನೇ ಸ್ವಾತಂತ್ರ‍್ಯ ಅಮೃತಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧ್ವಜಾರೋಹಣವನ್ನು ಮಾಡಿ ಸೋಮವಾರ ಮಾತನಾಡಿದರು.ಸದ್ವಿಚಾರ, ಮೂಲಚಿಂತನೆ ಮತ್ತು ಆದರ್ಶ ಮೌಲ್ಯಗಳನ್ನು ಇಟ್ಟುಕೊಂಡು ಮತ್ತೆ ಮತ್ತೆ ತಲೆ ಎತ್ತುತ್ತಿರುವ ದೇಶ ಅಂದರೆ ಅದು ನಮ್ಮ ಹೆಮ್ಮೆಯ ಭಾರತ.ಈ ಬಾರಿ ಅಮೃತಮಹೋತ್ಸವದ ಕ್ಷಣವಾದ್ದರಿಂದ ಮನೆಮನೆಗಳಲ್ಲಿ ಮನಮನಗಳಲ್ಲಿ ಇಂದು ರಾಷ್ಟ್ರಲಾಂಛನವು ಹಾರಾಡುತ್ತಿದೆ. ದೇಶದ ಚಿಂತನೆ ಮತ್ತು ದೃಷ್ಟಿಕೋನವನ್ನು ಇಟ್ಟುಕೊಂಡು ಸಂಸ್ಕೃತಿಯ ಜೀವಾಳವನ್ನು ಮುಂದುವರಿಸುವAತಹ ಕೆಲಸವನ್ನು ವಿವೇಕಾನಂದ ವಿದ್ಯಾವರ್ಧಕ ಸಂಘ ಮಾಡುತ್ತಿದೆ. ಅದರಿಂದ ಇಲ್ಲಿರುವಂತಹ ಒಬ್ಬೊಬ ವ್ಯಕ್ತಿಯು ದೇಶದ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ ಎಂ ಕೃಷ್ಣಭಟ್, ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ಕಾಲೇಜು ಆಡಳಿತ ಮಂಡಳಿ ಸದಸ್ಯರು ಹಾಗೂ ವಿವೇಕಾನಂದ ಸ್ನಾತಕೋತ್ತರ, ಇಂಜಿನಿಯರಿAಗ್, ಪದವಿ,ಪಿಯುಸಿ,ಪಾಲಿಟೆಕ್ನಿಕ್, ಸಿಬಿಎಸ್ ಸಿ ಹಾಗೂ ನಿವೇದಿತಾ ಶಿಶುಮಂದಿರದ ವಿದ್ಯಾರ್ಥಿಗಳು ಭಾಗವಹಿಸಿದರು. ಪದವಿ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಶಕುಮಾರ್ ಕಾರ್ಯಕ್ರಮವನ್ನು ನಿರ್ವಹಿಸಿದರು.ಕಾಲೇಜಿನ ಎನ್ ಸಿಸಿ,ಎನ್ ಎಸ್ಎಸ್, ರೋವರ್ ರೇಂಜರ್ ಹಾಗೂ ರೆಡ್ ಕ್ರಾಸ್ ನ ವಿದ್ಯಾರ್ಥಿಗಳು ಸಹಕರಿಸಿದರು.