Recent Posts

Sunday, January 19, 2025
ದಕ್ಷಿಣ ಕನ್ನಡರಾಜ್ಯಶಿಕ್ಷಣಸುದ್ದಿ

ವಿಶ್ವ ಟೇಕ್ವಾಂಡೋ ಚಾಪಿಯನ್‌ ಶಿಪ್‌ ನಲ್ಲಿ ಬೆಳ್ಳಿ ಗೆದ್ದ ಶಾರದಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥನಿ ಸಂಹಿತಾ ಅಲೆವೂರಾಯ ; ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ರಿಂದ ಅಭಿನಂದನೆ – ಕಹಳೆ ನ್ಯೂಸ್

ಮಂಗಳೂರು, ಆ 16 : ವಿಶ್ವ ಟೇಕ್ವಾಂಡೋ ಚಾಪಿಯನ್‌ ಶಿಪ್‌ ನಲ್ಲಿ ಮಹಿಳೆಯರ (ಕಿರಿಯ) ವಿಭಾಗದಲ್ಲಿ ಬೆಳ್ಳಿ ಗೆದ್ದ ಶಾರದಾ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥನಿ ಸಂಹಿತಾ ಅಲೆವೂರಾಯ ಅವರನ್ನು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ದೂರವಾಣಿ ಮೂಲಕ ಕರೆ ಮಾಡಿ ಅಭಿನಂದಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಹಿತಾ ಹೆತ್ತವರಾದ ಕದ್ರಿಯ ವಾಸುದೇವ ಭಟ್‌ ಕುಂಜತ್ತೋಡಿ ಅವರಿಗೆ ಕರೆ ಮಾಡಿದ ಶಿಕ್ಷಣ ಸಚಿವರು, ವಿದ್ಯಾರ್ಥಿನಿಯ ಸಾಧನೆಗೆ ಅಭಿನಂದನೆ ಸಲ್ಲಿಸಿದರು. ಕ್ರೀಡೆಯ ಕುರಿತು ಮಕ್ಕಳಿಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, ಸಂಹಿತಾ ಅವರ ಸಾಧನೆ ಕುರಿತು ಮುಖ್ಯಮಂತ್ರಿ ಅವರಿಗೆ ತಿಳಿಸುತ್ತೇನೆ ಎಂದರು.ಬಳಿಕ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಕರೆ ಮಾಡಿ ಸಂಹಿತಾ ಸಾಧನೆಗೆ ಅಭಿನಂದಿಸಿದ್ದು, ನಮ್ಮೂರ ಹುಡುಗಿಯ ಕ್ರೀಡೆಯ ಸಾಧನೆ ಎಲ್ಲರಿಗೆ ಪ್ರೇರಣೆ ಎಂದಿದ್ದಾರೆ.”ನಾನು ಕರೆಯನ್ನು ನಿರೀಕ್ಷಿಸಿರಲಿಲ್ಲ. ನಾನ್ರಿ ಏಜುಕೇಶನ್‌ ಮಿನಿಸ್ಟ್ರು ಡಿ.ಸಿ. ನಾಗೇಶ್‌ ಮಾತನಾಡೋದು ಎಂದಾಗ ಖಚಿತ ಆಯಿತು. ನನ್ನ ನಂಬರ್‌ ಸಂಗ್ರಹಿಸಿ ಕರೆ ಮಾಡುವಂತಹ ಸ್ಪಂದನೆ ಇರುವ ಸಚಿವರಿಗೆ ಮತ್ತು ಜನಸ್ಪಂದನ ಸರಕಾರಕ್ಕೆ ಕೃತಜ್ಞ” ಎಂದು ವಾಸುದೇವ ಭಟ್‌ ಕುಂಜತ್ತೋಡಿ ಹೇಳಿದ್ದಾರೆ.ವಾಸುದೇವ ಭಟ್‌ ಅವರ ಪತ್ನಿ ದೀಪಾ ಕೆ.ಎಸ್.‌ ಮತ್ತು ಋತ್ವಿಕ್‌ ಅಲೆವೂರಾಯ ಅವರಿ ಪವರ್‌ಲಿಫ್ಟಿಂಗ್‌ ವಿಭಾಗದಲ್ಲಿ ಅಂತಾರಾಷ್ಟ್ರೀಯ ಕೂಟಗಳಲ್ಲಿ, ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ಗಳಿಸಿದ್ದಾರೆ. ಒಂದೇ ಮನೆಯ ಮೂರು ಮಂದಿಯೂ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವುದು ಗಮನೀಯ.