Monday, January 20, 2025
ಸುದ್ದಿ

ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕದಲ್ಲಿ ಅಂತಿಮ ವರ್ಷದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಬೀಳ್ಕೊಡುಗೆ “ದೀಪಪ್ರದಾನ” ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಬೀಳ್ಕೊಡುಗೆ “ದೀಪಪ್ರದಾನ” ಕಾರ್ಯಕ್ರಮದಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡುತ್ತ ವಿದ್ಯಾರ್ಥಿ ಜೀವನ ನಿತ್ಯನಿರಂತರ ಶೋಧನೆಯ, ಆಂತರ್ಯದ ಸತ್ಯದರ್ಶನ ಮಾಡುವ ಕಡೆಗೆ ನಮ್ಮ ಯೋಚನೆಗಳು ಸಾಗಬೇಕು. ನಾನು ಎಂಬ ಸ್ವಾರ್ಥ ನಾಶವಾಗಿ ನಾವು ನಮ್ಮದು ಎನ್ನುವ ವಿಶಾಲ ಮನಸ್ಸು ನಮ್ಮದಾಗಬೇಕು, ಉರಿವ ಬತ್ತಿ ನಾನಾಗುತ್ತೇನೆ, ಉಳಿದವರನ್ನು ಬೆಳಗಿಸುತ್ತೇನೆ ಅಂತಹ ಶಕ್ತಿ ನಾನಾಗುತ್ತೇನೆ ಎಂಬ ಭಾವನೆ ನಮ್ಮದಾಗಬೇಕು ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಪುಣೆಯ ಮಕ್ಕಳ ತಜ್ಞ ಡಾ| ಸುಧಾಕರ ಶೆಟ್ಟಿ, ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕ್ಯಾ. ಮಣಿವಣ್ಣನ್ ಪಿ.(IAS), ಬಟ್ಕಳ ವಿಧಾನಸಭಾ ಕ್ಷೇತ್ರ ಶಾಸಕ ಸುನಿಲ್ ನಾೈಕ್, ಬೆಂಗಳೂರಿನ ಉದ್ಯಮಿ ಕೃಷ್ಣಮೂರ್ತಿ, ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಕೆ. ಮೋಹನ್ ಕುಮಾರ್, ಮುಂಬಯಿಯ ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ಭಂಡಾರಿ, ಕ್ಯಾ. ಮಣಿವಣ್ಣನ್ ಪಿ. ಆಪ್ತ ಸಹಾಯಕ ಸುಮುಖ್ ಬೆಟಗೇರಿ, ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ರಾಷ್ಟ್ರಸೇವಿಕಾ ಸಮಿತಿಯ ಹಿರಿಯ ಕಾರ್ಯಕರ್ತೆ ಶ್ರೀಮತಿ ಕಮಲಾ ಪ್ರಭಾಕರ್ ಭಟ್ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಸದಸ್ಯರಾದ ಗೋಪಾಲ್ ಶೆಣೈ, ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ್ ಕಾಯರ್ ಕಟ್ಟೆ ಉಪಸ್ಥಿತರಿದ್ದರು.

ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಲಕ್ಷ್ಮೀ ರಘುರಾಜ್, ಹಿರಿಯ ಉಪನ್ಯಾಸಕಿಯರಾದ ಸುಕನ್ಯಾ, ಕವಿತಾ, ಜಯಲಕ್ಷ್ಮೀ ಆರತಿ ಎತ್ತಿ ತಿಲಕಧಾರಣೆಯ ಮೂಲಕ ಹರಸಿದರು. ನಂತರ ಅಂತಿಮ ವರ್ಷದ ವಿದ್ಯಾರ್ಥಿಗಳು ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ದೀಪ ಹಸ್ತಾಂತರಿಸಿ, ಸಂಸ್ಥೆಗೆ ಚೆಕ್ ಮೂಲಕ ಕೊಡುಗೆಯನ್ನು ನೀಡಿದರು.

ಕಾರ್ಯಕ್ರಮವನ್ನು ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ಕೀರ್ತಿ ವಂದಿಸಿ, ನಿಶಾ, ನಿಖಿತ ಕಾರ್ಯಕ್ರಮ ನಿರೂಪಿಸಿದರು