Friday, January 24, 2025
ಸುದ್ದಿ

ಬಿಜೆಪಿಯ ಸಕ್ರಿಯ ಕಾರ್ಯಕರ್ತ ಖಾಲಿದ್ ನಂದಾವರಗೆ ಜೀವಬೆದರಿಕೆ – ಕಹಳೆ ನ್ಯೂಸ್

ಬಂಟ್ವಾಳ : ಬಿಜೆಪಿ ಕಾರ್ಯಕರ್ತ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯರ ಜೀವಬೆದರಿಕೆ ಇರುವ ಬಗ್ಗೆ ಬಂಟ್ವಾಳ ಉಪವಿಭಾಗದ ಡಿವೈಎಸ್‍ಪಿಗೆ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದ.ಕ ಜಿಲ್ಲಾ ವಕ್ಫ್ ಬೋರ್ಡ್ ಸದಸ್ಯ ಖಾಲಿದ್ ನಂದಾವರ ಅವರು ಬಿಜೆಪಿಯ ಸಕ್ರಿಯ ಕಾರ್ಯಕತರು. ಜೊತೆಗೆ ಆರ್ ಟಿಐ ಕಾರ್ಯಕರ್ತ. ಬಂಟ್ವಾಳದಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡ, ಮರಳುಗಾರಿಕೆ ಸೇರಿ ಹಲವು ಅಕ್ರಮಗಳ ವಿರುದ್ಧ ಆಯಾ ಇಲಾಖೆಗೆ ಲಿಖಿತ ದೂರು ನೀಡುತ್ತಿದ್ದರು. ಈ ಬಗ್ಗೆ ಕೊಲ್ಲಿ ರಾಷ್ಟ್ರಗಳಿಂದ ಅವರಿಗೆ ಜೀವಬೆದರಿಕೆ ಕರೆಗಳು ಬರುತ್ತಿತ್ತು.

ಈ ಬಗ್ಗೆ ಹಿಂದೆ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು. ಖಾಲಿದ್ ಅವರ ಸ್ನೇಹಿತರೊಬ್ಬರು ಕರೆ ಮಾಡಿ “ನೀವು ಸ್ವಲ್ಪ ದಿನ ಹುಷಾರಾಗಿರಿ, ನಿಮ್ಮ ಮೇಲೆ ದಾಳಿ ನಡೆಸುವ ಸಂಭವ ಇದೆ” ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಖಾಲಿದ್‌ ಅವರು ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿಗೆ ದೂರು ನೀಡಿದ್ದಾರೆ.