ಬಂಗ್ರಕೂಳೂರಿನ ಟೆಂಟ್ ವಾಸಿ ಕೋಲೆ ಬಸಬ ಸಮುದಾಯ ತೆರವು – ಸೂಕ್ತ ಸೂರಿನ ನೆರವಿಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ : ಸ್ಧಳಾಂತರದ ನೋವಿನಲ್ಲಿ ಕಣ್ಣೀರಿಟ್ಟ ಜೀವಗಳಿಗೆ ನೆರವಾದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ – ಕಹಳೆ ನ್ಯೂಸ್
ಮಂಗಳೂರು : ಸೆ.೨ರAದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಆಗಮಿಸುವ ಹಿನ್ನಲೆಯಲ್ಲಿ ಅದ್ದೂರಿ ತಯಾರಿಗಳು ನಡೆಯುತ್ತಿದೆ.
ಇನ್ನು ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಭದ್ರತಾ ಕಾರಣಗಳಿಗಾಗಿ, ಪಾರ್ಕಿಂಗ್ ಮತ್ತು ಇತರ ಕಾರ್ಯಕ್ರಮ ಸಂಬAಧಿತ ಅವಶ್ಯಕತೆಗಳಿಗಾಗಿ ಲಭ್ಯವಿರುವ ಪ್ರತಿಯೊಂದು ಸ್ಥಳವನ್ನು ಮುನ್ನೆಚ್ಚರಿಕಾ ಕ್ರಮದ ಮೂಲಕ ಬಳಸಿಕೊಳ್ಳಲು ತಿಳಿಸಲಾಗಿದೆ. ಆ ಕಾರಣಕ್ಕಾಗಿ ಬಂಗ್ರ ಕೂಳೂರಿನ ಗುರುದ್ವಾರದಲ್ಲಿ ಗೋಲ್ಡ್ ಫಿಂಚ್ ಸಂಸ್ಥೆಗೆ ಸೇರಿದ ಜಾಗದಲ್ಲಿ ತಾತ್ಕಾಲಿಕ ಟೆಂಟ್ ನಲ್ಲಿದ್ದ ಕೋಲೆ ಬಸವ ಸಮುದಾಯದ ಸುಮಾರು ೩೦ಕ್ಕೂ ಅಧಿಕ ಜನರನ್ನು ಅಲ್ಲಿಂದ ತೆರವುಗೊಳಿಸಲು ಪೋಲೀಸರು ಸೂಚಿಸಿದ್ದರು.
ಬಂಗ್ರ ಕೂಳೂರಿನ ಗುರುದ್ವಾರದಲ್ಲಿ ಟೆಂಟ್ ಹಾಕಿಕೊಂಡು ಈ ಸಮುದಾಯ ವಾಸಿಸ್ತಾ ಇದ್ದು, ಸಮಾವೇಶದ ಸಂದರ್ಭದಲ್ಲಿ ಯಾವುದೇ ಅವಘಡಗಳು ಸಂಭವಿಸಿದ್ರೆ, ಯಾರೋ ಮಾಡಿದ ತಪ್ಪಿಗೆ ವಿಚಾರಣೆ ಸಂದರ್ಭದಲ್ಲಿ ಈ ಬಡ ಸಮುದಾಯಕ್ಕೂ ಸಮಸ್ಯೆ ಉಂಟಾಗುತ್ತದೆ ಎಂಬ ಕಾರಣಕ್ಕಾಗಿ, ಮುನ್ನೆಚ್ಚರಿಕಾ ದೃಷ್ಟಿಯಿಂದ ಇವರನ್ನ ಇಲಾಖೆ ಬೇರೆಡೆಗೆ ತೆರಳಲು ಸೂಚನೆ ನೀಡಿತ್ತು.
ಆದರೆ “ಪ್ರಧಾನಿ ನರೇಂದ್ರ ಮೋದಿ ಭೇಟಿಯ ಹಿನ್ನೆಲೆ ; ಬಂಗ್ರಕೂಳೂರಿನ ಟೆಂಟ್ ನಿವಾಸಿಗಳ ಎತ್ತಂಗಡಿ” ಎಂಬ ಸುದ್ದಿಯನ್ನ ಖಾಸಗಿ ವಾಹಿನಿಯೊಂದು ಪ್ರಕಟಿಸಿ ಕೋಲೆ ಬಸವ ಸುಮಾದಾಯದ ಜನರು ಸರ್ಕಾರ ಕಡೆಗಣಿಸಿದೆ ಎಂಬAತೆ ಬಿಂಬಿಸಿ ವರದಿ ಪ್ರಸಾರ ಮಾಡಿತ್ತು.
ಕೋಲೆ ಬಸವ ಸಮುದಾಯದ ಜನರ ಸ್ಧಳಾಂತರದ ವಿಚಾರದ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು ಇದೀಗ ರಾಜ್ಯಾಧ್ಯಕ್ಷರು ಸಂಸದರೂ ಆದ ನಳಿನ್ ಕುಮಾರ್ ಕಟೀಲ್ ಇವರಿಗೆ ನೆರವಾಗಿದ್ದಾರೆ. ನಳಿನ್ ಕುಮಾರ್ ಕಟೀಲ್ ಅವರು ತಕ್ಷಣ ಕೋಲೆ ಬಸವ ಸಮುದಾಯದ ಜನರ ಕಷ್ಟಕ್ಕೆ ಸ್ಪಂಧಿಸಿ ಅವರಿಗೆ ಬೇರೆಡೆ ಸೂಕ್ತ ಆಶ್ರಯ ಕಲ್ಪಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದ್ದಾರೆ.
ಎಷ್ಟೇ ಅದ್ದೂರಿ ಕಾರ್ಯಕ್ರಮವಾದರೂ ಅದು ಸರಿಯಾದ ರೀತಿ ಅಚ್ಚುಕಟ್ಟಾಗಿ ಆಯೋಜನೆಯಾಗಬೇಕು. ಈ ನಡುವೆ ಅದರಿಂದ ಸಮಾಜದ ಯಾವೊಬ್ಬ ವ್ಯಕ್ತಿಗೂ ಯಾವುದೇ ಸಮಸ್ಯೆಯಾಗಬಾರದು ಎಂದು ಯೋಚಿಸುವ ನಾಯಕ ಅಂದ್ರೆ ಅದು ನಳಿನ್ ಕುಮಾರ್ ಕಟೀಲ್. ಈ ಹಿನ್ನಲೆಯಲ್ಲಿ ಇದೀಗ ಕೋಲೆ ಬಸವ ಸಮುದಾಯಕ್ಕೆ ನಳಿನ್ ಕುಮಾರ್ ಕಟೀಲ್ ಸಮರ್ಪಕವಾದ ಆಶ್ರಯ ಕಲ್ಪಿಸಲು ಚೂಚಿವುವ ಮೂಲಕ ಮತ್ತೊಮ್ಮೆ ಅದನ್ನು ನಿರೂಪಿಸಿದ್ದಾರೆ.