Thursday, January 23, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಳಾಲು ಗ್ರಾಮದ ಪಾನಡ್ಕ ಅಂಗನವಾಡಿಯಲ್ಲಿ ಶ್ರೀ ಕೃಷ್ಣವೇಷ ಕಾರ್ಯಕ್ರಮ : ಕೃಷ್ಣ ವೇಷ ತೊಟ್ಟು ಸಂಭ್ರಮಿಸಿದ ಅಂಗನವಾಡಿ ಪುಟಾಣಿಗಳು – ಕಹಳೆ ನ್ಯೂಸ್

ಬೆಳಾಲು: ಶ್ರೀ ಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ ಬೆಳಾಲು ಗ್ರಾಮದ ಪಾನಡ್ಕ ಅಂಗನವಾಡಿಯಲ್ಲಿ ಶ್ರೀ ಕ್ರಷ್ಣವೇಷ ಕಾರ್ಯಕ್ರಮ ನಡೆದಿದೆ. ಅಂಗನವಾಡಿಯ ಪುಟಾಣಿಗಳು ಕೃಷ್ಣ ವೇಷ ತೊಟ್ಟು ಸಂಭ್ರಮಿಸಿದ್ರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಶಾಲಾ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ನಿಶಾ ಬನಂದೂರು, ಅಂಗನವಾಡಿ ವಲಯ ಮೇಲ್ವಿಚಾರಕಿ ಕುಮಾರಿ ಲಲಿತಾ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ಗಣ್ಯರಾದ ತಿಮ್ಮಪ್ಪ ಗೌಡ ಬನಂದೂರು, ಸಮಿತಿ ಸದಸ್ಯರಾದ ಶಂಕರ ಮಡಿವಾಳ, ಯಶವಂತ ಗೌಡ ಬನಂದೂರು ಆಶಾಕಾರ್ಯಕರ್ತೆ ಡೀಕಮ್ಮ ಕೊರ್ದೋಟ್ಟು, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಶೈಲಜ, ಸಹಾಯಕಿ ಶ್ರೀಮತಿ ಸುಮಿತ್ರ, ಶ್ರೀ ಕ್ರಷ್ಣ ವೇಷ ಧರಿಸಿದ ಎಲ್ಲ ಮಕ್ಕಳಿಗೆ ಶ್ರೀನಿವಾಸ ಗೌಡ ನೋಟರಿ ವಕೀಲರು ಬೆಳಾಲು ಇವರು ಬಹುಮಾನದ ಪ್ರಾಯೋಜಕತ್ವ ನೀಡಿ ಸಹಕರಿಸಿದರು, ಮಕ್ಕಳ ಪೋಷಕರು ಊರವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.