Friday, January 24, 2025
ಸುದ್ದಿ

ಅರಂತೋಡು: ಅರಂತೋಡು ಕಾಲೇಜು ವತಿಯಿಂದ ಕೆದಂಬಾಡಿ ರಾಮಯ್ಯ ಗೌಡ ರ ಕಂಚಿನ ಪ್ರತಿಮೆಗೆ ಭವ್ಯ ಸ್ವಾಗತ -ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೆಹರು ಸ್ಮಾರಕ ಪದವಿಪೂರ್ವ ಕಾಲೇಜು ಅರಂತೋಡು ಇಲ್ಲಿನ ಆಡಳಿತ ಮಂಡಳಿ ಮತ್ತು ಕಾಲೇಜಿನ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ರ ಕಂಚಿನ ಪ್ರತಿಮೆ ಪುರಪ್ರವೇಶ ವನ್ನು ಶಿಕ್ಷಕರಾದ ಶ್ರೀ ಮನೋಜ್ ಮತ್ತು ಸಂದೇಶ್ ನೇತೃತ್ವದಲ್ಲಿ ಸ್ಕೌಟ್ಸ್ ತಂಡದ ಬ್ಯಾಂಡಿನೊಂದಿಗೆ ,ಕಾಲೇಜಿನ ಸಂಚಾಲಕರಾದ ಶ್ರೀ ಕೆ ಆರ್ ಗಂಗಾಧರ್, ಪ್ರಾಂಶುಪಾಲ ಶ್ರೀ ರಮೇಶ್, ಮುಖ್ಯ ಗುರು ಶ್ರೀ ಸೀತಾರಾಮ, ರಥಕ್ಕೆ ಮಾಲಾರ್ಪಣೆ ಮಾಡಿದರು.ಇತಿಹಾಸ ಉಪನ್ಯಾಸಕ ಶ್ರೀ ಮೋಹನ್ ಚಂದ್ರ ತೆಂಗಿನ ಕಾಯಿ ಒಡೆದು ರಥಕ್ಕೆ ಸ್ವಾಗತಿಸಿದರು.ಕಾಲೇಜಿನ ವಿದ್ಯಾರ್ಥಿಗಳು ಮಾರ್ಗದ ಇಕ್ಕೆಲಗಳಲ್ಲಿ ನಿಂತು ರಥಕ್ಕೆ ಪುಷ್ಪಾರ್ಚನೆ ಮಾಡಿದರು.ಕಾಲೇಜಿನ ಬೋಧಕರಾದ ಸುರೇಶ್ ವಾಗ್ಲೆ, ಲಿಂಗಪ್ಪ , ಗೌರಿಶಂಕರ, ಕಿಶೋರ್ ಕುಮಾರ್, ಸೋಮಶೇಖರ್,ಮಮತ, ಶ್ರೀಲತಾ, ಕುಸುಮಾವತಿ, ಅಶ್ವಿನಿ, ಭಾಗ್ಯಶ್ರೀ, ನಂದಿನಿ,ನಯನಾ, ವಿದ್ಯಾಶಾಲಿನಿ, ದಿವ್ಯ, ಲಿಖಿತ, ವಿಜಯ್, ಭವ್ಯ, ಅಶ್ವಿನಿ, ಚಂದ್ರಶೇಖರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.