Tuesday, January 21, 2025
ಸುದ್ದಿ

ಪುತ್ತೂರಿನ ಕರ್ಮಲದಲ್ಲಿ ಇತ್ತಂಡಗಳ ಬೀದಿ ಕಾಳಗ : ಯುವಕರನ್ನ ವಶಕ್ಕೆ ಪಡೆದ ಎಸ್‍ಐ ಶ್ರೀಕಾಂತ್ ರಾಥೋಡ್ –ಕಹಳೆ ನ್ಯೂಸ್

ಪುತ್ತೂರಿನ ಕರ್ಮಲದ ಬಲಮುರಿ ದೇವಸ್ಧಾನದ ಬಳಿ ಇತ್ತಂಡಗಳ ನಡುವೆ ಜಗಳ ನಡೆದಿದ್ದು ಯುವಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಲಮುರಿ ದೇವಸ್ಧಾನದ ಬಳಿ ಕೆಲ ಯುವಕರು ಬೈಕ್‍ನಲ್ಲಿ ಬಂದು ಅಲ್ಲೆ ಇದ್ದ ಯುವಕರೊಂದಿಗೆ ಜಗಳ ಮಾಡಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಗಲಾಟೆ ನಡೆದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಧಳಕ್ಕೆ ಆಗಮಿಸಿದ ಪುತ್ತೂರು ಎಸ್‍ಐ ಶ್ರೀಕಾಂತ್ ರಾಥೋಡ್ ಅವರ ತಂಡ ಬೀದಿ ಕಾಳಗ ಮಾಡಿದ ಗಗನ್, ಪ್ರತಾಪ್ ಸೇರಿದಂತೆ ಕೆಲ ಯುವಕರನ್ನ ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಪರಿಸರದಲ್ಲಿ ಕಾನೂನು ಸುವ್ಯವಸ್ಧೆ ಕಾಪಾಡುತ್ತಾ ಜನರು ನೆಮ್ಮದಿಯಿಂದ ಇರುವಂತೆ ಮಾಡುವ ಕೆಲಸವನ್ನ ಪುತ್ತೂರಿನ ಎಸ್‍ಐ ಶ್ರೀಕಾಂತ್ ರಾಥೋಡ್ ಮಾಡುತ್ತಿದ್ದು, ಇಂದು ಸುಖಾಸುಮ್ಮನೆ ಬೀದಿಕಾಳಗ ಮಾಡಿದ ಯುವಕರನ್ನ ವಶಕ್ಕೆ ಪಡೆದಿದ್ದಾರೆ. ಇನ್ನು ಎಸ್‍ಐ ಶ್ರೀಕಾಂತ್ ರಾಥೋಡ್ ಪುತ್ತೂರಿನ ಎಸ್‍ಐ ಯಾಗಿ ನೇಮಕಗೊಂಡ ಬಳಿಕ ಅದೆಷ್ಟೋ ಕ್ರಿಮಿನಲ್ ಚಟುವಟಿಕೆಗಳನ್ನ ಹಾಗೂ ಸುಖಾಸುಮ್ಮನೆ ನಡೆಯುತ್ತಿರುವ ಗಲಾಟೆಗಳಿಗೆ ಬ್ರೇಕ್ ಹಾಕುತ್ತಿದ್ದಾರೆ. ಇದೀಗ ಎಸ್‍ಐ ಶ್ರೀಕಾಂತ್ ರಾಥೋಡ್ ಅವರ ಕಾರ್ಯಕ್ಕೆ ಜನ ಮೆಚ್ಚುಗೆ ಸೂಚಿಸುತ್ತಿದ್ದು, ಪುತ್ತೂರಿನಲ್ಲಿ ಶಾಂತಿ ನೆಲೆಸುತ್ತಿದೆ ಎಂದು ಹೇಳುತ್ತಿದ್ದಾರೆ.