‘ಅಗ್ನಿವೀರ ಹುದ್ದೆ’ಗೆ ಅರ್ಜಿ ಸಲ್ಲಿಸುವ ಆಸಕ್ತರಿಗೆ ಪೂರ್ವ ಅಭ್ಯಾಸ ತರಬೇತಿ ಮತ್ತು ದೈಹಿಕ ಸದೃಢತೆ, ಕ್ರೀಡಾ ಚಟುವಟಿಕೆಗಳ ಮಾಹಿತಿ : ವಿದ್ಯಾಮಾತಾ ಅಕಾಡೆಮಿ ಪುತ್ತೂರು ಕಲ್ಪಿಸುತ್ತಿದೆ ಉತ್ತಮ ಅವಕಾಶ – ಸಂಪೂರ್ಣ ಮಾಹಿತಿ ಇಲ್ಲಿದೆ –ಕಹಳೆ ನ್ಯೂಸ್
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪಥ ನೇಮಕಾತಿ 2022ಕ್ಕೆ ಸಂಬAಧಿಸಿದAತೆ “ಅಗ್ನಿವೀರ” ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಪೂರ್ವಭಾವಿ ಅಭ್ಯಾಸ ತರಬೇತಿ ಮತ್ತು ದೈಹಿಕ ಸದೃಢತೆಯ ನಿಗದಿಪಡಿಸಿರುವ ಕ್ರೀಡಾ ಚಟುವಟಿಕೆಗಳ ಮಾಹಿತಿ, ಮೈದಾನ ತರಬೇತಿಯನ್ನು ದಕ್ಷಿಣ ಕನ್ನಡ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು – ಪುತ್ತೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.
17.5 ವರ್ಷದಿಂದ 23 ವರ್ಷದ ಯುವಕ – ಯುವತಿಯರಿಗೆ “ಅಗ್ನಿವೀರ” ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದ್ದು, ಸದ್ಯ ಈಗಾಗಲೇ ಅರ್ಜಿಸಲ್ಲಿಸಿರುವ ಪುರುಷ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 1 ರಿಂದ ಮಂಗಳೂರು ವಿಭಾಗದವರಿಗೆ ಹಾವೇರಿಯಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ದೈಹಿಕ ಕ್ಷಮತೆಯ ಪರೀಕ್ಷೆಯು ನಡೆಯಲಿದ್ದು ಇದಕ್ಕೆ ಪೂರ್ವಭಾವಿಯಾಗಿ ವಿದ್ಯಾಮಾತಾ ಅಕಾಡೆಮಿ ಪುತ್ತೂರು ಇವರ ವತಿಯಿಂದ ದಿನಾಂಕ 21/08/2022 ಭಾನುವಾರ ಬೆಳಿಗ್ಗೆ 7.30 ರಿಂದ 10.30 ರವರೆಗೆ ಪೂರ್ವಭಾವಿ ಅಭ್ಯಾಸ ತರಬೇತಿ ಮತ್ತು ದೈಹಿಕ ಸದೃಢತೆಯ ನಿಗದಿಪಡಿಸಿರುವ ಕ್ರೀಡಾ ಚಟುವಟಿಕೆಗಳ ಮಾಹಿತಿ, ಮೈದಾನ ತರಬೇತಿಯನ್ನು ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು – ಪುತ್ತೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಪೂರ್ವಭಾವಿ ಅಭ್ಯಾಸ ತರಭೇತಿಯಲ್ಲಿ ಭಾಗವಹಿಸಲು ಇಚ್ಚಿಸುವವರ ಗಮನಕ್ಕೆ
1 ಭಾಗವಹಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ 8 ಗಂಟೆಯ ಒಳಗಡೆ ಹಾಜರಿರತಕ್ಕದ್ದು ನಂತರ ಬರುವ ವಿದ್ಯಾರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ.
ಪೂರ್ವಭಾವಿ ಅಭ್ಯಾಸ ತರಭೇತಿಯಲ್ಲಿ ಭಾಗವಹಿಸಲು ಇಚ್ಚಿಸುವವರ ಗಮನಕ್ಕೆ
1 ಭಾಗವಹಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ 8 ಗಂಟೆಯ ಒಳಗಡೆ ಹಾಜರಿರತಕ್ಕದ್ದು ನಂತರ ಬರುವ ವಿದ್ಯಾರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ.
- ಮೈದಾನದಲ್ಲಿ ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರಗಳನ್ನು ಧರಿಸತಕ್ಕದ್ದು.
- ತಾವು ಅರ್ಜಿಸಲ್ಲಿಸಿದ ಪ್ರತಿಯನ್ನು ತರತಕ್ಕದ್ದು.
- ಪ್ರಸ್ತುತ ಯುವತಿಯರಿಗೂ ಅಗ್ನಿಪಥ್‌ಗೆ ಅರ್ಜಿ ಕರೆಯಲಾಗಿದ್ದು ಆಸಕ್ತರು ಭಾಗವಹಿಸಬಹುದು.
- ನೀರಿನ ಬಾಟಲಿ, ಕರವಸ್ತ್ರ ತರತಕ್ಕದ್ದು.
6.ಭಾಗವಹಿಸುವವರು 20/08/2022 ರ ಒಳಗಡೆ ಕಡ್ಡಾಯವಾಗಿ 8590773486 / 9148935808 ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳಬೇಕು.