ಸಾರ್ವಜನಿಕ ಗಣೇಶೋತ್ಸದ ವಿಸರ್ಜನೆಯ ವ್ಯವಸ್ಥೆಯನ್ನು ಆದರ್ಶ ರೀತಿಯಲ್ಲಿ ಮಾಡಲು ಬೆಳ್ತಂಗಡಿ ಪುರಸಭೆಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ !- ಕಹಳೆ ನ್ಯೂಸ್
ಬೆಳ್ತಂಗಡಿ : ಗಣೇಶ ಚತುರ್ಥಿಯ ವೇಳೆ ಸಾರ್ವಜನಿಕ ಗಣೇಶೋತ್ಸವವನ್ನು ಬಹುದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಸಡಗರ ಸಂಭ್ರಮದಿಂದ ಆಚರಣೆಯನ್ನು ಮಾಡುವ ಈ ಉತ್ಸವದಲ್ಲಿ, ಗಣೇಶನ ವಿಸರ್ಜನೆಯ ವಿಷಯ ಬಂದಾಗ, ನಮ್ಮಲ್ಲಿ ಧರ್ಮಶಾಸ್ತ್ರದಲ್ಲಿ ಹೇಳಿರುವಂತೆ ವಿಸರ್ಜನೆ ಮಾಡುವುದರ ಉತ್ತಮ ವ್ಯವಸ್ಥೆ ಇಲ್ಲದ ಕಾರಣ, ಗಣೇಶನ ಅಪಮಾನವನ್ನು ಸಹ ನೋಡಬೇಕಾಗುತ್ತದೆ. ಈ ವ್ಯವಸ್ಥೆಯನ್ನು ಬದಲಿಸಿ ಶಾಸ್ತ್ರದಲ್ಲಿ ಹೇಳಿದಂತೆ ಗಣೇಶ ವಿಸರ್ಜನೆಗೆ ಉತ್ತಮ ಮತ್ತು ಸುರಕ್ಷಿತ ವ್ಯವಸ್ಥೆ ಮಾಡಿಕೊಡಬೇಕೆಂದು ಉದ್ದೇಶಿಸಿ ಬೆಳ್ತಂಗಡಿ ತಾಲೂಕಿನ ಉಪ ತಹಶೀಲ್ದಾರ್ ಶ್ರೀಮತಿ ಕೆ. ಜಯ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಸಂಘಟನಾ ಸಂಯೋಜಕಿ ಶ್ರೀಮತಿ ಮಿಟಿಲ್ಡ ಡಿ ಕೋಸ್ತ ಇವರಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮನವಿ ನೀಡಲಾಯಿತು !
ಈ ಮನವಿಯಲ್ಲಿ ಹಿಂದೂ ಧರ್ಮಶಾಸ್ತ್ರದಂತೆ ಗಣೇಶನ ಮೂರ್ತಿಯ ವಿಸರ್ಜನೆಯನ್ನು ಹರಿಯುವ ನೀರಿನಲ್ಲಿ ಮಾಡಬೇಕೆಂದಿದೆ. ಆದರೆ ಕೆಲವರು ಇದರ ಬಗ್ಗೆ ಪರಿಸರ ಮಾಲಿನ್ಯದ ನೆಪವೊಡ್ಡಿ ಹರಿಯುವ ನೀರಿನಲ್ಲಿ ವಿಸರ್ಜಿಸುವ ಬದಲು ಕೆರೆ ಮತ್ತು ಸರೋವರಗಳಲ್ಲಿ ಹಾಗೂ ಕೃತಕ (ಮೊಬೈಲ) ಟ್ಯಾಂಕ್ ವ್ಯವಸ್ಥೆಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮಾಡಲಾಗುತ್ತದೆ. ಸರಕಾರವು ಇದರ ಬಗ್ಗೆ ಗಮನವಹಿಸಿ ಹರಿಯುವ ನೀರಿನಲ್ಲಿ ಗಣೇಶ ವಿಸರ್ಜನೆಯ ವ್ಯವಸ್ಥೆ ಮಾಡಿಕೊಡಬೇಕು ಜೊತೆಗೆ ಈ ವೇಳೆಯಲ್ಲಿ ಅಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಗಮನಹರಿಸಬೇಕು. ಮೂರ್ತಿಕಾರರಿಗೆ ಪ್ಲಾಸ್ಟರ್ ಆಫ್ ಪ್ಯಾರೀಸ್ ನ ಮೂರ್ತಿ ಮಾಡದೇ ಮಣ್ಣಿನ ಮೂರ್ತಿಯನ್ನೇ ಮಾಡುವಂತೆ ಪ್ರೇರೇಪಿಸಿ ಅದಕ್ಕಾಗಿ ಅವರಿಗೆ ಸರಕಾರದ ವತಿಯಿಂದ ಅನುದಾನ ನೀಡಬೇಕು ಎಂದು ಆಗ್ರಹಿಸಲಾಯಿತು.
ಹಿಂದೂ ಜನಜಾಗೃತಿ ಸಮಿತಿ ವತಿಯಿಂದ, ಸಾರ್ವಜನಿಕ ಗಣೇಶೋತ್ಸವದ ವಿಸರ್ಜನೆಯನ್ನು ಆದರ್ಶ ರೀತಿಯಲ್ಲಿ ವ್ಯವಸ್ಥೆ ಮಾಡುವ ಬಗ್ಗೆ ಬೆಳ್ತಂಗಡಿ ತಾಲೂಕಿನ ಉಪ ತಹಶೀಲ್ದಾರ್ ಶ್ರೀಮತಿ ಕೆ. ಜಯ ಹಾಗೂ ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಸಂಘಟನಾ ಸಂಯೋಜಕಿ ಶ್ರೀಮತಿ ಮಿಟಿಲ್ಡ ಡಿ ಕೋಸ್ತ ಇವರಿಗೆ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಉದಯ್ ಬಿ ಕೆ ವಕೀಲರು ಬೆಳ್ತಂಗಡಿ, ಪುನೀತ್ ಸುವರ್ಣ ಅಖಿಲ ಭಾರತೀಯ ಹಿಂದೂ ಮಹಾಸಭಾ ಅಧ್ಯಕ್ಷರು ಬೆಳ್ತಂಗಡಿ ತಾಲೂಕು, ಮುರಳಿದರ ಕೆಲ್ಲಗುತ್ತು ಕಾರ್ಯದರ್ಶಿ ಸಾರ್ವಜನಿಕ ಶಾರದೋತ್ಸವ ಸಮಿತಿ ಬೆಳ್ತಂಗಡಿ, ಶ್ರೀ ಅಮೃತ್ ಕುಮಾರ್ ಸದಸ್ಯರು , ರಾಜ ಕೇಸರಿ ಸಂಘಟನೆ ಬೆಳ್ತಂಗಡಿ, ಪ್ರದೀಪ್ ಕುಮಾರ್ ಸದಸ್ಯರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಮಡಂತ್ಯಾರು, ಜಾರಪ್ಪ ಮೂಲ್ಯ ಸದಸ್ಯರು ಅನಂತೇಶ್ವರ ಭಜನಾ ಮಂಡಳಿ ಬಳ್ಳಮಂಜ, ಧರ್ಮಪ್ರೇಮಿಗಳಾದ ವಿಘ್ನೇಶ ಆಚಾರ್ಯ ಬೆಳ್ತಂಗಡಿ, ಎಂ ನಾರಾಯಣ ಸುಧೆ ಮುಗೆರು ಬೆಳ್ತಂಗಡಿ, ಶ್ರೀಮತಿ ಸುಂದರಿ, ಕುಮಾರಿ ಜಾನಕಿ ಮಾಚಾರ್, ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕರಾದ ರತ್ನಾಕರ್ ಆಚಾರ್ಯ, ಯೋಗೀಶ್ ಅಚ್ಚಿನಡ್ಕ, ಹರೀಶ್ ಕಕ್ಕಿಂಜೆ, ಉದಯ್ ನೆರಿಯ ಉಪಸ್ಥಿತರಿದ್ದರು.