Recent Posts

Tuesday, January 21, 2025
ರಾಜ್ಯಸುದ್ದಿ

ಎರಡು ಮಕ್ಕಳ ಅಮ್ಮನಿಗೂ ಬಿಡದ ಸೆಳೆತ – ಪ್ರೇಯಸಿಗಾಗಿ ಗಾರೆ ಮಾಡಿದ ಇಂಜಿನಿಯರ್.​! ; ಕಾರವಾರದ ಆಯೇಷಾ ರೆಹಮತ್-ಉಲ್ಲಾ ಹಾಗೂ ಬೀರ್ ಮೊಯಿದ್ದೀನ್ ಇಂಟರೆಸ್ಟಿಂಗ್​ ಲವ್​ ಸ್ಟೋರಿ – ಕಹಳೆ ನ್ಯೂಸ್

ಕಾರವಾರ: ಇದೊಂದು ರೀತಿಯ ಇಂಟರೆಸ್ಟಿಂಗ್​ ಪ್ರೇಮ ಕಥೆ. ಕಾರವಾರದ ಈ ಜೋಡಿ ಅದೆಷ್ಟೋ ವರ್ಷಗಳ ಹಿಂದೆಯೇ ಮದುವೆಯಾಗುವ ಕನಸು ಕಂಡವರು. ಆದರೆ ಯುವತಿಯ ಮನೆಯವರು ಆಕೆಯನ್ನು ಚಿಕ್ಕವಯಸ್ಸಿನಲ್ಲಿಯೇ ಮದುವೆ ಮಾಡಿ ಎರಡು ಮಕ್ಕಳೂ ಆಗಿಬಿಟ್ಟವು, ಆದರೆ ಪ್ರೇಯಸಿಯ ಕನಸಿನಲ್ಲಿಯೇ ಕಾಲ ಕಳೆದ ಯುವಕ, ಹೇಗಾದರೂ ಆಕೆಯನ್ನು ಸೇರಬೇಕು ಎಂದು ಛಲ ತೊಟ್ಟಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಕಾರವಾರದ ಆಯೇಷಾ ರೆಹಮತ್-ಉಲ್ಲಾ ಹಾಗೂ ಬೀರ್ ಮೊಯಿದ್ದೀನ್ ಪ್ರೇಮ ಕಥೆ. ಮೆಕ್ಯಾನಿಕಲ್​ ಇಂಜಿನಿಯರಿಂಗ್​ ಓದಿರೋ ತಮಿಳುನಾಡು ಮೂಲದ ಪುದುಕೊಟ್ಟೈ ಜಿಲ್ಲೆಯ ಬೀರ್ ಮೊಯಿದ್ದೀನ್​ಗೆ ತನ್ನ ಪ್ರೇಯಸಿ ಕಾರವಾರದಲ್ಲಿ ಇರುವ ವಿಷಯ ತಿಳಿಯಿತು. ಅದಕ್ಕಾಗಿ ಆತ ಕಾರವಾರಕ್ಕೆ ಬಂದು ಗಾರೆ ಕೆಲಸ ಮಾಡಿಕೊಂಡು ಇದ್ದ. ತನ್ನ ಪ್ರಿಯಕರ ಊರಿಗೆ ಬಂದಿರುವ ವಿಷಯ ತಿಳಿಯುತ್ತಲೇ ಪತಿ, ಮಕ್ಕಳನ್ನು ಬಿಟ್ಟು ಬಂದಿದ್ದ ಆಯೇಷಾ ಪ್ರೇಮಿಯ ಜತೆ ಕಾರವಾರಕ್ಕೆ ಬಂದು 6 ತಿಂಗಳಿಂದ ನೆಲೆಸಿದ್ದಳು.

ತಮಿಳುನಾಡು ಪೊಲೀಸ್ ಠಾಣೆಯಲ್ಲಿ ಆಯೇಷಾ ನಾಪತ್ತೆ ಪ್ರಕರಣ ದಾಖಲಾಗಿತ್ತು. ತಮಿಳುನಾಡು ಪೊಲೀಸರು ಆಯಿಷಾ ಮೊಬೈಲ್ ಟವರ್ ಲೋಕೇಶನ್ ಆಧರಿಸಿ ಪತ್ತೆ ಕಾರ್ಯಕ್ಕೆ ನಡೆಸಿದರು. ಎರಡು ತಿಂಗಳ ಹಿಂದೆಯೇ ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದರು. ಆದರೆ, ಈಗ ನಿಖರವಾದ ಜಾಗ ತಿಳಿಯದೇ ಪೊಲೀಸರು ವಾಪಸಾಗಿದ್ದರು.

ಆದರೆ ಈಗ ಅವರ ಪತ್ತೆ ಹಚ್ಚಲು ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರವಾರಕ್ಕೆ ಆಗಮಿಸಿದ ತಮಿಳುನಾಡು ಪೊಲೀಸರು ಭಾಷೆಯ ಸಮಸ್ಯೆಯಾಗಿದ್ದರಿಂದ ಆಟೋ ಚಾಲಕನೋರ್ವನ ಸಹಕಾರದಿಂದ ವಿವಾಹಿತೆ ಹಾಗೂ ಅವರ ಪ್ರಿಯಕರನನ್ನು ವಶಕ್ಕೆ ತೆಗೆದುಕೊಂಡು ವಾಪಸ್ ಕರೆದೊಯ್ದಿದ್ದಾರೆ. ಒಟ್ಟಿನಲ್ಲಿ ಈ ಪ್ರೇಮ ಕಥೆ ಹೇಗೆ ಅಂತ್ಯ ಹಾಡುತ್ತದೆಯೋ ಕಾದು ನೋಡಬೇಕಿದೆ.