Sunday, January 19, 2025
ಸುದ್ದಿ

ಸುಬ್ರಹ್ಮಣ್ಯ: ಮಂಡ್ಯದ ಯುವಕ ನೀರಿನಲ್ಲಿ ಕೊಚ್ಚಿ ಹೋದ ಘಟನೆ: ಕುಮಾರಧಾರದಿಂದ 1.5 ಕಿ.ಮೀ. ದೂರದಲ್ಲಿ ಶವ ಪತ್ತೆ – ಕಹಳೆ ನ್ಯೂಸ್ 

ಸುಬ್ರಹ್ಮಣ್ಯ: ಮಂಡ್ಯದ ಸ್ವಾಮಿ ಎಂಬ ಯುವಕ ಆ.21 ರಂದು ಕುಮಾರಧಾರ ಸ್ನಾನಘಟ್ಟದಲ್ಲಿ ಸ್ನಾನಕ್ಕಿಳಿದಿದ್ದ ವೇಳೆ ನಾಪತ್ತೆಯಾಗಿದ್ದ. ಮೂರು ದಿನಗಳಿಂದ ಅಗ್ನಿಶಾಮಕ ಹಾಗೂ ಈಜು ತಜ್ಞರ ತಂಡ ಹುಡುಕಾಟ ನಡೆಸಿದರೂ ಶವ ದೊರಕಿರಲಿಲ್ಲ. ಇದೀಗ ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸತತ ಪ್ರಯತ್ನದ ಫಲವಾಗಿ ಕುಮಾರಧಾರದಿಂದ ಒಂದೂವರೆ ಕಿ.ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರವಿ ಕಕ್ಕೆಪದವು, ಪ್ರಧಾನ್ ಕಟ್ಟೆಮನೆ, ಸೋಮಶೇಖರ ಕಟ್ಟೆಮನೆ, ನವೀನ ವಾಡ್ಯಪ್ಪನ ಮನೆ, ಧನ್ ರಾಜ್ ಕಿರಿಭಾಗ, ಕಾರ್ತಿಕ್ ವಾಡ್ಯಪ್ಪನ ಮನೆ, ಯೋಗೀಶ್ ಮೆತ್ತಡ್ಕ, ನಿತಿನ್ ಪರ್ವತಮುಖಿ ಈಜುಗಾರರಾಗಿ ಸಹಕರಿಸಿದರು.