Saturday, November 23, 2024
ಸುದ್ದಿ

ಸಾರ್ವಜನಿಕ ಗಣೇಶೋತ್ಸದ ವಿಸರ್ಜನೆಯ ವ್ಯವಸ್ಥೆಯನ್ನು ಆದರ್ಶ ರೀತಿಯಲ್ಲಿ ಮಾಡಲು ಮಂಗಳೂರು ಪುರಸಭೆಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ !- ಕಹಳೆ ನ್ಯೂಸ್

ಮಂಗಳೂರು : ಗಣೇಶ ಚತುರ್ಥಿಯ ವೇಳೆ ಸಾರ್ವಜನಿಕ ಗಣೇಶೋತ್ಸವವನ್ನು ಬಹುದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಸಡಗರ ಸಂಭ್ರಮದಿಂದ ಆಚರಣೆಯನ್ನು ಮಾಡುವ ಈ ಉತ್ಸವದಲ್ಲಿ, ಗಣೇಶನ ವಿಸರ್ಜನೆಯ ವಿಷಯ ಬಂದಾಗ, ನಮ್ಮಲ್ಲಿ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ವಿಸರ್ಜನೆ ಮಾಡುವುದರ ಉತ್ತಮ ವ್ಯವಸ್ಥೆ ಇಲ್ಲದ ಕಾರಣ, ಗಣೇಶನ ಅಪಮಾನವನ್ನು ಸಹ ನೋಡಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಬದಲಿಸಿ ಶಾಸ್ತ್ರದಲ್ಲಿ ಹೇಳಿದಂತೆ ಗಣೇಶ ವಿಸರ್ಜನೆಗೆ ಉತ್ತಮ ಮತ್ತು ಸುರಕ್ಷಿತ ವ್ಯವಸ್ಥೆ ಮಾಡಿಕೊಡಬೇಕೆಂದು ಉದ್ದೇಶಿಸಿ ಮಂಗಳೂರು ಮಹಾನಗರ ಪಾಲಿಕೆಯ ಡೆಪ್ಯೂಟಿ ಆಯುಕ್ತರಾದಂತ ರವಿಕುಮಾರ್ ಇವರಿಗೆ ಮನವಿ ಯನ್ನು ನೀಡಲಾಯಿತು !

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮನವಿಯಲ್ಲಿ ಹಿಂದೂ ಧರ್ಮಶಾಸ್ತ್ರದಂತೆ ಗಣೇಶನ ಮೂರ್ತಿಯ ವಿಸರ್ಜನೆಯನ್ನು ಹರಿಯುವ ನೀರಿನಲ್ಲಿ ಮಾಡಬೇಕೆಂದಿದೆ. ಆದರೆ ಕೆಲವರು ಇದರ ಬಗ್ಗೆ ಪರಿಸರ ಮಾಲಿನ್ಯದ ನೆಪವೊಡ್ಡಿ ಹರಿಯುವ ನೀರಿನಲ್ಲಿ ವಿಸರ್ಜಿಸುವ ಬದಲು ಕೆರೆ ಮತ್ತು ಸರೋವರಗಳಲ್ಲಿ ಹಾಗೂ ಕೃತಕ (ಮೊಬೈಲ) ಟ್ಯಾಂಕ್ ವ್ಯವಸ್ಥೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡಲಾಗುತ್ತದೆ.ಸರಕಾರವು ಇದರ ಬಗ್ಗೆ ಗಮನವಹಿಸಿ ಹರಿಯುವ ನೀರಿನಲ್ಲಿ ಗಣೇಶ ವಿಸರ್ಜನೆಯ ವ್ಯವಸ್ಥೆ ಮಾಡಿಕೊಡಬೇಕು ಜೊತೆಗೆ ಈ ವೇಳೆಯಲ್ಲಿ ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಮನಹರಿಸಬೇಕು. ಮೂರ್ತಿಕಾರರಿಗೆ ಪ್ಲಾಸ್ಟರ್ ಆಫ್ ಪ್ಯಾರೀಸ್ ನ ಮೂರ್ತಿ ಮಾಡದೇ ಮಣ್ಣಿನ ಮೂರ್ತಿಯನ್ನೇ ಮಾಡುವಂತೆ ಪ್ರೇರೇಪಿಸಿ ಅದಕ್ಕಾಗಿ ಅವರಿಗೆ ಸರಕಾರದ ವತಿಯಿಂದ ಅನುದಾನ ನೀಡಬೇಕು ಎಂದು ಆಗ್ರಹಿಸಲಾಯಿತು.

ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆಯನ್ನು ಆದರ್ಶ ರೀತಿಯಲ್ಲಿ ವ್ಯವಸ್ಥೆ ಮಾಡುವ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ ಕೊಡಲಾಯಿತು. ಈ ಸಂಧರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಸರ್ವಶ್ರೀ ವಿವೇಕ್ ಪೈ, ಸುಪಣ್ಣ, ರಾಜೇಶ್ ಆಚಾರ್ಯ ಪ್ರಭಾಕರ್ ನಾಯಕ್ , ಶನೇಶ್ವರ ಸೇವಾ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಸುಬ್ರಹ್ಮಣ್ಯ ರೆಡ್ಡಿ ಧರ್ಮ ಪ್ರೇಮಿಗಳಾದ ಶ್ರೀ ರೂಪೇಶ್ ರೈ .ಶ್ರೀ ಸುರೇಶ್ ಕೊಣಾಜೆ. ಶ್ರೀ ರಮೇಶ್ ಕುಮಾರ್. ಶ್ರೀ ಕಿಶೋರ್ ಕುಮಾರ್. ಉಳ್ಳಾಲ ಶ್ರೀ ಸುನಿಲ್ ಕುರ್ನಾಡ್, ಉಪಸ್ಥಿತರಿದ್ದರು