Friday, January 24, 2025
ಸುದ್ದಿ

ಅಯ್ಯೋ ವಿಧಿಯೇ..? ಕುಪ್ಪೆಟ್ಟಿ ಹಾಗೂ ಪುಂಜಾಲಕಟ್ಟೆಯಲ್ಲಿ ಭೀಕರ ರಸ್ತೆ ಅಪಘಾತ : ಬೇರೆ ಬೇರೆ ಕಡೆ ನಡೆದ ಅಪಘಾತದಲ್ಲಿ ಅಣ್ಣ ತಂಗಿಯ ಮಕ್ಕಳು ಧಾರುಣ ಸಾವು..! : ಒಂದೇ ಮನೆಯಲ್ಲಿ ಎರಡು ಸಾವಿನ ನೋವು –ಕಹಳೆ ನ್ಯೂಸ್

ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಪ್ಪೆಟ್ಟಿಯಲ್ಲಿ ನಡೆದಿದೆ. ಉಪ್ಪಿನಂಗಡಿಯಿಂದ ಬೆಳ್ತಂಗಡಿಗೆ ತೆರಳುತ್ತಿದ್ದ ಟಿಪ್ಪರ್ ಮತ್ತು ಬೆಳ್ತಂಗಡಿಯಿAದ ಉಪ್ಪಿನಂಗಡಿಗೆ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಘಟನೆ ನಡೆಯುತ್ತಿದ್ದಂತೆ ಟಿಪ್ಪರ್ ಸಾವರ ವಾಹನ ನಿಲ್ಲಿಸದೆ ಸ್ಧಳದಿಂದ ಪರಾರಿಯಾಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಬೈಕ್ ಸವಾರನನ್ನು ಉಳಿ ಗ್ರಾಮದ ನಿವಾಸಿ ಸಫ್ವಾನ್ (೨೦) ಎಂದು ಗುರುತಿಸಲಾಗಿದೆ.ಡಿಕ್ಕಿ ಹೊಡೆದ ಟಿಪ್ಪರ್ ಚಾಲಕ ನಿಲ್ಲಿಸದೆ ಪರಾರಿಯಾಗಿದ್ದು, ಟಿಪ್ಪರ್ ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಉಪ್ಪಿನಂಗಡಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶಫಿಕ್ ಸಫ್ವಾನ್ ಅಣ್ಣ ತಮ್ಮಂದಿರು.?ಇನ್ನು ಇಂದು ಬೆಳ್ಳಂಬೆಳಗ್ಗೆ ಪುಂಜಾಲಕಟ್ಟೆಯಲ್ಲಿ ಬೈಕ್‌ಗಳೆರಡು ಡಿಕ್ಕಿ ಹೊಡೆದು ವಿದ್ಯಾರ್ಥಿ ಶಫೀಕ್ ಸ್ದಳದಲ್ಲೆ ಸಾವನ್ನಪ್ಪಿದ್ದ. ಶಫಿಕ್ ಮತ್ತು ಕುಪ್ಪೆಟ್ಟಿಯಲ್ಲಿ ಅಫಘಾತಗೊಂಡು ಸಾವನ್ನಪ್ಪಿದ ಸಫ್ವಾನ್ (೨೦) ಅಣ್ಣ ತಮ್ಮಂದಿರು ಎಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿದೆ.

ಪುಂಜಾಲಕಟ್ಟೆ ಘಟನೆಪುಂಜಾಲಕಟ್ಟೆಯಲ್ಲಿ ಬೈಕ್‌ಗಳೆರಡು ನಡುವೆ ಅಪಘಾತ ಸಂಭವಿಸಿ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದ. ಮೃತ ವಿದ್ಯಾರ್ಥಿಯನ್ನು ಕರಾಯ ಮುರಿಯಾಳ ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ, ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಎರಡನೇ ವರ್ಷದ ಪದವಿ ವಿದ್ಯಾರ್ಥಿ ಶಫೀಕ್ ಎಂದು ಗುರುತಿಸಲಾಗಿದೆ. ಶಫೀಕ್ ಮಂಗಳೂರಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮತ್ತೊಂದು ಬೈಕ್ ನಲ್ಲಿದ್ದವರು ಕೂಡ ಗಂಭೀರ ಗಾಯಗೊಂಡಿದ್ದು,ಸ್ಥಳಕ್ಕೆ ಪುಂಜಾಲಕಟ್ಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆಇದೀಗ ಪುಂಜಾಲಕಟ್ಟೆಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಯುವಕ ಹಾಗೂ ಕುಪ್ಪೆಟ್ಟಿಯಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಯುವಕ ಒಂದೇ ಮನೆಯವರು ಅನ್ನೋ ವಿಚಾರ ಬೆಳಕಿಗೆ ಬಂದಿದೆ. ಇವರಿಬ್ಬರು ಅಣ್ಣ ತಂಗಿಯರ ಮಕ್ಕಳಾಗಿದ್ದು ಮನೆ ಮಂದಿಯ ವೇದನೆ ಮುಗಿಲು ಮುಟ್ಟಿದೆ.