Friday, January 24, 2025
ಸುದ್ದಿ

ವಿಟ್ಲಪಿಂಡಿ; ವೃಂದಾವನಸ್ಥವಾಗಿರುವ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿಯವರ ಸ್ಮರಣಾರ್ಥ ಭಕ್ತರಿಗೆ 15 ಸಾವಿರ ಚಕ್ಕುಲಿ ವಿತರಣೆ –ಕಹಳೆ ನ್ಯೂಸ್

ವಿಟ್ಲಪಿಂಡಿ ಮಹೋತ್ಸವ ಪ್ರಯುಕ್ತ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಹಾಗೂ ಕೆ. ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ ಇವರಿಂದ ವೃಂದಾವನಸ್ಥವಾಗಿರುವ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿಯವರ ಸ್ಮರಣಾರ್ಥ ಭಕ್ತರಿಗೆ 15 ಸಾವಿರ ಚಕ್ಕುಲಿ ವಿತರಣೆ ನಡೆಯಿತು. ಕಾರ್ಯಕ್ರಮಕ್ಕೆ ಶಿರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಅವರ, ಪೂರ್ವಾಶ್ರಮದ ತೀರ್ಥರೂಪರಾದ ಡಾ.ಉದಯ ಸರಳತ್ತಾಯ ಅವರ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಉದ್ಯಮಿ ರಂಜನ್ ಕಲ್ಕೂರ, ಬಡಗುಬೆಟ್ಟು ಕೋ-ಅಪರ್ಟಿವ್ ಸೊಸೈಟಿಯ ಗೌರವ ವ್ಯವಸ್ಥಾಪಕರಾದ ಜಯಕರ್ ಶೆಟ್ಟಿ ಇಂದ್ರಾಳಿ, ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರ ಲಾತಾವ್ಯ ಆಚಾರ್ಯ, ಸಮಾಜಸೇವಕರಾದ ಕೆ.ಕೃಷ್ಣಮೂರ್ತಿ ಆಚಾರ್ಯ, ಭಾಸ್ಕರ್ ಶೇರಿಗಾರ್ ಕಡಿಯಾಳಿ, ಠಾಣಾಧಿಕಾರಿ ನಾರಾಯಣ, ನಾಗರಿಕ ಸಮಿತಿಯ ಕಾರ್ಯಕರ್ತರಾದ ವಾಸುದೇವ ಚಿತ್ಪಾಡಿ, ಕೆ.ಬಾಲಗಂಗಾಧರ ರಾವ್, ತಾರಾನಾಥ ಮೇಸ್ತ ಶಿರೂರು ಉಪಸ್ಥಿತರಿದ್ದರು. ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.