Tuesday, January 21, 2025
ಸುದ್ದಿ

ಕಿರುಚಿತ್ರದಲ್ಲೆ ಕ್ರಾಂತಿ ಸೃಷ್ಠಿಸಿದ ‘ಬಾಯಿಲ್ಡ್ ರೈಸ್’ – ಕಹಳೆ ನ್ಯೂಸ್

ಆ.27ರಂದು ಮಾಯಿಲು ಫಿಲ್ಮ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾದ ‘ಬಾಯಿಲ್ಡ್ ರೈಸ್’ ತುಳು ಕಿರುಚಿತ್ರ ಕರ್ನಾಟಕದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕರಾವಳಿಯ ಯುವ ನಿರ್ದೇಶಕ ಜಯಂತ್ ನಿಟ್ಟಡೆಯವರ ಕಥೆ ಹಾಗೂ ನಿರ್ದೇಶನದಲ್ಲಿ ಮೂಡಿ ಬಂದ ಈ ಕಿರುಚಿತ್ರ ಕರ್ನಾಟಕದ ಜನತೆಯ ಮನಗೆದ್ದಿದೆ. ಕಿರುಚಿತ್ರದ ನಿರ್ದೇಶನ, ಕಥೆ, ಚಿತ್ರಕಥೆ ಕರಾವಳಿಗರ ನೈಜ ಬದುಕನ್ನೆ ತೋರಿಸಿದ್ದು , ಪ್ರತೀ ವೀಕ್ಷಕರ ಕಣ್ಣಂಚನ್ನು ಒದ್ದೆಯಾಗಿಸಿದೆ.

ಬಿಡುಗಡೆಯಾದ ಕೆಲವೇ ಕೆಲವು ಗಂಟೆಗಳಲ್ಲಿ 5 ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದ ಕಿರುಚಿತ್ರ, ಉತ್ತಮ ವಿಮರ್ಶೆಯನ್ನು ಪಡೆದಿದೆ. ಯಾವುದೇ ವೈಭವೀಕರಣವಿಲ್ಲದೆ, ಸಹಜತೆಯಲ್ಲಿ ಕಿರುಚಿತ್ರ ಮೂಡಿ ಬಂದಿರುವುದು ಅನೇಕರಿಗೆ ಮೆಚ್ಚುಗೆಯಾಗಿದೆ.

ಕಿರುಚಿತ್ರದಲ್ಲಿ ಏನಿದೆ…?

ರತ್ನ ಹಾಗೂ ಆಕೆಯ ಮಗನ ಸುತ್ತ ಹೆಣೆದಿರುವ ಕಥೆಯ ಜೊತೆಗೆ ಬೀಡಿ ಕಟ್ಟುವ ಪ್ರತೀ ಮನೆಯ ತಾಯಿಯ ಬದುಕಿನ ಹೋರಾಟವನ್ನು ತೆರೆದಿಟ್ಟಿದೆ. ತುಳು ಭಾಷೆಯನ್ನು ಅರ್ಥೈಸಿಕೊಳ್ಳಲಾಗದ ಅನೇಕರಿಗೆ ಚಿತ್ರದ ದೃಶ್ಯಗಳೇ ಕಥೆಯನ್ನು ಅರ್ಥ ಮಾಡಿಸಿವೆ.

ಒಟ್ಟಾರೆಯಾಗಿ ಬಾಯಿಲ್ಡ್ ರೈಸ್ ಸಮಸ್ತ ಕರಾವಳಿಗರ ಧ್ವನಿಯಾಗಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಲಿರಿಕಲ್ ಹಾಡಿನ ಮೂಲಕ ಒಂದು ರೀತಿಯ ಸಂಚಲನ ಸೃಷ್ಠಿಸಿದ ಬಾಯಿಲ್ಡ್ ರೈಸ್ ತುಳು ಕಿರುಚಿತ್ರ ಈಗ ಹೊಸದಾದ ಕ್ರಾಂತಿಯನ್ನು ಸೃಷ್ಠಿಸಿದೆ.

ದಿವ್ಯ.ಎಲ್ ಮೂಡಿಗೆರೆ ನಿರ್ಮಾಣದಲ್ಲಿರುವ ಈ ಕಿರುಚಿತ್ರದಲ್ಲಿ ಮೇಘಾ.ಕೆ, ಯೋಗಿನಿ, ಮನ್ವಿತ್, ಆಯುಷ್ಮಾನ್, ಶ್ರಾವಣಿ, ಸಾನ್ವಿ ನಟಿಸಿದ್ದಾರೆ.
ಜನಾರ್ಧನ ಮೌರ್ಯ ಛಾಯಾಗ್ರಹಣ, ಆರ್ ಪ್ರದೀಪ್ ಗರ್ಡಾಡಿಯವರ ಸಂಕಲನ, ಆ್ಯಂಟೊನಿಯವರ ಸಂಗೀತ, ಜಯಂತ್ ನಿಟ್ಟಡೆ ಹಾಗೂ ಅಭ್ಯುದಯರವರ ಸಾಹಿತ್ಯಕ್ಕೆ ಸಾಯಿರೂಪ ದಾಲಿಂಬ ಧ್ವನಿ ನೀಡಿದ್ದಾರೆ.

ಜಯಂತಿ, ಶೇಖರ್ ಮಾಲಾಡಿ, ಪ್ರೇಮ್ ಕುಮಾರ್, ಸಂತೋಷ್ ಬಾಬು, ಪ್ರಶಾಂತ್ ಬೆಳ್ತಂಗಡಿ ಹಾಗೂ ಇನ್ನೂ ಅನೇಕರ ಸಹಕಾರದಲ್ಲಿ ಈ ಕಿರುಚಿತ್ರ ಮೂಡಿ ಬಂದಿದೆ