ಪುತ್ತೂರಿನ ಬನ್ನೂರಿನಲ್ಲಿ ತಡರಾತ್ರಿ ಸುಖಾಸುಮ್ಮನೆ ಗುಂಪು ಸೇರಿದ್ದ ಮುಸ್ಲಿಂ ಯುವಕರ ಪುಂಡು ; ದಾಖಲೆ ಪರಿಶೀಲಿಸಿ, ಫೈನ್ ಹಾಕಿ ಎಚ್ಚರಿಕೆ ನೀಡಿದ ಪುತ್ತೂರು ಎಸ್‌ಐ ಶ್ರೀಕಾಂತ್ ರಾಥೋಡ್ – ಕಹಳೆ ನ್ಯೂಸ್
ಪುತ್ತೂರು : ಪೊಲೀಸ್ ಠಾಣೆಗೆ ಎಸ್‌ಐಯಾಗಿ ನೇಮಕಗೊಂಡಿರುವ ಶ್ರೀಕಾಂತ್ ರಾಥೋಡ್ ಅವರು ಉತ್ತಮ ಕರ್ತವ್ಯ ನಿರ್ವಹಣೆಯ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಿ ಜನರ ಮನೆ ಮಾತಾಗುತ್ತಿದ್ದಾರೆ.
ಇನ್ನು ನಿನ್ನೆ ಪುತ್ತೂರಿನ ಬನ್ನೂರಿನ ಚೆಲುವಮ್ಮನ ಕಟ್ಟೆ ಬಳಿ ರಾತ್ರಿ ವೇಳೆ ಮುಸ್ಲಿಂರ ಗುಂಪೊAದು ನಿಂತಿದ್ದನ್ನ ಗಮನಿಸಿ ಗಸ್ತು ತಿರುಗುತ್ತಿದ್ದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಪುತ್ತೂರು ಪೊಲೀಸ್ ಠಾಣೆಗೆ ಎಸ್‌ಪಿ ಶ್ರೀಕಾಂತ್ ರಾಥೋಡ್ ವಿಚಾರಣೆ ನಡೆಸಿದ ವೇಳೆ ಇವರ ವಾಹನಕ್ಕೆ ಸರಿಯಾದ ದಾಖಲೆ ಇಲ್ಲದಿರುವುದು ತಿಳಿದು ಫೈನ್ ಹಾಕಿ, ಈ ರೀತಿ ರಾತ್ರಿ ವೇಳೆ ಸುಖಾಸುಮ್ಮನೆ ತಿರುಗಾಡದಂತೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
ದಕ್ಷ ಪೊಲೀಸ್ ಅಧಿಕಾರಿಯಾಗಿರುವ ಇವರು ಈ ಹಿಂದೆಯೂ ಹಲವಾರು ಪ್ರಕರಣಗಳನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಅದೆಷ್ಟೋ ಕಿಡಿಗೇಡಿಗಳ ಹುಟ್ಟಡಗಿಸಿದ್ದಾರೆ. ಪ್ರತಿ ನಿತ್ಯ ರಾತ್ರಿ ವೇಳೆ ಪೇಟೆಯಲ್ಲಿ ಗಸ್ತು ತಿರುಗುತ್ತಿರುವ ಎಸ್‌ಪಿ ಶ್ರೀಕಾಂತ್ ರಾಥೋಡ್ ಅವರು ಸುಖಾಸುಮ್ಮನೆ ತಿರುಗಾಡುವವರ ಮೇಲೆ ಕ್ರಮ ಕೈಗೊಂಡು ಪುತ್ತೂರಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಟ್ಟಿದ್ದಾರೆ.