Sunday, January 19, 2025
ಸುದ್ದಿ

ಕಠಿಣ ಪರಿಶ್ರಮದ ಕಲಿಕೆಯಿಂದ ಮಾತ್ರ ಅತ್ಯುತ್ತಮ ಯಶಸ್ಸು ಪಡೆಯಲು ಸಾಧ್ಯ ; ಪ್ರಗತಿ ಸ್ಟಡಿ ಸೆಂಟರ್‍ನ ಸಿ.ಇ.ಟಿ ಮತ್ತು ನೀಟ್ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಪ್ರೊ||ರಾಜಾರಾಮ್ – ಕಹಳೆ ನ್ಯೂಸ್

ಪುತ್ತೂರು: “ನಮ್ಮ ಜೀವನದಲ್ಲಿ ಎದುರಾಗುವ ಯಾವುದೇ ಕಷ್ಟಗಳಿಗೂ ಅಂಜದೆ, ಅಳುಕದೆ ಎದುರಿಸುತ್ತಾ ಮುನ್ನಡೆಯಬೇಕು. ಸಿಡಿಲು-ಮಳೆ ಎದುರಾದರೂ ಕುಗ್ಗದೆ ಗುರಿ ತಲುಪುವಂತಾಗಬೇಕು. ಇದಕ್ಕೆ ವಿಷಯದಲ್ಲಿ ಆಸಕ್ತಿ; ಕಠಿಣ ಪರಿಶ್ರಮ, ಪ್ರಾಮಾಣಿಕ ಪ್ರಯತ್ನ; ಕೇಂದ್ರೀಕೃತ ಗಮನ ವಿಷಯದಲ್ಲಿ ಅಳವಾದ ತಿಳುವಳಿಕೆ ನಿರಂತರವಾದ ಅಭ್ಯಾಸ ಅತೀ ಅಗತ್ಯವಾಗಿ ಇರಬೇಕು”.

“ವಿದ್ಯಾರ್ಥಿಗಳು ಎಷ್ಟು ವೇಗವಾಗಿ ಪ್ರಶ್ನೆಗಳಿಗೆ ಉತ್ತರಕೊಡಲು ಅಭ್ಯಾಸ ಮಾಡುತ್ತಾರೋ ಅಷ್ಟೇ ವೇಗವಾಗಿ ಸ್ಪರ್ದಾತ್ಮಕ ಸ್ಪರ್ಧೆಗಳಲ್ಲಿ ಉತ್ತರಿಸಲು ಸಾದ್ಯವಾಗುತ್ತದೆ. ಇದರಿಂದ ಮಾತ್ರ ನಿರೀಕ್ಷಿತ ಯಶಸ್ಸು ದೊರೆಯಲು ಸಾಧ್ಯವಾಗುತ್ತದೆ” ಎಂಬುದಾಗಿ ಮಂಗಳೂರಿನ ವಿಕಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ರಾಜಾರಾಂ ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು


ಅವರು ಪುತ್ತೂರಿನ ಧರ್ಮಸ್ಥಳ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್‍ನ ವಿಜ್ಞಾನ ವಿಭಾಗವು ಜಿ.ಎಲ್.ಟ್ರೇಡ್ ಸೆಂಟರ್‍ನಲ್ಲಿ ಇತ್ತೀಚೆಗೆ ನೂತನವಾಗಿ ಪ್ರಾರಂಭವಾದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆರಂಭಿಸಿದ ವಿಶೇಷ ಸಿ.ಇ.ಟಿ ಮತ್ತು ನೀಟ್ ತರಬೇತಿ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಕಾಸ್ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕ ಡಾ| ದರ್ಶನ್ ರಾಜ್ ಮಾತನಾಡಿ “ಪ್ರತಿಯೊಬ್ಬ ವಿದ್ಯಾರ್ಥಿಗೂ ತಮ್ಮ ಜೀವನದಲ್ಲಿ ಒಂದು ಉತ್ತಮ ಗುರಿ ಇರಬೇಕಾದುದು ಅತೀ ಅಗತ್ಯ. ಉತ್ತಮ ಗುರಿಯೊಂದಿಗೆ ಕಠಿಣವಾದ ಸಾಧನೆ ಮಾಡುವುದರಿಂದ ಮಾತ್ರ ಅತ್ಯುತ್ತಮ ಯಶಸ್ಸನ್ನು ಪಡೆಯಲು ಸಾಧ್ಯವಾಗುತ್ತದೆ. ಎಲ್ಲಾ ವಿದ್ಯಾರ್ಥಿಗಳೂ ಈ ನಿಟ್ಟಿನಲ್ಲಿ ಪ್ರಯತ್ನಿಸುವಂತಾಗಲಿ” ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಗತಿ ಸ್ಟಡಿ ಸೆಂಟರ್‍ನ ಸಂಚಾಲಕರಾದ ಪಿ.ವಿ. ಗೋಕುಲ್‍ನಾಥ್ ಪ್ರಾಸ್ತಾವಿಕ ನುಡಿಗಳಾನ್ನಾಡಿ “ಸಂಸ್ಥೆಯು ನೂತನವಾಗಿ ಪ್ರಾರಂಭಿಸಿದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಲಿ. ಆ ಮೂಲಕ ಹೆತ್ತವರಿಗೆ ಸಂಸ್ಥೆಗೆ ಕೀರ್ತಿ ದೊರೆಯುವಂತಾಗಲಿ ಎಂದು ಹಾರೈಸಿದರು. ಪ್ರಾಂಶುಪಾಲರಾದ ಹೇಮಲತಾ ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕು| ಹರ್ಷಿತಾ ಮತ್ತು ಬಳಗದವರು ಪ್ರಾರ್ಥಿಸಿದರು. ಉಪನ್ಯಾಸಕರಾದ ತನುಜಾಕ್ಷಿ, ಚಂದನಾ, ನಾರಾಯಣಿ ಭಟ್, ಅಶ್ವಿನಿ, ಮಿನುತಾ ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಉಪನ್ಯಾಸಕರಾದ ಮಮತಾ ಕುಂಡಡ್ಕ, ಪ್ರತೀಕ್, ರೂಥರ್, ಧನುಷ್, ಚಿದಾನಂದ್ ಉಪಸ್ಥಿತರಿದ್ದು ಸಹಕರಿಸಿದರು. ಗೀತಾ ಕೊಂಕೋಡಿ ಕಾರ್ಯಕ್ರಮ ನಿರ್ವಹಿಸಿದರು.