Recent Posts

Friday, November 22, 2024
ರಾಷ್ಟ್ರೀಯವಾಣಿಜ್ಯಸುದ್ದಿ

ಗೌರಿ ಗಣೇಶ ಹಬ್ಬದ ಹೊತ್ತಲ್ಲೇ ಸಿಹಿ ಸುದ್ದಿ: ಅಡುಗೆ ಎಣ್ಣೆ, ಆಹಾರ ಪದಾರ್ಥ, ಎಲೆಕ್ಟ್ರಾನಿಕ್ ವಸ್ತುಗಳ ದರ ಇಳಿಕೆ – ಕಹಳೆ ನ್ಯೂಸ್

ನವದೆಹಲಿ: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿರುವ ಹೊತ್ತಲ್ಲೇ ದೇಶದ ಜನತೆಗೆ ಸಿಹಿ ಸುದ್ದಿ ಸಿಕ್ಕಿದೆ. ಖಾದ್ಯ ತೈಲ, ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳ ದರ ಇಳಿಕೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಖಾದ್ಯ ತೈಲದ ದರ ಶೇಕಡ 15 ರಿಂದ 20ರಷ್ಟು ಇಳಿಕೆಯಾಗಿದ್ದು, ಬಿಸ್ಕೆಟ್ ತರ ಶೇಕಡ 10 ರಿಂದ 15 ರಷ್ಟು ಇಳಿಕೆಯಾಗಿದೆ.

ಉತ್ಪಾದನಾ ವೆಚ್ಚ ತಗ್ಗಿರುವುದು, ಕಚ್ಚಾ ವಸ್ತುಗಳ ಬೆಲೆ ಇಳಿಕೆಯಾಗಿರುವುದರಿಂದ ಎಲೆಕ್ಟ್ರಾನಿಕ್ ವಸ್ತುಗಳ ದರ ಕೂಡ ಕಡಿಮೆಯಾಗಿದೆ.

ಪ್ರಮುಖ ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕಾ ಸಂಸ್ಥೆಗಳಾದ ಸ್ಯಾಮ್ಸಂಗ್, ಎಲ್.ಜಿ., ಸೋನಿ ಟಿವಿ ದರ ಶೇಕಡ 5 ರಿಂದ 8 ರಷ್ಟು ಇಳಿಕೆಯಾಗಿದೆ. ಲ್ಯಾಪ್ಟಾಪ್ ದರ 1500 ರೂ. ನಿಂದ 200 ರೂಪಾಯಿವರೆಗೆ ಕಡಿಮೆಯಾಗಿದ್ದು, ಸ್ಮಾರ್ಟ್ ಫೋನ್ ಗಳ ದರ ಶೇಕಡ 4 ರಿಂದ 5 ರಷ್ಟು ಕಡಿಮೆಯಾಗಿದೆ.

ಕೊರೋನಾ ಹತೋಟಿಗೆ ಬಂದಿರುವುದು, ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮ ಕಡಿಮೆಯಾಗಿರುವುದು, ಹಬ್ಬದ ಹೊತ್ತಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಕಂಪನಿಗಳು ಮುಂದಾಗಿರುವುದು, ಕೆಲವು ತೆರಿಗೆ ವಿನಾಯಿತಿಗಳ ಲಾಭ ಗ್ರಾಹಕರಿಗೆ ವರ್ಗಾವಣೆ ಮಾಡಲಾಗುತ್ತಿದ್ದು, ಇದರ ಪರಿಣಾಮ ಆಹಾರ ಪದಾರ್ಥಗಳು, ದಿನ ಬಳಕೆ ವಸ್ತುಗಳ ಜೊತೆಗೆ ಎಲೆಕ್ಟ್ರಾನಿಕ್ ಸಾಮಗ್ರಿಗಳ ದರ ಕೂಡ ಕಡಿಮೆಯಾಗಿದೆ.