Sunday, January 19, 2025
ಸುದ್ದಿ

ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿದ್ದಾರೆ ಅನುಷ್ಕಾ ಶರ್ಮಾ – ಕಹಳೆ ನ್ಯೂಸ್

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅನುಷ್ಕಾ 30 ಅಂಡರ್ 30 ಏಷ್ಯಾ 2018 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಈಗ ಇನ್ನೊಂದು ಸಾಧನೆ ಮಾಡಲು ಹೊರಟಿದ್ದಾರೆ. ಮೇಡಮ್ ಟುಸ್ಸಾಡ್ ವಸ್ತು ಸಂಗ್ರಹಾಲಯದಲ್ಲಿ ಅನುಷ್ಕಾ ಮೂರ್ತಿ ಅನಾವರಣಗೊಳ್ಳಲಿದೆ. ಅದು ಮಾತನಾಡಲಿದೆಯಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಂಗಾಪುರದ ಮೇಡಮ್ ಟುಸ್ಸಾಡ್ ವಸ್ತು ಸಂಗ್ರಹಾಲಯದಲ್ಲಿ ಇದೇ ಮೊದಲ ಬಾರಿಗೆ ಮಾತನಾಡಬಲ್ಲ ಮೂರ್ತಿಯನ್ನು ಅನಾವರಣ ಮಾಡಲಾಗ್ತಿದೆ. ಇದೇ ಮೊದಲ ಬಾರಿ ಬಾಲಿವುಡ್ ನಟಿಯೊಬ್ಬಳ ವಿಶೇಷ ಮೂರ್ತಿ ಮೇಡಮ್ ಟುಸ್ಸಾಡ್ ವಸ್ತು ಸಂಗ್ರಹಾಲಯದಲ್ಲಿ ಅನಾವರಣಗೊಳ್ಳುತ್ತಿದೆ. ಇದೊಂದು ಮೇಣದ ಪ್ರತಿಮೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅನುಷ್ಕಾ ಮೊದಲು ಓಪ್ರಾ ವಿನ್ಫ್ರೆ, ಲೂಯಿಸ್ ಹ್ಯಾಮಿಲ್ಟನ್ ಮಾತನಾಡುವ ಪ್ರತಿಮೆ ವಸ್ತು ಸಂಗ್ರಹಾಲಯದಲ್ಲಿದೆ. ಮೂಲಗಳ ಪ್ರಕಾರ ಅನುಷ್ಕಾ ಮೂರ್ತಿ ಜೊತೆ ಫೋನ್ ಕೂಡ ಇರಲಿದೆ. ಫೋನ್ ಅಸಲಿಯಾಗಿದ್ದು, ವೀಕ್ಷಕ ಫೋನ್ ಮುಟ್ಟಿದ್ರೆ ಅನುಷ್ಕಾ ಅವ್ರ ಜೊತೆ ಮಾತನಾಡಲಿದ್ದಾರೆ.

 

ವಸ್ತು ಸಂಗ್ರಹಾಲಯದ ಜನರಲ್ ಮ್ಯಾನೇಜರ್ ಅನುಷ್ಕಾ ಮೂರ್ತಿ ನಿರ್ಮಾಣದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಭಾರತದಿಂದಲೂ ಪ್ರವಾಸಿಗರು ಬರ್ತಾರೆ. ಮಾತನಾಡುವ ಅನುಷ್ಕಾ ಮೂರ್ತಿ ಭಾರತೀಯ ಪ್ರವಾಸಿಗರನ್ನು ಸೆಳೆಯಲಿದೆ ಎಂದಿದ್ದಾರೆ.