Monday, November 25, 2024
ಸುದ್ದಿ

ಮುಸ್ಲಿಂ ವಾಟ್ಸಪ್ಪ್ ಗ್ರೂಪ್ ನಲ್ಲಿ ಕೌಶಿಲ್ ವಿರುದ್ದ ಸುಳ್ಳು ಆರೋಪ : ‘ಫಾಝಿಲ್ ಹಂತಕರಿಗೆ ದ್ವಾರಕ ಬಟ್ಟೆ ಅಂಗಡಿಯ ಮಾಲೀಕನ ನೆರವು ಎಂದು ವದಂತಿ..! : ಸೈಬರ್ ಕ್ರೈಮ್‍ಗೆ ದೂರು –ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಹಿಂದೂ ಯುವ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೇ ಮಂಗಳೂರು ಹೊರವಲಯ ಸುರತ್ಕಲ್‍ನಲ್ಲಿ ಮೊಹಮ್ಮದ್ ಫಾಝಿಲ್ ಹತ್ಯೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನ ಪೆÇಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಡುವೆ ಇದೀಗ ಕೆಲ ಕಿಡಿಗೇಡಿಗಳು ಫಾಝಿಲ್ ಹತ್ಯೆಯಲ್ಲಿ ಯಾವುದೇ ಲಿಂಕ್ ಇಲ್ಲದ ವ್ಯಕ್ತಿಗಳನ್ನ ಟಾರ್ಗೆಟ್ ಮಾಡಿ ಈ ವ್ಯಕ್ತಿಗಳು ಪ್ರಕರಣದಲ್ಲಿ ಶಾಮಿಲಾಗಿದ್ದರು ಎಂದು ಮುಸ್ಲಿಂ ಸಂಘಟನೆ ಹಾಗೂ ಇತರ ವಾಟ್ಸಪ್ ಗ್ರೂಪ್ ಗಳಲ್ಲಿ ವದಂತಿ ಹಬ್ಬಿಸುವ ಕೆಲಸವನ್ನ ಮಾಡುತ್ತಿದ್ದಾರೆ.
ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿ ಕೌಶಿಲ್ ಎಂಬವರು ಧ್ವಾರಕ ಮೆನ್ಸ್ ಡ್ರೆಸ್ ಶಾಪ್ ಇಟ್ಟುಕೊಂಡಿದ್ದು ಇವರ ಬಗ್ಗೆ ಕೆಲ ವ್ಯಕ್ತಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ‘ಫಾಝಿಲ್ ಕೊಲೆ ಹಂತಕರಿಗೆ ಪರಾರಿಯಾಗಲು ಅವಕಾಶ ಮಾಡಿಕೊಟ್ಟ ಆರೋಪಿಗಳ ಜೊತೆ ಮೆಲ್ಕಾರ್ ದ್ವಾರಕ ಬಟ್ಟೆ ಮಾಲೀಕ ಶಾಮೀಲಾಗಿರುವುದಾಗಿ’ ಸುಳ್ಳು ಆರೋಪ ಹೊರಿಸಿ ವಾಟ್ಸ್‍ಆಪ್‍ನಲ್ಲಿ ಭಾವಚಿತ್ರ ಹಾಕಿ ಸುದ್ದಿ ಹರಿ ಬಿಡುತ್ತಿದ್ದಾರೆ.

ಈ ಹಿಂದೆ ಈ ಯುವಕರು ಬಂಟ್ವಾಳ ಠಾಣೆಗೆ ಪ್ರಕರಣ ಒಂದರ ಕುರಿತಾಗಿ ದೂರನ್ನು ನೀಡುವ ಸಂದರ್ಭ ತೆಗೆದ ಫೋಟೋದಲ್ಲಿ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮಹಜರು ಮಾಡಿದ್ದ ಹರ್ಷಿತ್ ಎಂಬಾತನು ಇದ್ದು, ಹರ್ಷಿತ್‍ನ ಪಕ್ಕದಲ್ಲೆ ದ್ವಾರಕ ಬಟ್ಟೆ ಅಂಗಡಿ ಮಾಲೀಕ ಕೌಶಿಲ್ ನಿಂತಿದ್ದರು.

ಫೋಟೋದಲ್ಲಿ ಅಕ್ಕ ಪಕ್ಕ ನಿಂತ ಕಾರಣಕ್ಕಾಗಿ ಫಾಝಿಲ್‍ನನ್ನ ಹತ್ಯೆ ಮಾಡಿದ ಆರೋಪಿಗಳಿಗೆ ಕೌಶಿಲ್ ಸಹಾಯ ಮಾಡಿದ್ದಾರೆ ಎಂದು ಕೆಲ ವಾಟ್ಸಪ್ ಗ್ರೂಪ್ ಮೂಲಕ ಸುಳ್ಳು ಆರೋಪವನ್ನ ಮಾಡಿದ್ದಾರೆ.

ಕೌಶಿಲ್ ಇವರ ವ್ಯವಹಾರದ ಮೇಲೆ ಹಾಗೂ ಇವರ ಮೇಲೆ ಧ್ವೇಷದ ಭಾವನೆ ಹುಟ್ಟಿಸುವ ಸಲುವಾಗಿ ಕೆಲವರು ಪಿತೂರಿ ನಡೆಸುತ್ತಿದ್ದು ಇದೀಗ ಫಾಸಿಲ್ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿಸುತ್ತಿದ್ದಾರೆ.

ಉತ್ತಮ ವ್ಯವಹಾರ ನಡೆಸುತ್ತ ಎಲ್ಲರೊಂದಿಗೆ ಸ್ನೇಹದಿಂದ ಇರುವ ಇವರ ವ್ಯಕ್ತಿತ್ವವನ್ನ ಸಹಿಸಲಾಗದೆ ಕೆಲ ನೀಚ ಮನಸ್ಸಿನ ವ್ಯಕ್ತಿಗಳು ಕೌಶಿಲ್ ವಿರುದ್ದ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ.
ಇನ್ನು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಗ್ಗೆ ಕೌಶಿಲ್ ಅವರು ಮಂಗಳೂರು ಸೈಬರ್ ಕ್ರೈಮ್ ನಲ್ಲಿ ದೂರು ನೀಡಿದ್ದಾರೆ. ಜೊತೆಗೆ ಮಾನ್ಯ ಬಂಟ್ವಾಳ ನಗರ ಆರಕ್ಷಕ ಠಾಣಾಧಿಕಾರಿಗಳ ಮೂಲಕವೂ ದೂರು ನೀಡಿದ್ದು, ಈ ಕುರಿತು ಪರಿಶೀಲಿಸಿ ವ್ಯಾಪಾರಕ್ಕೆ ಹಾಗೂ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಮಾಡುತ್ತಿರುವ ಕುತಂತ್ರಿಗಳನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನನಗೆ ರಕ್ಷಣೆ ಒದಗಿಸಬೇಕಾಗಿ ವಿನಂತಿಸಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದ ಆರೋಪಿಗಳಿಗೆ ಶೀಪ್ರವೇ ತಕ್ಕ ಶಾಸ್ತ್ರಿಯಾಗಲಿದ್ದು ಪೊಲೀಸರು ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.