Saturday, November 23, 2024
ಸುದ್ದಿ

ಆ.27 ರಿಂದ ಆ.31 ರವರೆಗೆ ಸುಳ್ಳಮಲೆಯಲ್ಲಿ ಗುಹಾ ತೀರ್ಥ ಸ್ನಾನ – ಕಹಳೆ ನ್ಯೂಸ್

ಬಂಟ್ವಾಳ: ಪ್ರತೀ ವರ್ಷ ದಂತೆ ಈ ವರ್ಷ ಐತಿಹಾಸಿಕ ಧಾರ್ಮಿಕ ಹಿನ್ನಲೆಯಿರುವ ಸುಳ್ಳ ಮಲೆ ಗುಹಾ ತೀರ್ಥ ಸ್ನಾನ ಆ. 27 ರಂದು ಶನಿವಾರ ದಿಂದ ಆ.31ರ ಬುಧವಾರ ಬಾದ್ರಪದ ಶುಕ್ಲ ಚೌತಿ ವರೆಗೆ ಜರುಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಣ ಅಮವಾಸ್ಯೆಯಂದು ಬಿದಿರಿನ ಕೇರ್ಪು (ಏಣಿ) ಇಡುವ ಸಂಪ್ರದಾಯದ ಬಳಿಕ ಅರಸು ಶ್ರೀ ಗುಡ್ಡೆಚಾಮುಂಡಿ ಮತ್ತು ಪ್ರದಾನ ಶ್ರೀ ಪಂಜುರ್ಲಿ ದೈವಗಳಿಗೆ ತಂಬಿಲ ಸೇವೆ ಮೊದಲಾದ ಧಾರ್ಮಿಕ ವಿದಿ ವಿದಾನದ ಬಳಿಕ ಭಕ್ತಾದಿಗಳಿಗೆ ತೀರ್ಥ ಸ್ನಾನಕ್ಕೆ ಮುಕ್ತ ಅವಕಾಶ ನೀಡಲಾಗುತ್ತದೆ.

ಭಕ್ತಾದಿಗಳು ತೀರ್ಥಸ್ನಾನಕ್ಕೆ ಬರುವಾಗ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿ ಬರುವ ಮೂಲಕ ತೀರ್ಥಕ್ಷೇತ್ರದ ಪಾವಿತ್ರ್ಯವನ್ನು ಗೌರವಿಸಬೇಕಾಗಿ ಎಂಬ ವಿನಂತಿಯನ್ನು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮುಕ್ತೇಸರ ಮಾಣಿಗುತ್ತು ಸಚಿನ್ ರೈ ತಿಳಿಸಿದ್ದಾರೆ.