Sunday, January 19, 2025
ಉಡುಪಿಕುಂದಾಪುರಕ್ರೈಮ್ಭಟ್ಕಳಸುದ್ದಿ

ಕು೦ದಾಪುರದಿ೦ದ ಭಟ್ಕಳಕ್ಕೆ ಕಾರಿನಲ್ಲಿ 150 ಕೆ.ಜಿ ಗೋ ಮಾಂಸ ಸಾಗಾಟ ; ಆರೋಪಿ ಮಹಮ್ಮದ್‌ ಗೌಸ್‌ ಗವಾಯಿ ಅಂದರ್ – ಕಹಳೆ ನ್ಯೂಸ್

Raw beef on a butcher shop shelf

ಬೈಂದೂರು, ಆ 22 : ಕು೦ದಾಪುರದಿ೦ದ ಭಟ್ಕಳಕ್ಕೆ ಗೋಮಾ೦ಸ ಸಾಗಾಟ ಮಾಡುತ್ತಿದ್ದ ನ್ಯಾನೋ ಕಾರನ್ನು ತಡೆದು ನಿಲ್ಲಿಸಿದ ಬೈಂದೂರು ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ಕಾರಿನಿಂದ ಇಳಿದುಪರಾರಿಯಾಗಿರುವ ಘಟನೆ ಬೈ೦ದೂರು ತಾಲೂಕಿನ ಯಡ್ತರೆ ಗ್ರಾಮದ ಹೊಸ ಬಸ್‌ ನಿಲ್ದಾಣದ ಬಳಿ ಆ. 20ರಂದು ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಟ್ಕಳ ನಿವಾಸಿ 37ವರ್ಷದ ಮಹಮ್ಮದ್‌ ಗೌಸ್‌ ಗವಾಯಿ ಬಂಧಿತ ಆರೋಪಿ. ಪರಾರಿಯಾದ ಆರೋಪಿಯನ್ನು ನಜ್ಮುಲ್‌ ಎ೦ದು ತಿಳಿದುಬಂದಿದೆ. ಕಾರಿನಲ್ಲಿ ಸುಮಾರು 22ಸಾವಿರ ರೂ ಮೌಲ್ಯದ 150 ಕೆ.ಜಿ ಗೋ ಮಾಂಸ ಪತ್ತೆಯಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.