Recent Posts

Monday, January 20, 2025
ಸುದ್ದಿ

ಮಾದರಿಯಾಯಿತು ಪಳ್ಳತ್ತಡ್ಕದ  ಎ , ಯು , ಪಿ , ಶಾಲೆಯ ಮಕ್ಕಳ ಫುಟ್ಬಾಲ್ ಜಾಗೃತಿ ಪಂದ್ಯಾಟ – ಕಹಳೆ ನ್ಯೂಸ್

ಪಳ್ಳತ್ತಡ್ಕ : ಜಗತ್ತಿನ  ಬಹುಸಂಖ್ಯಾತ  ಜನರು  ಆಡುವ  ಆಟವಾಗಿದೆ  ಫುಟ್ಬಾಲ್. ಕ್ರೀಡೆಗಳ  ರಾಜ  ಎನಿಸಿಕೊಂಡಿರುವ  ಫುಟ್ಬಾಲ್ ಈಗ  ರಷ್ಯಾದಲ್ಲಿ  ನಡೆಯುತ್ತಿದೆ . ವಿಶ್ವಕಪ್  ಫುಟ್ಬಾಲ್ ನ  ಈ ಸಂದರ್ಭದಲ್ಲಿ  ಮಕ್ಕಳಿಗೂ  ಅದರ  ಅರಿವು  ಲಭಿಸುವುದು  ಅತಿ  ಅಗತ್ಯವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಅಂಗವಾಗಿ  ಆಟದ  ಪರಿಚಯಕ್ಕಾಗಿ  ಎ , ಯು , ಪಿ , ಶಾಲೆ  ಪಳ್ಳತ್ತಡ್ಕದ  ಮಕ್ಕಳಿಗೂ  ಫುಟ್ಬಾಲ್ ಆಟವನ್ನು  ಆಡಿಸಲಾಯಿತು .ಎರಡು  ಟೀಮ್ ಗಳಾಗಿ  ಮಕ್ಕಳನ್ನು ವಿಭಾಗಿಸಿ  ಶಾಸ್ತ್ರಿಯವಾದ  ರೀತಿಯಲ್ಲಿಯೇ  ಮಕ್ಕಳಿಗೆ ಆಡಲು  ನಿರ್ದೇಶನ  ನೀಡಲಾಯಿತು . ಇದರ  ಮುಂದಾಳುತ್ವವನ್ನು  ಅಧ್ಯಾಪಕರಾದ  ಶ್ರೀ  ವಿಘ್ನೇಶ್  ಪ್ರಸಾದ  ರವರು  ವಹಿಸಿಕೊಂಡು  ಮಾದರಿಯಾಗಿ  ಆಟವಾಡುವ  ಮೂಲಕ  ಆಸಕ್ತಿಯನ್ನು , ಹುರುಪನ್ನೂ  ಮಕ್ಕಳಲ್ಲಿ ತುಂಬಿದರು . ಶ್ರೀ  ಬಾಬು  ಮಾಸ್ಟರ್  ಸಹಕರಿಸಿದರು. ಆಟಗಾರರನ್ನು  ಪ್ರೇಕ್ಷಕರನ್ನು  ಒಳಗೊಂಡ  ಫುಟ್ಬಾಲ್  ಆಟವು ಅತ್ಯಂತ ಹರ್ಷದಿಂದಲೇ  ಮುಕ್ತಾಯ ಗೊಂ ಡಿತು . ನೋಡುಗರ  ಮನಸೆಳೆದ  ಆಟವು  ಎಲ್ಲರಿಗೂ  ರಸದೌತಣವನ್ನು  ನೀಡಿತು  ಎಂಬುವುದರಲ್ಲಿ  ಎರಡು  ಮಾತಿಲ್ಲ . ಸರಿಯಾದ  ಯೋಜನೆ  ಹಾಗೂ ಸಾಮಗ್ರಿಗಳಿದ್ದರೆ  ಯಾವುದೂ  ಸಾದ್ಯ  ಎಂಬುವುದಕ್ಕೆ  ಇದೊಂದು  ನಿದರ್ಶನ .

ಜಾಹೀರಾತು
ಜಾಹೀರಾತು
ಜಾಹೀರಾತು