ಧರ್ಮಸ್ಥಳದ ನಿತ್ಯಾನಂದ ನಗರದಲ್ಲಿ ಸೆ.3 ರಂದು ” ಧರ್ಮ ಸಂಸದ್ ” ; ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸಾರಥ್ಯ – ಕಹಳೆ ನ್ಯೂಸ್
ಮಂಗಳೂರು: ಧರ್ಮಸ್ಥಳದ ನಿತ್ಯಾನಂದ ನಗರದಲ್ಲಿ ಸೆ.3 ರಂದು ನಡೆಯುವ ಧರ್ಮ ಸಂಸದ್ ಗೆ ಪೂರ್ವತಯಾರಿ ಭರದಿಂದ ಸಾಗುತ್ತಿದೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈಗಾಗಲೇ ಉತ್ತರ ಭಾರತ ಮತ್ತು ದಕ್ಷಿಣ ಭಾರತ ಪ್ರವಾಸವನ್ನು ಕೈಗೊಳ್ಳಲಾಗಿದ್ದು, 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಸೆ .2 ರಂದು ಹಿಮಾಲಯ ಹಾಗೂ ಭಾರತದ ವಿವಿಧ ಭಾಗಗಳಿಂದ ಸಾದು ಸಂತರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಸೆ.೩ ರಂದು ಬೆಳಗ್ಗೆ 7 ರಿಂದ ಶ್ರೀ ರಾಮ ತಾರಕ ಮಂತ್ರ ಯಜ್ಞ ಹಿಮಾಲಯದ ಸಾದು ಸಂತರ ಶೋಭಾಯಾತ್ರೆ ಸ್ವಾಮೀಜಿಯವರ 10ನೇ ವರ್ಷದ ಪಟ್ಟಾಭಿಷೇಕ ಪೀಠಾರೋಹಣ, ಧರ್ಮ ಸಂಸದ್ ನ ಉದ್ಘಾಟನೆ ಜರಗಲಿದೆ.
ಪೇಜಾವರ ಶ್ರೀ ಡಾ| ಡಿ. ವಿರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ , ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಮಾಜಿ ಮುಖ್ಯಮಮತ್ರಿಗಳಾದ ಯಡಿಯೂರಪ್ಪ , ಸಿದ್ದರಾಮಯ್ಯ ಅವರನ್ನು ಅಹ್ವಾನಿಸಲಾಗಿದೆ. ಬದರಿ, ಕೇದಾರ , ಗಂಗೋತ್ರಿ,ನೈಮೀಶಾರಣ್ಯ, ಚಿತ್ರಕೂಟ , ಉಜ್ಜೈನಿ, ಅಲಹಾಬಾದ್, ನಾಸಿಕ್, ರಾಮೇಶ್ವರ್, ಅಸ್ಸಾಂ , ಕೇರಳ , ತಮಿಳುನಾಡು,ಸೇರಿದಂತೆ ದೇಶ ವಿದೇಶದಿಂದ ಸಾವಿರಕ್ಕೂ ಅಧಿಕ ಸಾದು ಸಂತರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
ದೇಶದಲ್ಲಿ ಮುಂದಿನ ಹತ್ತು ವರ್ಷಗಳೂ ಪ್ರತಿ ಹಳ್ಳಿಯಲ್ಲಿ ಗುರುಕುಲ ಮಾದರಿಯ ಅಂಗನವಾಡಿ, ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸುವುದು, ಪ್ರಾಥಮಿಕ ಶಾಲೆಯಿಂದ ಕಾಲೇಜು ತನಕ ಪಠ್ಯಗಳಲ್ಲಿ ನಮ್ಮ ಇತಿಹಾಸ ಪರಂಪರೆ , ಶ್ರೇಷ್ಠ ಮಾನವ ಧರ್ಮ , ಸನಾತನ ಹಿಂದೂ ಧರ್ಮದ ಮಹತ್ವ ಗಳನ್ನು ತಿಳಿಸಲು ಒತ್ತಾಯ , ಪರಿವ್ರಾಜಕ, ತೀರ್ಥಕ್ಷೇತ್ರ ತಿರುಗಾಡುವ ಸಂತರು , ವಯೋವೃದ್ಧ ಸಂತರ ಜೀವನಕ್ಕೆ ಭದೃತೆ ಕಲ್ಪಿಸುವ ನಿಟ್ಟಿನಲ್ಲಿ ಒತ್ತಾಯಿಸುವುದು ಮುಂತಾದವು ಧರ್ಮ ಸಂಸದ್ ನ ಪ್ರಮುಖ ಉದ್ದೇಶವಾಗಿದೆ ಎಂದು ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
ಶ್ರೀ ಕ್ಷೇತ್ರ ಕನ್ಯಾಡಿಯ ಟ್ರಸ್ಟಿಗಳಾದ ಮೋಹನ್ ಉಜ್ಜೋಡಿ, ಚಿತ್ತರಂಜನ್ ಗರೋಡಿ, ರೋಹಿತ್ ಪೂಜಾರಿ, ತುಕರಾಮ್, ಕೃಷ್ಣಪ್ಪ ಗುಡಿಗಾರ್, ಧರ್ಮ ಸಂಸದ್ ಸಮಿತಿಯ ಸಂಚಾಲಕ ಸತ್ಯಜಿತ್ ಸುರತ್ಕಲ್, ಸಂತ ಒಕ್ಕೂಟ ಸಮಿತಿಯ ಸಂಚಾಲಕ ಪ್ರವೀಣ್ ವಾಲ್ಕೆ, ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ, ಸೋಶಿಯಲ್ ಮೀಡಿಯಾ ಪ್ರಧಾನ ಸಂಚಾಲಕ ಕಿರಣ್ ಕುಮಾರ್ , ರವಿ ಪೂಜಾರಿ ಚಿಲಿಂಬಿ, ಮೊದಲಾದವರು ಉಪಸ್ಥಿತರಿದ್ದರು.