Tuesday, January 21, 2025
ಕ್ರೈಮ್ರಾಜಕೀಯರಾಷ್ಟ್ರೀಯಸುದ್ದಿ

ಗೋವಾದ ಐಶಾರಾಮಿ ಕ್ಲಬ್‌ನಲ್ಲಿ ಬಿಜೆಪಿ ನಾಯಕಿ ಸೊನಾಲಿ ಪಾರ್ಟಿ ; ಬಲವಂತವಾಗಿ ಮಾದಕ ವಸ್ತುವನ್ನು ನೀರಿನಲ್ಲಿ ಕುಡಿಸಿ, ವಾಶ್ ರೂಂಗೆ ಕರೆದೊಯ್ದಿದು ಅತ್ಯಾಚಾರ – ಕೊಲೆ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನವದೆಹಲಿ/ಪಣಜಿ: ಬಿಜೆಪಿ ನಾಯಕಿ ಸೊನಾಲಿ ಪೋಗಟ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರಗ್ಸ್​ ಕೇಸ್​ ದಾಖಲಿಸಿರುವ ಗೋವಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಈಗಾಗಲೇ ಸೊನಾಲಿ ಅವರು ಇಬ್ಬರು ಆಪ್ತರನ್ನು ಬಂಧಿಸಲಾಗಿದೆ.

ಸದ್ಯ ಬಂಧನವಾಗಿರುವ ಆರೋಪಿಗಳನ್ನು ಎಡ್ವಿನ್​​ ನನ್ಸ್​ ಮತ್ತು ದತ್ತಪ್ರಸಾದ್​​ ಗಾವಂಕರ್ ಎಂದು ಗುರುತಿಸಲಾಗಿದೆ.

ಆರೋಪಿ ಎಡ್ವಿನ್​, ಸಾವಿಗೂ ಮುನ್ನ ಸೊನಾಲಿ ಕೊನೆಯದಾಗಿ​ ಪಾರ್ಟಿ ಮಾಡಿದ ಕರ್ಲಿಸ್​ ಹೋಟೆಲ್​ ಮಾಲೀಕ. ಇನ್ನೊಬ್ಬ ಆರೋಪಿ ದತ್ತಪ್ರಸಾದ್​, ಓರ್ವ ಡ್ರಗ್​ ಮಾರಾಟಗಾರ. ಡ್ರಗ್ಸ್​ ಪ್ರಕರಣದಲ್ಲಿ ಇಬ್ಬರನ್ನು ಅರೋಪಿಳನ್ನಾಗಿ ಉಲ್ಲೇಖಿಸಲಾಗಿದೆ.

ಗುರುವಾರ ಸೊನಾಲಿ ಆಪ್ತರಾದ ಸುಧೀರ್​ ಸಾಂಗ್ವಾನ್​ ಮತ್ತು ಸುಖ್ವಿಂದರ್​ ಸಿಂಗ್​ರನ್ನು ಬಂಧಿಸಲಾಗಿದ್ದು, 10 ದಿನಗಳ ಪೊಲೀಸ್​ ಕಸ್ಟಡಿಯಲ್ಲಿ ಇರಿಸಲಾಗಿದೆ. ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಸಾಂಗ್ವಾನ್​, ದತ್ತಪ್ರಸಾದ್​ನಿಂದ ಡ್ರಗ್ಸ್​ ಪಡೆದುಕೊಂಡೆವು ಎಂದು ಹೇಳಿದ್ದಾನೆ. ಪೊಲೀಸರು ಈವರೆಗೂ ಸೊನಾಲಿ ತಂಗಿದ್ದ ರೆಸ್ಟೊರೆಂಟ್​ ಸಿಬ್ಬಂದಿ ಸೇರಿದಂತೆ ಸುಮಾರು 25 ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ಮಾಡಿದ್ದಾರೆ.

ಸೊನಾಲಿ ಅವರು ಸೋಮವಾರ ಅಂಜುನಾ ಬೀಚ್​ನಲ್ಲಿರುವ ರೆಸ್ಟೊರೆಂಟ್​ ಕಂ ನೈಟ್​ ಕ್ಲಬ್​ನಲ್ಲಿದ್ದರು. ಅಲ್ಲಿ ಸೊನಾಲಿ ಅವರಿಗೆ ಸಂಗ್ವಾನ್​ ಮತ್ತು ಸಿಂಗ್​ ಸೇರಿಕೊಂಡು ನೀರಿನಲ್ಲಿ ಕೆಲ ಪದಾರ್ಥವನ್ನು ಬೆರೆಸಿ, ಬಲವಂತವಾಗಿ ಕುಡಿಸಿರುವುದಾಗಿ ಆರೋಪಿಗಳೇ ಒಪ್ಪಿಕೊಂಡಿದ್ದಾರೆ ಮತ್ತು ತಪ್ಪೊಪ್ಪಿಗೆಯನ್ನು ವಿಡಿಯೋ ರೆಕಾರ್ಡ್​ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನೀರು ಕುಡಿದ ಬಳಿಕ ಎದ್ದು, ಸ್ವಲ್ಪ ದೂರ ನಡೆದ ಸೊನಾಲಿ ಸುಸ್ತಿನ ಅನುಭವ ಆಗಿದ್ದರಿಂದ ಆಕೆಯನ್ನು ಆಪ್ತರು ತಾವು ತಂಗಿದ್ದ ಗ್ರ್ಯಾಂಡ್​ ಲಿಯೋನಿ ಹೋಟೆಲ್​ಗೆ ಕರೆದೊಯ್ದಿದ್ದಾರೆ. ಅದರ ಮಾರನೇ ದಿನ ಸೊನಾಲಿಯನ್ನು ಆಪ್ತರೇ ಸೆಂಟ್​ ಆಂಥೋಣಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದರು.

ತನಿಖಾಧಿಕಾರಿಗಳು ಸಂಬಂಧಪಟ್ಟ ಸ್ಥಳಗಳ ಸಿಸಿಟಿವಿ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸಿದಾಗ, ಸುಧೀರ್ ಸೋನಾಲಿಗೆ ನೀರಿನ ಬಾಟಲಿಯಲ್ಲಿ ಆಪಾದಿತ ದ್ರವವನ್ನು ಕುಡಿಯಲು ಬಲವಂತ ಮಾಡುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸೊನಾಲಿ ನಡೆದಾಡಲು ಸಾಧ್ಯವಾಗದೆ ಸಾಂಗ್ವಾನ್ ಜೊತೆ ರೆಸ್ಟೋರೆಂಟ್ ನಿಂದ ಹೊರಹೋಗುತ್ತಿರುವುದನ್ನು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ತೋರಿಸಿವೆ.

ಆರಂಭದಲ್ಲಿ ಸೊನಾಲಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ನಂಬಲಾಗಿತ್ತು. ಅವರನ್ನು ಉತ್ತರ ಗೋವಾ ಜಿಲ್ಲೆಯ ಅಂಜುನಾ ಪ್ರದೇಶದಲ್ಲಿನ ಸೇಂಟ್ ಆಂಟೋನಿ ಆಸ್ಪತ್ರೆಗೆ ಮಂಗಳವಾರ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು. ಸಾಯುವ ಮುನ್ನ ತನ್ನ ತಾಯಿ, ಸಹೋದರ ಮತ್ತು ಸೋದರ ಮಾವನ ಜತೆ ಮಾತನಾಡಿದ್ದ ಸೋನಾಲಿ, ಸಾಕಷ್ಟು ಆತಂಕದಲ್ಲಿದ್ದರು. ತನ್ನ ಇಬ್ಬರು ಸಹಚರರ ವಿರುದ್ಧ ದೂರಿದ್ದರು ಎಂದು ಅವರ ಸಹೋದರ ರಿಂಕು ಆರೋಪಿಸಿದ್ದಾರೆ. ಅಲ್ಲದೆ, ಇದು ಹೃದಯಾಘಾತದ ಸಾವಲ್ಲ, ಅತ್ಯಾಚಾರ ಎಸಗಿ ಅವರ ಆಪ್ತರೇ ಕೊಲೆ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಎಂದು ಸೊನಾಲಿ ಕುಟುಂಬದ ಗೋವಾ ಪೊಲೀಸರಿಗೆ ಒತ್ತಾಯ ಮಾಡಿದರು.

ಪ್ರಕರಣ ಬೇರೆ ತಿರುವು ಪಡೆದುಕೊಳ್ಳುತ್ತಿದ್ದಂತೆ ಸೊನಾಲಿ ಅವರ ಮರಣೋತ್ತರ ವರದಿಯ ಮೇಲೆ ಎಲ್ಲರ ದೃಷ್ಟಿ ನೆಟ್ಟಿತ್ತು. ಶವಪರೀಕ್ಷೆಯಲ್ಲಿ ಆಘಾತಕಾರಿ ಅಂಶವು ಸಹ ಬೆಳಕಿಗೆ ಬಂದಿತು. ಸೊನಾಲಿ ದೇಹದಲ್ಲಿ ಗಾಯಳಾಗಿರುವ ಬಗ್ಗೆ ಮರಣೋತ್ತರ ವರದಿಯಲ್ಲಿ ಉಲ್ಲೇಖವಾಯಿತು. ಅದರ ಬೆನ್ನಲ್ಲೇ ಅವರಿಬ್ಬರ ಆಪ್ತರಾದ ಸಾಂಗ್ವಾನ್​ ಮತ್ತು ಸಿಂಗ್​ರನ್ನು ಪೊಲೀಸರು ಗುರುವಾರ ಬಂಧಿಸಿದರು. ಇದೀಗ ಆರೋಪಿಗಳು ಸಹ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ 10 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ವಾಶ್‌ ರೂಂನಲ್ಲಿ ನಡೆದಿದ್ದಾದರೂ ಏನು?

ಬಿಜೆಪಿ ನಾಯಕಿ ಸೊನಾಲಿ ಪೋಗಟ್​ರನ್ನು ಆರೋಪಿಗಳು ಸೋನಾಲಿ ಪೋಗಟ್ ಅವರನ್ನು ವಾಶ್ ರೂಂಗೆ ಕರೆದೊಯ್ದಿದು ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ. ಫೋಗಟ್ ಅವರ ಸಹೋದರ ರಿಂಕು ಢಾಕಾ ಅವರು ಈಕುರಿತು ಗೋವಾದಲ್ಲಿ ದೂರು ದಾಖಲಿಸಿದ್ದಾರೆ, ಅವರ ಸಹೋದರಿ ಸಾಯುವ ಕೆಲವು ಗಂಟೆಗಳ ಮೊದಲು ತಮ್ಮ ತಾಯಿ, ಸಹೋದರಿ ಮತ್ತು ಸೋದರ ಮಾವನ ಜೊತೆ ಮಾತನಾಡಿದ್ದರು. ಆ ಸಂಭಾಷಣೆಯ ಸಮಯದಲ್ಲಿ ತನ್ನ ಸಿಬ್ಬಂದಿ ವಿರುದ್ಧ ದೂರು ನೀಡಿದ್ದರು ಎಂದು ಹೇಳಿದ್ದಾರೆ. ಸೋನಾಲಿ ಪೋಗಟ್ ಮೇಲೆ ಅತ್ಯಾಚಾರವೆಸಗಿ ಅದರ ವೀಡಿಯೊವನ್ನು ಮಾಡಿದ್ದಾರೆ. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಸೋನಾಲಿ ಪೋಗಟ್ ಸಹೋದರ ಆರೋಪಿಸಿದ್ದಾಗಿ ವರದಿಯಾಗಿದೆ.

ಟಿಕ್ ಟಾಕ್ ಮೂಲಕ ಜನಪ್ರಿಯತೆ ಗಳಿಸಿದ್ದ ಸೋನಾಲಿ ಫೋಗಟ್ ಹರಿಯಾಣದ ಹಿಸಾರ್ ಮೂಲದವರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹರಿಯಾಣದ ಆದಂಪುರ ಕ್ಷೇತ್ರದಿಂದ ಬಿಜೆಪಿಯ ಟಿಕೆಟ್ ಪಡೆದು ಕುಲದೀಪ್ ಬಿಷ್ಣೋಯ್ ವಿರುದ್ಧ ಸ್ಪರ್ಧಿಸಿದ್ದರು. ಅವರು 2020ರಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಭಾಗವಹಿಸಿದ್ದರು. (ಏಜೆನ್ಸೀಸ್​)