Thursday, January 23, 2025
ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

‘ ಒರ ಪೋಯಾಲ್ ‘ ಎಂದ ಸಂಘಟನೆಗಳು – ಗಾನಾ ಪಿ. ಕುಮಾರ್ ವರ್ಗಾವಣೆ ; ಖಡಕ್ ಅಧಿಕಾರಿ ವೀರಯ್ಯ ಹರೇಮಠ್ ಪುತ್ತೂರು ಉಪವಿಭಾಗದ ನೂತನ ಡಿವೈಎಸ್ ಪಿ – ಕಹಳೆ ನ್ಯೂಸ್

ಪುತ್ತೂರು : ಅನೇಕ ಮೃದು ಧೋರಣೆಗಳಿಂದ ಹಿಂದೂ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ, ಪುತ್ತೂರಿನ ಡಿವೈಎಸ್ ಪಿ ಗಾನಾ ಪಿ ಕುಮಾರ್ ಅವರನ್ನು ಕೊನೆಗೂ ವರ್ಗಾವಣೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಿ.ಐ.ಡಿಯಲ್ಲಿ ಇದ್ದ ವೀರಯ್ಯ ಹಿರೇಮಠ ಅವರನ್ನು ಪುತ್ತೂರಿನ ನೂತನ ಡಿವೈಎಸ್ ಪಿಯಾಗಿ ನೇಮಕ ಮಾಡಿದ್ದು, ಪೋಲೀಸ್ ಮಹಾನಿರ್ದೇಶಕ ಡಾ. ಎಎ.ಸಲೀಂ ಅದೇಶ ಹೊರಡಿಸಿದ್ದಾರೆ.

ಇತ್ತ ಗಾನಾ ವರ್ಗಾವಣೆ ಸುದ್ದಿ ತಿಳಿಯುತ್ತಲೆ ಹಿಂದೂ ಸಂಘಟನೆಗಳು ‘ ಒರ ಪೋಯಾಲ್ ‘ ಎಂದು ನಿಟ್ಟುಸಿರು ಬಿಡುತ್ತಿದ್ದಾರೆ. ಪ್ರವೀಣ್ ನೆಟ್ಟಾರ್ ಪ್ರಕರಣ ಸೇರಿದಂತೆ ಅನೇಕ ಪ್ರಮುಖ ಪ್ರಕರಣಗಳಲ್ಲಿ ಐ.ಓ. ಆಗಿದ್ದ ಗಾನಾ ಯಶಸ್ಸು ಖಂಡಿದ್ದರು, ಕೆಲವು ಸೂಕ್ಷ್ಮ ಪ್ರಕರಣದ ಸಂದರ್ಭದಲ್ಲಿ ಓಲೈಕೆ ಮಾಡುವ ನೆಪದಲ್ಲಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು ಹಾಗೂ ಅನೇಕ ಭಾರಿ ಇವರ ವಿರುದ್ಧ ಹಿಂದೂ ಜಾಗರಣಾ ವೇದಿಕೆ ನಾಯಕರು ಗೃಹ ಸಚಿವರು, ಸಂಸದರು , ಶಾಸಕರಿಗೂ ವರ್ಗಾವಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಇದೆಲ್ಲದರ ಫಲಶ್ರುತಿಯಾಗಿ ಇವರನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.