Monday, January 20, 2025
ಸುದ್ದಿ

ಇಂದಿನಿಂದ ಮನೆ-ಮನೆಯಲ್ಲೂ ಸದ್ದು ಮಾಡಲಿದೆ ‘ಬಾಯಿಲ್ಡ್ ರೈಸ್’ – ಕಹಳೆ ನ್ಯೂಸ್

ಪೋಸ್ಟರ್ ಮೂಲಕ ಸಂಚಲನ ಸೃಷ್ಠಿಸಿ, ಬಿಡುಗಡೆಗೂ ಮುನ್ನವೇ ರಾಜ್ಯಮಟ್ಟದ ಅವಾರ್ಡ್ ಗೆದ್ದ ತುಳುಕಿರು ಚಿತ್ರ ‘ಬಾಯಿಲ್ಡ್ ರೈಸ್ ಇಂದು ಬಿಡುಗಡೆಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಸಂಜೆ 6 ಗಂಟೆಗೆ ‘ಮಾಯಿಲು ಫಿಲ್ಮ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ‘ಬಾಯಿಲ್ಡ್ ರೈಸ್ ತುಳು ಕಿರುಚಿತ್ರ ಬಿಡುಗಡೆಯಾಗಲಿದ್ದು, ಕರ್ನಾಟಕದಾದ್ಯಂತ ಸದ್ದು ಮಾಡಲಿದೆ.

ಆ.13 ರಂದು ಈ ಕಿರುಚಿತ್ರದ ‘ಸಾದಿ ಊರುನು ತೂನಗ’ ಎಂಬ ಲಿರಿಕಲ್ ಸಾಂಗ್ ಬಿಡುಗಡೆಯಾಗಿತ್ತು, ಬಳಿಕ ಆ.20ರಂದು ಟ್ರೈಲರ್ ಕೂಡ ರಿಲೀಸ್ ಆಗಿತ್ತು. ಟ್ರೈಲರ್ ನೋಡಿದ ಅನೇಕರು ಇದು ಕೊರೋನಾ ಸ್ಟೋರಿನಾ..? ಬೀಡಿ ಕಟ್ಟುವ ಮಹಿಳೆಯ ಕಥೆಯ ಎಂದು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಎಲ್ಲಾ ಅನುಮಾನಗಳಿಗೆ ಇಂದು ಸಂಜೆ 6 ಗಂಟೆಗೆ ಉತ್ತರ ಸಿಗಲಿದೆ.

ಕರಾವಳಿಯ ಯುವ ನಿರ್ದೇಶಕ ಜಯಂತ್ ನಿಟ್ಟಡೆಯವರ ಕಥೆ, ಹಾಗೂ ನಿದೇರ್ಶನದಲ್ಲಿ ಮೂಡಿ ಬಂದಿರುವ ‘ಬಾಯಿಲ್ಡ್ ರೈಸ್ ತುಳುಕಿರು ಚಿತ್ರ ಕರಾವಳಿಗರ ದೈನಂದಿನ ಜೀವನಾಧಾರಿತ ಕಥೆಯಾಗಿದ್ದು, ಪ್ರತೀ ಮನೆ ಮನೆಯಲ್ಲೂ ಈ ಕಿರುಚಿತ್ರ ಸದ್ದು ಮಾಡಲಿರುವುದಂತು ಸತ್ಯ.
ದಿವ್ಯ.ಎಲ್ ಮೂಡಿಗೆರೆ ನಿರ್ಮಾಣ, ಜನಾರ್ಧನ ಮೌರ್ಯ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಮೇಘಾ.ಕೆ, ಯೋಗಿನಿ, ಮನ್ವಿತ್, ಆಯುಷ್ಮಾನ್, ಶ್ರಾವಣಿ, ಸಾನ್ವಿ ನಟಿಸಿದ್ದಾರೆ. ಸಾಯಿರೂಪ ದಾಲಿಂಬ ಧ್ವನಿಯಲ್ಲಿರುವ ಹಾಡಿಗೆ, ಜಯಂತ್ ನಿಟ್ಟಡೆ ಹಾಗೂ ಅಭ್ಯುದಯರವರು ಸಾಹಿತ್ಯ ಬರೆದಿದ್ದು, ಆ್ಯಂಟೊನಿಯವರ ಸಂಗೀತ, ಆರ್ ಪ್ರದೀಪ್ ಗರ್ಡಾಡಿಯವರ ಸಂಕಲನವಿದೆ. ಜಯಂತಿ, ಶೇಖರ್ ಮಾಲಾಡಿ, ಪ್ರೇಮ್ ಕುಮಾರ್, ಸಂತೋಷ್ ಬಾಬು, ಪ್ರಶಾಂತ್ ಬೆಳ್ತಂಗಡಿ ಹಾಗೂ ಇನ್ನೂ ಅನೇಕರ ಸಹಕಾರದಲ್ಲಿ ಈ ಕಿರುಚಿತ್ರ ಮೂಡಿ ಬಂದಿದೆ