Sunday, January 19, 2025
ಕ್ರೈಮ್ರಾಜಕೀಯರಾಷ್ಟ್ರೀಯಸಿನಿಮಾಸುದ್ದಿ

ಅತ್ಯಾಚಾರ ಎಸಗಿ ಬಿಜೆಪಿ ನಾಯಕಿ ಸೊನಾಲಿ ಕೊಲೆ? ಬೆಳಿಗ್ಗೆ ಬಂದ ಕರೆಯೇ ಅನುಮಾನಕ್ಕೆ ದಾರಿ! – ಕಹಳೆ ನ್ಯೂಸ್

ನವದೆಹಲಿ: ಬಿಗ್ ಬಾಸ್ ಕಾರ್ಯಕ್ರಮದ ಮಾಜಿ ತಾರೆ ಹಾಗೂ ಬಿಜೆಪಿ ನಾಯಕಿ ಸೊನಾಲಿ ಪೋಗಟ್ ಅವರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ ಎಂದು ಅವರ ಸೋದರ ರಿಂಕು ಧಾಕಾ ಆರೋಪಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

42 ವರ್ಷದ ಪೋಗಟ್ ಗೋವಾದ ಪಣಜಿಯಲ್ಲಿ ಸೋಮವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು.

ಆದರೆ, ಇದರಲ್ಲೇನೋ ‘ಮೋಸ ನಡೆದಿದೆ’ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಗಟ್​ರನ್ನು ಅವರ ಇಬ್ಬರು ಸಹೋದ್ಯೋಗಿಗಳು ಕೊಲೆ ಮಾಡಿದ್ದಾರೆ ಎಂದು ಗೋವಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ರಿಂಕು ಹೇಳಿದ್ದಾರೆ. ಅಲ್ಲದೆ, ಸೋದರಿಯ ಆಪ್ತ ಸಹಾಯಕ ಸುಧೀರ್ ಸಂಗ್ವಾನ್ ವಿರುದ್ಧ ರಿಂಕು ತಮ್ಮ ದೂರಿನಲ್ಲಿ ಕೆಲವು ಗಂಭೀರ ಆರೋಪ ಮಾಡಿದ್ದಾರೆ.

ಸೊನಾಲಿ ಅವರ ಮತ್ತೊಬ್ಬ ಸಹೋದರ ವತನ್​ ಧಾಕಾ ಮಾಧ್ಯಮದ ಜೊತೆ ಮಾತನಾಡಿದ್ದು, ಆ.23ರ ಬೆಳಗ್ಗೆ 8 ಗಂಟೆಗೆ ಸುಧೀರ್ ಸಂಗ್ವಾನ್​ನಿಂದ ನನಗೆ ಕರೆ ಬಂತು. ರಾತ್ರಿ 2 ಗಂಟೆಗೆ ನಿಮ್ಮ ಸೋದರಿ ಕುಸಿದು ಬಿದ್ದರು ಎಂದು ಹೇಳಿದರು. ಘಟನೆ ನಡೆದ ಸಮಯದಲ್ಲೇ ನಮಗೆ ಏಕೆ ಕರೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಕ್ಕೆ, ಪ್ರತಿ ಬಾರಿಯೂ ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದರು. ಹೀಗಾಗಿಯೇ ಅಲ್ಲಿ ಏನೋ ತಪ್ಪಾಗಿದೆ ಎಂದು ನಾವು ಭಾವಿಸಿದೆವು. 2 ಗಂಟೆಗೆ ಆಕೆ ಕುಸಿದುಬಿದ್ದಿದ್ದಾಳೆ. ಆ ಕ್ಷಣದಲ್ಲಿ ಅವರು ನಮಗೇಕೆ ಕರೆ ಮಾಡಲಿಲ್ಲ? ಅವಳು ಸತ್ತ ನಂತರ ನಮಗೆ ಕರೆ ಮಾಡಿದರು ಎಂದು ವತನ್​ ಧಾಕಾ ಅನುಮಾನ ವ್ಯಕ್ತಪಡಿಸಿದ್ದಾರೆ.

ನಾವು ಕೊನೆಯ ಬಾರಿ ಸೊನಾಲಿಯೊಂದಿಗೆ ಮಾತನಾಡುವಾಗ, ಅವಳು ಆರೋಗ್ಯ ಸರಿಯಿಲ್ಲ ಎಂದೆನಿಸುತ್ತಿದೆ ಎಂದಳು. ಅವಳು ತಿಂದ ಆಹಾರದಲ್ಲಿ ಏನನ್ನಾದರೂ ಸೇರಿಸಿರಬಹುದು. ಆರೋಗ್ಯ ಸರಿಯಿಲ್ಲ ಆಸ್ಪತ್ರೆಗೆ ಹೀಗುತ್ತಿದ್ದೇನೆ ಎಂದು ನಮ್ಮ ತಾಯಿಗೆ ಕರೆ ಮಾಡಿ ಹೇಳಿದಳು ಎಂದು ವತನ್​ ಧಾಕಾ ಮಾಹಿತಿ ನೀಡಿದರು.

ಈ ಪ್ರಕರಣದ ಕುರಿತು ಸಿಬಿಐ ತನಿಖೆಯಾಗಬೇಕು. ಇದು ಹೃದಯಾಘಾತವಲ್ಲ, ಕೊಲೆ. ಪೊಲೀಸರು ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸುತ್ತಿಲ್ಲ ಎಂದು ಆರೋಪ ಮಾಡಿದ ರಿಂಕು, ಆ ಸಮಯದಲ್ಲಿ ಆಕೆಯ ಜೊತೆಗಿದ್ದ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ವತನ್​ ಧಾಕಾ ಒತ್ತಾಯಿಸಿದ್ದಾರೆ.

ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಪೋಗಟ್ ಸಾವಿನ ಕುರಿತು ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸೋನಾಲಿ ಫೋಗಟ್​ 2019ರಲ್ಲಿ ಹರಿಯಾಣದ ಅದಂಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಕುಲ್​ದೀಪ್ ಬಿಷ್ಣೊಯ್ ಎದುರು ಸೋತಿದ್ದರು. ಕಳೆದ ತಿಂಗಳು ಕುಲ್​ದೀಪ್​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದು, ಉಪ ಚುನಾವಣೆಯಲ್ಲಿ ಸೋನಾಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿತ್ತು.

ಟಿಕ್​ ಟಾಕ್ ವಿಡಿಯೋ ಮೂಲಕ ಜನಪ್ರಿಯತೆ ಪಡೆದಿದ್ದ ಸೋನಾಲಿ, ಟಿವಿ ನಿರೂಪಕಿ ಆಗಿದ್ದರು. ನಂತರ ಬಿಜೆಪಿಗೆ ಸೇರಿ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ಕಿರುತೆರೆ, ವೆಬ್ ಸೀರಿಸ್​ಗಳಲ್ಲಿ ನಟಿಸಿದ್ದ ಈಕೆ, 2020ರಲ್ಲಿ ಬಿಗ್​​ಬಾಸ್​ನಲ್ಲಿ ಸ್ಪರ್ಧಿಯಾಗಿದ್ದರು. ಈಕೆ ಪುತ್ರಿ ಯಶೋಧರ ಫೋಗಟ್ ಅವರನ್ನು ಅಗಲಿದ್ದಾರೆ. ದುರಂತವೆಂದರೆ ಸೋನಾಲಿ ಪತಿ ಸಂಜಯ್ ಫೋಗಟ್​​ ತನ್ನ 42ನೇ ವಯಸ್ಸಿನಲ್ಲಿ ಅಂದರೆ 2016ರಲ್ಲಿ ಫಾರ್ಮ್​ಹೌಸ್​​ನಲ್ಲಿ ಸಾವಿಗೀಡಾಗಿದ್ದರು. (ಏಜೆನ್ಸೀಸ್​)