Recent Posts

Monday, January 20, 2025
ಸುದ್ದಿ

ಪುತ್ತೂರಿನ ಶಾಂತಿಗೋಡಿನಲ್ಲಿರುವ ನವಚೇತನ ಹಿರಿಯ ನಾಗರಿಕರ ಬಡಾವಣೆಯಲ್ಲಿ 76ನೇಯ ಸ್ವಾತಂತ್ರ‍್ಯ ದಿನಾಚರಣೆ –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ತಾಲೂಕಿನ ಶಾಂತಿಗೋಡಿನಲ್ಲಿರು ನವಚೇತನ ಹಿರಿಯ ನಾಗರಿಕರ ಬಡಾವಣೆಯಲ್ಲಿ ಇಂದು ೭೬ನೆಯ ಸ್ವಾತಂತ್ರ‍್ಯ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಶ್ರೀಯುತ ಪೆಲತ್ತಡ್ಕ ತಿರುಮಲೇಶ್ವರ ಭಟ್ ಅವರು ನೆರವೇರಿಸಿದ್ರು. ಇವರು ಪೂನಾದಲ್ಲಿರುವ ಅಮ್ಮ್ಯುನಿಷನ್ ಫ್ಯಾಕ್ಟರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದು ಈಗ ನಿವೃತ್ತಿ ಜೀವನವನ್ನು ನವಚೇತನದಲ್ಲಿ ಕಳೆಯುತ್ತಿದ್ದಾರೆ. ಇನ್ನು ಧ್ವಜಾರೋಹಣ ನೆರವೇರಿಸಿ ದೇಶಕ್ಕಾಗಿ ಬಲಿದಾನ ಗೈದ ಹಿರಿಯರನ್ನು ನೆನಪಿಸಿಕೊಂಡು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಗೋವಿಂದದಾಸ್ ಕಾಲೇಜ್ ಸುರತ್ಕಲ್ ಇಲ್ಲಿನ ನಿವೃತ್ತ ಪ್ರಾಧ್ಯಾಪಕರು, ನವಚೇತನದ ನಿವಾಸಿಗಳಾಗಿರುವಂತಹ ಶ್ರೀಯುತ ಬಿ. ರಾಧಾವಿಠ್ಠಲ ಅವರು ಮಾತನಾಡಿ ನಾವು ೭೫ನೆಯ ಸ್ವಾತಂತ್ರ‍್ಯ ದಿನಾಚರಣೆಯನ್ನು ಈ ರೀತಿಯಾಗಿ ಬಹಳ ಸಂಭ್ರಮದಿAದ ಆಚರಿಸಲು ಸಿಕ್ಕಿದ್ದು ನಮ್ಮ ಸೌಭಾಗ್ಯ,ಈ ಅಮೃತ ಮಹೋತ್ಸವದ ಸಂಧರ್ಭದಲ್ಲಿ ನಾವು ಇತರ ಕೆಲವು ರಾಷ್ಟ್ರಗಳಿಗೆ ಹೋಲಿಸಿದರೆ ಸಾದಿಸಬೇಕಾದುದು ಬಹಳಷ್ಟು ಇದೆ ಅದನ್ನು ಮಾಡಲು ನಾವೆಲ್ಲರೂ ಇನ್ನಷ್ಟು ಒಗ್ಗಟ್ಟಾಗಿ ಕೆಲಸ ಮಾಡೋಣ ಹಾಗೂ ಸ್ವಚ್ಛ ಭಾರತ,ಆತ್ಮನಿರ್ಭರ ಭಾರತ ಮೊದಲಾದ ಯೋಜನೆಗಳನ್ನು ಸಾಕಾರಗೊಳುಸುವಲ್ಲಿ ನಾವು ಕೈ ಜೋಡಿಸೋಣ ಎಂದು ಶುಭ ಹಾರೈಸಿದರು.
ಇನ್ನೋರ್ವ ಮುಖ್ಯ ಅತಿಥಿ ಭಾರತೀಯ ಜೀವವಿಮಾ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಇದ್ದು ಈಗ ನಿವೃತ್ತ ಜೀವನವನ್ನು ಕಳೆಯುತ್ತಿರುವ ನವಚೇತನದ ನಿವಾಸಿ ಶ್ರೀಯುತ ಯು.ಎಸ್ ಗಣಪತಿ ಭಟ್ ಅವರು ಮಾತನಾಡುತ್ತ ದೇಶಕ್ಕಾಗಿ ಪ್ರಾಣಕೊಟ್ಟ ಆನೇಕ ಜನರಿಂದಾಗಿ ನಾವು ಈ ಅಮೃತ ಮಹೋತ್ಸವ ವನ್ನು ಆಚರಿಸುವನಂತಹ ಸಂಧರ್ಭ ಬಂತು, ಹಿಂದೆ ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿಂದಾಗಿ ಪರಕಿಯರು ದಾಳಿ ಮಾಡಿ ಸ್ವಾತಂತ್ರ‍್ಯ ಕಸಿದುಕೊಂಡರು, ಅದ ಕಾರಣ ನಾವೆಲ್ಲರು ಒಟ್ಟಾಗಿ ಇದ್ದು ಈಗಿನ ಸ್ವಾತಂತ್ರ‍್ಯವನ್ನು ಉಳಿಸುವಲ್ಲಿ ಮುಂದಡಿ ಇಡೋಣ ಹಾಗೂ ಪ್ರತಿಯೊಬ್ಬನಲ್ಲೂ ರಾಷ್ಟ್ರಭಕ್ತಿ ಮೂಡಲಿ ಎಂದು ಆಶಿಸಿದರು.
ನವಚೇತನದ ಮ್ಯಾನೇಜರ್ ಆಗಿರುವ ಶ್ರೀಯುತ ಗೋಪಾಲಕೃಷ್ಣ ಕೆ ಆವರು ಅತಿಥಿಗಳನ್ನು ಸ್ವಾಗತಿಸಿ ಧನ್ಯವಾದಗಳನ್ನು ಸಮರ್ಪಿಸಿದರು. ನವಚೇತನದ ಸಿಬ್ಬಂದಿವರ್ಗ ಹಾಗೂ ನಿವಾಸಿಗಳೆಲ್ಲರು ಈ ಶುಭ ಸಂಧರ್ಭದಲ್ಲಿ ಉಪಸ್ಧಿತರಿದ್ದರು.