Monday, January 20, 2025
ಸಿನಿಮಾ

‘ನನ್ಗೆ ಮದುವೆ ಬೇಡ, ‘ಬಾಯ್ ಫ್ರೆಂಡ್’ ಬೇಕು ; ನಟಿಮಣಿಯ ಶಾಕಿಂಗ್ ಹೇಳಿಕೆ ಸಖತ್ ವೈರಲ್..!- ಕಹಳೆ ನ್ಯೂಸ್

ಚಲನಚಿತ್ರದ ಅವಕಾಶಗಳು ಕಡಿಮೆಯಾದ್ರೂ, ಅನಿರೀಕ್ಷಿತ ಮಟ್ಟದ ಕ್ರೇಜ್ ಮತ್ತು ಜನಪ್ರಿಯತೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಮೂಲಕ ಸುರೇಖಾವಾಣಿ ಸುದ್ದಿಯಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ನೀಡಿದ ಶಾಕಿಂಗ್ ಹೇಳಿಕೆಯೊಂದು ಈಗ ಸಖತ್ ವೈರಲ್ ಆಗುತ್ತಿದ್ದು, ಆಧುನಿಕ ಉಡುಗೆಗಳಲ್ಲಿ ಸುರೇಖಾ ವಾಣಿ ಹಂಚಿಕೊಂಡಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗುತ್ತಿವೆ. ‘ಸದ್ಯಕ್ಕೆ ನನಗೆ ಎರಡನೇ ಮದುವೆ ಬಗ್ಗೆ ಆಸಕ್ತಿಯಿಲ್ಲ. ಆದ್ರೆ, ನನ್ನ ಮಗಳು ಸುಪ್ರಿತಾ ನಾನು ಎರಡನೇ ಬಾರಿಗೆ ಮದುವೆಯಾಗಬೇಕೆಂದು ಸೂಚಿಸುತ್ತಿದ್ದಾಳೆ’ ಇನ್ನು ‘ನಾನು ಈಗ ಎರಡನೇ ಬಾರಿಗೆ ಮದುವೆಯಾಗುವ ಯಾವುದೇ ಯೋಜನೆಯನ್ನ ಹೊಂದಿಲ್ಲ ಮತ್ತು ಭವಿಷ್ಯದಲ್ಲಿ ನಾನು ಅದನ್ನ ಮಾಡುತ್ತೇನೆಯೇ ಗೊತ್ತಿಲ್ಲ’ ಎಂದು ವಾಣಿ ಹೇಳಿದ್ದಾರೆ.

ಸಧ್ಯಕ್ಕೆ ನನಗೆ ನನ್ನನ್ನ ಚೆನ್ನಾಗಿ ಅರ್ಥಮಾಡಿಕೊಳ್ಳುವ ಒಬ್ಬ ವ್ಯಕ್ತಿ ನನ್ನ ಗೆಳೆಯನಾಗಬೇಕು. ನಾನು ಕೂಡ ಅವ್ರನ್ನ ಚೆನ್ನಾಗಿ ಅರ್ಥಮಾಡಿಕೊಳ್ಳಲು ಬಯಸುತ್ತೇನೆ. ಒಂದ್ವೇಳೆ ಅಂತಾ ವ್ಯಕ್ತಿ ಸಿಕ್ಕರೇ ನಾನು ಅವ್ರನ್ನ ಇಷ್ಟಪಟ್ಟರೆ, ಮದುವೆಯಾಗುತ್ತೇನೆ’ ಎಂದಿದ್ದಾರೆ. ನಟಿಮಣಿಯ ಈ ಹೇಳಿಕೆಯನ್ನ ಕೆಲವು ನೆಟ್ಟಿಗರು ಶ್ಲಾಘಿಸುತ್ತಿದ್ದರೆ, ಕೆಲವು ನೆಟ್ಟಿಗರು ಅವರನ್ನ ಟ್ರೋಲ್ ಮಾಡುತ್ತಿದ್ದಾರೆ.