Tuesday, January 21, 2025
ಸುದ್ದಿ

ಆ. 31ರಂದು `ಕಾಶ್ಮೀರ ವಿಜಯ’ ಯಕ್ಷಗಾನ ಪ್ರಸಂಗ ರಚನೆಗೆ ವೀಳ್ಯ ಪ್ರದಾನ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ: ಸ್ವತಂತ್ರ ಭಾರತದ ಪ್ರಮುಖ ಐತಿಹಾಸಿಕ ಕಾಲಘಟ್ಟಗಳನ್ನು ಯಕ್ಷಗಾನ ತಾಳಮದ್ದಳೆ ಮೂಲಕ ಪ್ರಸ್ತುತಪಡಿಸಿ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿರುವ ಯಕ್ಷ ಗಜಮುಖ ಸೇವಕ ಸುಧಾಕರ ಆಚಾರ್ಯ, ಯಕ್ಷ ಕಲಾರಾಧನೆ ಮೂಲಕ ದೇಶಾಭಿಮಾನ ಜಾಗೃತಗೊಳಿಸುವ ಪ್ರಯತ್ನವಾಗಿ ಮೂರನೆಯ ಕಲಾರಾಧನೆಗೆ ಸಿದ್ಧತೆ ನಡೆಸುತ್ತಿದ್ದು, ಈ ತಿಂಗಳ 31ರಂದು ಕಾಶ್ಮೀರ ವಿಜಯ ಯಕ್ಷಗಾನ ಪ್ರಸಂಗ ರಚನೆಗೆ ವೀಳ್ಯ ಪ್ರದಾನ ನಡೆಯಲಿದೆ.

ಗಣೇಶ ಚತುರ್ಥಿ ಶುಭ ದಿನದಂದು ಅಪರಾಹ್ನ 3 ಗಂಟೆಗೆ ಕುಂಭಾಶಿ ಆನೆಗುಡ್ಡೆ ಶ್ರೀ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆನೆಗುಡ್ಡೆ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಮತ್ತು ಹಿರಿಯ ಧರ್ಮದರ್ಶಿ ಸೂರ್ಯನಾರಾಯಣ ಉಪಾಧ್ಯಾಯ ಆಶೀರ್ವಚನ ನೀಡಲಿದ್ದಾರೆ.

ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಉದ್ಯಮಿ ಗುರ್ಮೆ ಸುರೇಶ ಶೆಟ್ಟಿ, ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ, ವಿದುಷಿ ಪ್ರತಿಭಾ ಎಲ್. ಸಾಮಗ, ಬಹುಮೇಳಗಳ ಯಜಮಾನ ಪಳ್ಳಿ ಕಿಶನ್ ಹೆಗ್ಡೆ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಗೋವಿಂದ ಬಾಬು ಪೂಜಾರಿ, ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಕೃಷ್ಣಪ್ರಸಾದ ಅಡ್ಯಂತಾಯ, ಕಲಾಪ್ರೇಮಿ ಭುವನಪ್ರಸಾದ ಹೆಗ್ಡೆ ಮಣಿಪಾಲ ಮತ್ತು ಪ್ರೊ. ಶ್ರೀನಾಥ ರಾವ್ ಭಾಗವಹಿಸಲಿದ್ದಾರೆ.

ಭಾರತ ಸ್ವಾತಂತ್ರ‍್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಸತತ 14 ಗಂಟೆಗಳಿಗೂ ಮೀರಿ ಯಕ್ಷಗಾನ ಅಮೃತ ರಸಧಾರೆ ಹರಿಸಿದ ಸುಧಾಕರ ಆಚಾರ್ಯ, ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಪರ್ಯಾಯ ಸಂದರ್ಭದಲ್ಲಿ ಇಲ್ಲಿನ ಶ್ರೀಕೃಷ್ಣಮಠದಲ್ಲಿ ಪತ್ರಕರ್ತ ಎಂ. ವಿ. ಹೆಗ್ಡೆ ವಿರಚಿತ ಸ್ವರಾಜ್ಯ ವಿಜಯ ಮತ್ತು ಹೈದರಾಬಾದ್ ವಿಜಯ ತಾಳಮದ್ದಳೆಯನ್ನು ಸ್ವಾತಂತ್ರ‍್ಯಾನAತರದ 7 ದಶಕಗಳ ಬಳಿಕ ಸಂಘಟಿಸಿದ್ದನ್ನು ಸ್ಮರಿಸಬಹುದು.