Saturday, November 23, 2024
ಸುದ್ದಿ

ಗಂಭೀರ ಅನಾರೋಗ್ಯಕ್ಕೆ ತುತ್ತಾದ ಉಕ್ಕುಡದ ನವೀನ್ ಕುಮಾರ್: ಸಹೃದಯಿ ದಾನಿಗಳ ಧನಸಹಾಯ ಯಾಚಿಸಿದ ಸ್ನೇಹಿತರು- ಕಹಳೆ ನ್ಯೂಸ್

ಬಂಟ್ವಾಳ : ಬಂಟ್ವಾಳ ತಾಲೂಕಿನ ಅಳಿಕೆ ಗ್ರಾಮದ ಉಕ್ಕುಡ ದರ್ಬೆಯ ನವೀನ್ ಕುಮಾರ್ ಎಂಬವರು ಕಿಡ್ನಿ, ಶ್ವಾಸಕೋಶ, ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದಿನಕ್ಕೆ 10ರಿಂದ 15 ಸಾವಿರದವರೆಗೆ ಚಿಕಿತ್ಸೆಗಾಗಿ ಖರ್ಚು ತಗಲುತ್ತಿದ್ದು, ಇದೀಗ ಇವರ ಕುಟುಂಬಸ್ಥರು ಹಾಗೂ ಸ್ನೇಹಿತರು ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ. ತೀರಾ ಬಡ ಕುಟುಂಬದಲ್ಲಿದ್ದ ನವೀನ್ ರವರು ಇವರು, ಇಡೀ ಕುಟಂಬಕ್ಕೆ ಆಧಾರವಾಗಿದ್ರು, ಎರಡು ವರ್ಷದ ಹಿಂದೆ ಉದ್ಯೋಗದಲ್ಲಿರುವ ಸಮಯ ರಕ್ತ ಪರೀಕ್ಷೆ ಮಾಡುವ ವೇಳೆ ಕಿಡ್ನಿ ವೈಫಲ್ಯದ ಸಮಸ್ಯೆ ಇದೆಯೆಂದು ವೈದ್ಯರು ಸೂಚಿಸಿದ್ದರು. ವೈದ್ಯರ ಸೂಚನೆಯಂತೆ ಎರಡು ವರ್ಷದಿಂದ ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಿಕೊಂಡು ಬರುತ್ತಿದ್ದರು. ಒಂದು ವಾರದ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ ಇವರನ್ನು ಮಂಗಳೂರಿನ ಮಂಗಳ ಹಾಸ್ಪಿಟಲ್ ಮತ್ತು ಕಿಡ್ನಿ ಪೌಂಡೇಶನ್‍ನಲ್ಲಿ ದಾಖಲು ಮಾಡಲಾಗಿದೆ. ವೈದ್ಯರು ಪರೀಕ್ಷಿಸಿದ ನಂತರ ಕಿಡ್ನಿ, ಮೂತ್ರಪಿಂಡ, ಶ್ವಾಸಕೋಶ, ತಲೆ ಸಂಬಂಧಿಸಿದಂತೆ ಸಮಸ್ಯೆ ಇದೆಯೆಂದು ತಿಳಿಸಿದ್ದಾರೆ. ಹೀಗಾಗಿ ದಿನಕ್ಕೆ 10 ರಿಂದ 15 ಸಾವಿರ ರೂಪಾಯಿ ಹಣ ಚಿಕಿತ್ಸೆಗೆ ಬೇಕಾಗಿದ್ದು, ತೀರಾ ಬಡತನದಲ್ಲಿರುವ ಕುಟುಂಬಕ್ಕೆ ಇಷ್ಟೊಂದು ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇವರ ಕುಟುಂಬಕ್ಕೆ ಸಹಾಯವಾಗಲೆಂದು ಯುವಜನ ಸೇವಾ ಟ್ರಸ್ಟ್(ರಿ) ಇದರ ಅಧ್ಯಕ್ಷರು ಮತ್ತು ಸರ್ವಸದಸ್ಯರುಗಳು ಸಂಘ-ಸಂಸ್ಥೆಗಳ, ಸಹೃದಯಿ ದಾನಿಗಳ ಸಹಾಯ ಯಾಚಿಸಿದ್ದಾರೆ.
ಸಹಾಯ ನೀಡಲು ಇಚ್ಚಿಸುವ ದಾನಿಗಳಿಗಾಗಿ…

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Name: Naveen Kumar
A/C Number : 3812500100071001
IFSC code: KARB0000381
KARNATAKA BANK LTD
BRANCH: kepu G.P
Google pay : 9480764030