Friday, September 20, 2024
ಸುದ್ದಿ

ಹಲವೆಡೆ ಸಿದ್ದವಾದ ಕೆತ್ತನೆ ಕಲ್ಲುಗಳನ್ನು ತಂದು ಜೋಡಿಸಿದರೆ ರಾಮ ಮಂದಿರ ಪೂರ್ಣ ; ಪೇಜಾವರ ಶ್ರೀ ಹೇಳಿಕೆ – ಕಹಳೆ ನ್ಯೂಸ್

ಬಾಗಲಕೋಟೆ, ಜು 11: ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿ ಹತ್ತಾರು ವರ್ಷ ಉರುಳಿದಿದೆ. ಒಬ್ಬ ದಲಿತ ವ್ಯಕ್ತಿಯಿಂದ ಅಂದು ಮಂದಿರಕ್ಕೆ ಅಡಿಗಲ್ಲು ಹಾಕಿಸಿದ್ದೇವೆ. ಈಗ ಮತ್ತೊಮ್ಮೆ ಅಡಿಗಲ್ಲು ಹಾಕಬೇಕಾಗಿಲ್ಲ ಎಂದು ಉಡುಪಿ ಶ್ರೀ ಕೃಷ್ಣ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪೇಜಾವರ ಶ್ರೀಗಳು , ಈಗಾಗಲೇ ರಾಮ ಮಂದಿರ ನಿರ್ಮಾಣ ಕೆಲಸ ಹಲವೆಡೆಯಲ್ಲಿ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಅಲ್ಲಿ ಸಿದ್ದಪಡಿಸುತ್ತಿರುವ ಕಲ್ಲುಗಳನ್ನು, ಕೆತ್ತನೆಗಳನ್ನು ತಂದು ಜೋಡಿಸಿದರೆ ಮಂದಿರ ನಿರ್ಮಾಣ ಕಾರ್ಯ ಮುಗಿದಂತೆ ಎಂದಿದ್ದಾರೆ. ಆದರೆ ಮಂದಿರ ನಿರ್ಮಾಣಕ್ಕೆ ಕಡಿಮೆ ಜಾಗ ಸಿಕ್ಕಿದೆ ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಅದು ಇತ್ಯರ್ಥವಾಗುವವರೆಗೆ ನಾವು ಯಾವುದೇ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ ಎಂದರು. ವೀರಶೈವ – ಲಿಂಗಾಯಿತರು ಪ್ರತ್ಯೇಕ ಆಗಬಾರದು. ಅವರು ಒಂದಾಗಿರಬೇಕು . ತಮ್ಮದು ಜೋಡಿಸುವ ಕೆಲಸ .ಪ್ರತ್ಯೇಕತೆಗೆ ಬೆಂಬಲವಿಲ್ಲ ಎನ್ನುವುದು ತಮ್ಮ ಸ್ಪಷ್ಟ ನಿಲುವು ಎಂದು ಶ್ರೀಗಳು ತಿಳಿಸಿದರು.