ಭಗವಾನ್ ಶ್ರೀಕೃಷ್ಣನ ಅಪಮಾನ ಮಾಡುವ ಪೇಂಟಿಂಗ್ಸ್ ಮಾರಟ ಮಾಡುವ ಅಮೇಜಾನ್ ಕಂಪನಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ! – ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಾನ್ಯ ಪೊಲೀಸ್ ನಿರೀಕ್ಷಕರಿಗೆ ಮನವಿ – ಕಹಳೆ ನ್ಯೂಸ್
ಬೆಂಗಳೂರು : ಅಮೇಜಾನ್ ಡಾಟ್ ಇನ್ ದಲ್ಲಿ INKOLOGIE Hindu Gods Fine Art Painting ನಲ್ಲಿ ಭಗವಾನ್ ಶ್ರೀಕೃಷ್ಣನನ್ನು ಅತ್ಯಂತ ಅಶ್ಲೀಲವಾಗಿ ಚಿತ್ರಿಸಿ ಮಾರಾಟ ಮಾಡಿ, ಕೊಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುತ್ತಿದೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಸುಬ್ರಹ್ಮಣ್ಯನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
ಕೋಟ್ಯಾಂತರ ಹಿಂದೂಗಳು ಸಡಗರ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಣೆಯನ್ನು ಮಾಡುವಾಗ, ಅಮೇಜಾನ್ ಕಂಪನಿಯು ದುರುದ್ದೇಶದಿಂದ ಶ್ರೀಕೃಷ್ಣನ ಬಗ್ಗೆ ಅತ್ಯಂತ ಅಶ್ಲೀಲ ಚಿತ್ರಗಳನ್ನು ಮಾರಾಟ ಮಾಡುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ಭಾರತೀಯ ದಂಡ ಸಂಹಿತೆ 295, 295A, 298 ರ ಪ್ರಕಾರ ಗಂಭೀರ ಅಪರಾಧವಾಗಿದೆ. ಅಮೇಜಾನ್ ಕಂಪನಿಯು ಈ ಹಿಂದೆಯೂ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಅಪರಾಧವನ್ನು ಮಾಡಿದೆ. ಈ ರೀತಿಯಲ್ಲಿ ಪದೇ ಪದೇ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಅಮೇಜಾನ್ ಕಂಪನಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯು ಆಗ್ರಹ ಮಾಡುತ್ತಿದೆ. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಸಮಿತಿಯ ಶ್ರೀ. ನವೀನ್ ಗೌಡ, ಶ್ರೀ. ನೀಲೇಶ್ವರ, ಹಿಂದೂ ಮುಖಂಡರಾದ ಶ್ರೀಪುರುಷೋತ್ತಮ, ಸುಭಾಷ್ ಮತ್ತಿತರರು ಉಪಸ್ಥಿತರಿದ್ದರು.