ಕಲ್ಲಡ್ಕ : ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಆಜಾದ್ ಭವನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪುಣೆಯ ಮಕ್ಕಳ ತಜ್ಞ ಡಾ| ಸುಧಾಕರ ಶೆಟ್ಟಿ, ಉದ್ಘಾಟಿಸಿ ಮಾತಾನಾಡಿದ ಇವರು ಸಂಸ್ಕರದೊಂದಿಗೆ ಉದ್ಯೋಗಿಗಾಳಗುವುದಕ್ಕಿಂತ ಉದ್ಯೋಗದಾತರಾಗೋಣ. ಇಂತಹ ಅದ್ಭುತ ವಿದ್ಯಾಸಂಸ್ಥೆ ನಾನೆಲ್ಲೂ ನೋಡಿಲ್ಲ. ಸಂಸ್ಕಾರದ ಜೊತೆಗೆ ಶಿಕ್ಷಣಕ್ಕೆ ಪ್ರಾಶಸ್ತ್ಯ ಕೊಡುತ್ತಿದೆ , ಇನಷ್ಟು ಎತ್ತರಕ್ಕೆ ಈ ಸಂಸ್ಥೆ ಬೆಳೆಯಲಿ
ಹಾಗೂ ರಾಷ್ಟ್ರದ್ಯಂತ ಕೀರ್ತೀ ಪಸರಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪುತ್ತೂರು ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ ಪ್ರಭಾಕರ ಭಟ್ ಕಲ್ಲಡ್ಕ, ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕ್ಯಾ. ಮಣಿವಣ್ಣನ್ ಪಿ.(IAS), ಭಟ್ಕಳ ವಿಧಾನಸಭಾ ಕ್ಷೇತ್ರ ಶಾಸಕ ಸುನಿಲ್ ನಾೈಕ್, ಬೆಂಗಳೂರಿನ ಉದ್ಯಮಿ ಕೃಷ್ಣಮೂರ್ತಿ, ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಮಾಲಕ ಕೆ. ಮೋಹನ್ ಕುಮಾರ್, ಮುಂಬಯಿಯ ಸಾಮಾಜಿಕ ಕಾರ್ಯಕರ್ತ ಬಾಲಕೃಷ್ಣ ಭಂಡಾರಿ, ಕ್ಯಾ. ಮಣಿವಣ್ಣನ್ ಪಿ. ಆಪ್ತ ಸಹಾಯಕ ಸುಮುಖ್ ಬೆಟಗೇರಿ, ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ರಾಷ್ಟ್ರಸೇವಿಕಾ ಸಮಿತಿಯ ಹಿರಿಯ ಕಾರ್ಯಕರ್ತೆ ಶ್ರೀಮತಿ ಕಮಲಾ ಪ್ರಭಾಕರ್ ಭಟ್ ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಸದಸ್ಯರಾದ ಗೋಪಾಲ್ ಶೆಣೈ, ಪದವಿ ಪ್ರಾಚಾರ್ಯ ಕೃಷ್ಣಪ್ರಸಾದ್ಕಾ ಯರ್‍ಕಟ್ಟೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಾಚಾರ್ಯರಾದ ಕೃಷ್ಣಪ್ರಸಾದ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ಕೀರ್ತಿ ವಂದಿಸಿ, ನಿಶಾ, ನಿಖಿತ ಕಾರ್ಯಕ್ರಮ ನಿರೂಪಿಸಿದರು