Friday, September 20, 2024
ಸುದ್ದಿ

ಅನುಮತಿಯಿಲ್ಲದೆ ಆಧಾರ್ ತಿದ್ದುಪಡಿ: ಬಂಟ್ವಾಳದ ಜೆಡಿಎಸ್ ಮುಖಂಡನ ಮನೆಗೆ ತಹಶೀಲ್ದಾರ್ ದಾಳಿ – ಕಹಳೆ ನ್ಯೂಸ್

ಮಂಗಳೂರು: ಸರ್ಕಾರಿ ಅನುಮತಿಯಿಲ್ಲದೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡುತ್ತಿದ್ದ ಜೆಡಿಎಸ್ ಮುಖಂಡನೋರ್ವನ ಮನೆಗೆ ದಾಳಿ ನಡೆಸಿದ ಬಂಟ್ವಾಳ ತಹಶೀಲ್ದಾರ್ ಆಧಾರ್ ತಿದ್ದುಪಡಿಗೆ ಬಳಸುತ್ತಿದ್ದ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜೆಡಿಎಸ್ ದ.ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ  ಹಾರೂನ್ ರಶಿದ್ (42)  ಮನೆಗೆ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಾಳಿ ನಡೆಸಿದ ಸಂದರ್ಭ ಹಾರೂನ್ ರಶೀದ್ ಮನೆಯಲ್ಲಿ ಪ್ರಾನ್ಸಿಸ್  ಪ್ರಶಾಂತ್  ಒಳಮೊಗರು ಎಂಬ ಓರ್ವ ಆಪರೇಟರ್ ನ್ನು ಬಳಸಿಕೊಂಡು ಆಧಾರ್ ತಿದ್ದುಪಡಿ ಮಾಡುತ್ತಿರುವುದು ಕಂಡುಬಂದಿದೆ. ಪ್ರಶಾಂತ್ ಆಧಾರ್ ಕಾರ್ಡ ನೋಂದಣೆ ಮಾಡುವ ಬಗ್ಗೆ ತರಭೆತಿಯನ್ನು ಪಡೆದಿದ್ದು,  ಕಡಬ ಪಂಚಾಯತ್ ವ್ಯಾಪ್ತಿ ಯಲ್ಲಿ  ಆಧಾರ್ ನೋಂದಣೆ ಹಾಗೂ ತಿದ್ದು ಪಡಿ ಮಾಡುವ ಬಗ್ಗೆ  ಕಡಬ ಪಂಚಾಯತ್ ನಿಂದ ಅಧಿಕೃತ ಪತ್ರವನ್ನು ಪಡೆದಿದ್ದ. ಈತನಿಗೆ ವಾಮದಪದವಿನ ಪ್ರಕಾಶ್ ಎಂಬಾತ ಸಹಕರಿಸುತ್ತಿದ್ದ ಎನ್ನಲಾಗಿದೆ.

ಜಾಹೀರಾತು

ಈ ಸಂದರ್ಭ ಮನೆಯಲ್ಲಿದ್ದ ಪ್ರಿಂಟರ್, ಸ್ಕ್ಯಾನರ್ ಹಾಗೂ ಇತರ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡಿರುವ ಬಂಟ್ವಾಳ ತಹಶೀಲ್ದಾರ್ ಪರವಾನಿಗೆ ಇಲ್ಲದೇ ಖಾಸಗಿ ಮನೆಯಲ್ಲಿ ಆಧಾರ್ ಕಾರ್ಡ್ ನೊಂದಣೆ ಹಾಗೂ ತಿದ್ದುಪಡಿಯನ್ನು ಮಾಡುತ್ತಿರುವ ಬಗ್ಗೆ ವರದಿ ನೀಡಿದ್ದಾರೆ.