Friday, January 24, 2025
ಸುದ್ದಿ

Miss Diva Universe 2022 : ತುಳುನಾಡಿನ ಬೆಡಗಿ ದಿವಿತಾ ರೈಗೆ ಪ್ರತಿಷ್ಟಿತ ʼಲಿವಾ ಮಿಸ್ ದಿವಾ ಯುನಿವರ್ಸ್ʼ ಕಿರೀಟ–ಕಹಳೆ ನ್ಯೂಸ್

ಕರಾವಳಿಯ ಯುವತಿಯರು ಈ ಬಾರಿ ಸೌಂದರ್ಯ ಸ್ಪರ್ಧೆಗಳಲ್ಲಿ (Beauty contest) ಭರ್ಜರಿ ಯಶಸ್ಸು ಗಳಿಸುತ್ತಿದ್ದಾರೆ. ಕರಾವಳಿಯ ಚೆಲುವೆ, ಬಾಲಿವಡ್ ನಟಿ , ಜಗದೇಕ ಸುಂದರಿ ಐಶ್ವರ್ಯ ರೈ (aishwarya rai) ಯಿಂದ ಸ್ಪೂರ್ತಿ ಪಡೆದಂತಿರುವ ತುಳುನಾಡಿನ ಹುಡುಗಿಯರು ಪ್ಯಾಶನ್ ಲೋಕದಲ್ಲಿ ಭರ್ಜರಿಯಾಗಿಯೇ ಮಿಂಚುತ್ತಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಪ್ರತಿಷ್ಠಿತ ಮಿಸ್ ಇಂಡಿಯಾ (Miss India) ಪಟ್ಟ ತುಳುನಾಡಿನ ಬೆಡಗಿ ಸಿನಿ ಶೆಟ್ಟಿಗೆ (Sini Shetty) ಒಲಿದಿತ್ತು. ಇದೀಗ ತುಳುನಾಡಿನ ಮತ್ತೊರ್ವ ಕುವರಿ ದಿವಿತಾ ರೈ (Divita Rai) ಪ್ರತಿಷ್ಠಿತ ಲಿವಾ ಮಿಸ್ ದಿವಾ ಯುನಿಸವರ್ಸ್-2022 (LIVA Miss Diva Universe 2022) ಸೌಂದರ್ಯ ಸ್ಪರ್ಧೆಯ ವಿಜೇತರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಲತ : ಮಂಗಳೂರಿನವರಾಗಿರುವ 23 ರ ಹರೆಯದ ಈ ಸುಂದರಿ ಮಿಸ್ ಯುನಿವರ್ಸ್ 2022 ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮುಂಬೈನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2021ರ ಮಿಸ್ ಯುನಿವರ್ಸ್ (Miss Universe) ಹರ್ನಾಝ್ ಸಂಧು (harnaaz Kaur sandhu) ಅವರು ಲಿವಾ ಮಿಸ್ ದಿವಾ 2022 ಪ್ರಶಸ್ತಿ ಕಿರೀಟವನ್ನು ಆಕೆಗೆ ತೊಡಿಸಿದರು.

ಅಪಾರ ಪ್ರೇಕ್ಷಕರು ಮತ್ತು ಸಿನಿಮಾ ಸ್ಟಾರ್ ಗಳು ಭಾಗವಹಿಸಿದ್ದ ಈ ಕಾರ್ಯಕ್ರಮ ಮುಂಬೈನ ಮಹಾಲಕ್ಷ್ಮಿಯಲ್ಲಿರುವ ಫೇಮಸ್ ಸ್ಟುಡಿಯೊದಲ್ಲಿ ನಡೆಯಿತು. ಮಿಸ್ ಯುನಿವರ್ಸ್ 2022 ಹರ್ನಾಝ್ ಕೌರ್ ಸಂಧು ಮತ್ತು ಮಾಜಿ ಮಿಸ್ ಯುನಿವರ್ಸ್ ಲಾರಾದತ್ತಾ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು.