Recent Posts

Monday, January 20, 2025
ಸುದ್ದಿ

ಲಂಗ-ದಾವಣಿ ತೊಟ್ಟು ಹಳೆಯ ರಾಮಚಾರಿ ಸಿನಿಮಾದ ಎವರ್‌ಗ್ರೀನ್ ಸೂಪರ್ ಹಿಟ್ ಹಾಡಿಗೆ ಹೆಜ್ಜೆ ಹಾಕಿದ ಟಿಕ್ ಟಾಕ್ ಸ್ಟಾರ್ ನಿವೇದಿತಾ ಗೌಡ – ಕಹಳೆ ನ್ಯೂಸ್

ಬಿಗ್‌ಬಾಸ್ ಕನ್ನಡದಲ್ಲಿ ಮಿಂಚಿದ ಟಿಕ್‌ಟಾಕ್ ಸ್ಟಾರ್ ನಿವೇದಿತಾ ಗೌಡ ಅಭಿಮಾನಿಗಳೊಂದಿಗೆ ಯಾವಾಗಲೂ ಸಂಪರ್ಕದಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾ ಮೂಲಕ ಯಾವಾಗಲೂ ಅಭಿಮಾನಿಗಳೊಂದಿಗೆ ಟಚ್‌ನಲ್ಲಿ ಇರುವ ನಟಿ ಅವರ ಫಾಲೋವರ್ಸ್ಗಳನ್ನು ಎಂದೂ ನಿರಾಸೆಗೊಳಿಸಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರ ವಾಲ್ ತುಂಬಾ ಚಂದದ ವಿಡಿಯೋ, ರೀಲ್ಸ್, ಫೋಟೋಸ್ ತುಂಬಿವೆ. ಅಭಿಮಾನಿಗಳು ನಿವೇದಿತಾ ಪೋಸ್ಟ್ ಮಾಡುವ ಕಂಟೆಂಟ್‍ಗಳನ್ನು ಇಷ್ಟಪಟ್ಟು ನೋಡುತ್ತಾರೆ. ಅವರ ವಿಡಿಯೋ, ರೀಲ್ಸ್ ಗಳನ್ನು ಲೈಕ್ ಮಾಡಿ, ಕಮೆಂಟ್ ಮಾಡಿ ಶೇರ್ ಮಾಡುತ್ತಾರೆ.

ನಿವೇದಿತಾ ಅವರು ಫನ್ನಿ ವಿಡಿಯೋ, ಚಂದದ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕುತ್ತಾರೆ. ಇದೀಗ ಹಳೆಯ ಸಿನಿಮಾ ರಾಮಾಚಾರಿ ಹಾಡಿಗೆ ದೇಸಿ ಗರ್ಲ್ ಲುಕ್‌ನಲ್ಲಿ ಹೆಜ್ಜೆ ಹಾಕಿದ್ದು ಇದನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಹಸಿರು ದಾವಣಿ
ಪ್ರಿಂಟೆಡ್ ಲಂಗದ ಜೊತೆ ಹಸಿರು ದಾವಣಿಯನ್ನು ಮ್ಯಾಚ್ ಮಾಡಿಕೊಂಡ ನಿವೇದಿತಾ ಗೌಡ ಸುಂದರವಾಗಿ ಹಳ್ಳಿ ಹುಡುಗಿಯಂತೆ ಜಡೆ ಹೆಣೆದು ಕೈ ತುಂಬಾ ಬಳೆಗಳನ್ನು ಕೂಡಾ ಧರಿಸಿದ್ದರು. ಹಣೆಗೊಂದು ಬೊಟ್ಟು ಇಟ್ಟು ತುಂಬಾ ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸು ಗೆದ್ದಿದ್ದಾರೆ.

ಹಚ್ಚ ಹಸಿರಿನ ಪರಿಸರ
ನಿವೇದಿತಾ ಗೌಡ ಅವರು ಸುತ್ತ ತೆಂಗಿನ ತೋಟ, ಸುತ್ತಲೂ ಹಸಿರು ಗದ್ದೆ ಆವರಿಸಿಕೊಂಡಿರುವ ಸ್ಥಳದ ಮಧ್ಯೆ ನಿಂತು ರೀಲ್ಸ್ ಮಾಡಿದ್ದು ಇದರಲ್ಲಿ ನಿವೇದಿತಾ ಅವರ ಜೊತೆ ಜೊತೆಗೆ ಅವರು ಇದ್ದಂತಹ ಸ್ಥಳ ಕೂಡಾ ಗಮನ ಸೆಳೆಯುತ್ತದೆ.

ಆಕಾಶದಾಗೆ ಯಾರೊ ಮಾಯಗಾರನು ಹಾಡು
ಆಕಾಶದಾಗೆ ಯಾರೋ ಮಾಯಗಾರನು ರಾಮಚಾರಿ ಸಿನಿಮಾದ ಎವರ್‌ಗ್ರೀನ್ ಸೂಪರ್ ಹಿಟ್ ಹಾಡು. ಅಂದೂ ಇಂದು ಈ ಹಾಡು ತುಂಬಾ ಫೇಮಸ್. ಬಹಳಷ್ಟು ಜನರಿಗೆ ತುಂಬಾ ಫೇವರೇಟ್ ಹಾಡು ಇದು. ವಿ. ರವಿಚಂದ್ರನ್ ಹಾಗೂ ಮಾಲಾಶ್ರೀ ಅಭಿನಯಿಸಿದ ರಾಮಚಾರಿ ಸಿನಿಮಾ 1991ರಲ್ಲಿ ರಿಲೀಸ್ ಆಗಿತ್ತು. ಆಕಾಶದಾಗೆ ಯಾರೋ ಹಾಡನ್ನು ಮನೋ ಹಾಗೂ ಎಸ್ ಜಾನಕಿ ಹಾಡಿದ್ದಾರೆ.