Friday, January 24, 2025
ಸುದ್ದಿ

ಪುತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – ಮಕ್ಕಳ ಹಬ್ಬ “ತೆಂಕಿಲ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಕಿರಿಯ ಪ್ರಾಥಮಿಕ ಮತ್ತು ಹಿರಿಯರ ಪ್ರಾಥಮಿಕ ವಿಭಾಗದ ಸಮಗ್ರ ಪ್ರಥಮ ಪ್ರಶಸ್ತಿ”- ಕಹಳೆ ನ್ಯೂಸ್

ಪುತ್ತೂರು ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯು 29-08-2022ರಂದು ಪುತ್ತೂರಿನ ಮಾಯಿದೆದೇವುಸ್ ಶಾಲೆಯಲ್ಲಿ ನಡೆಯಿತು.
ಹಿರಿಯ ವಿಭಾಗ: ಇಂಗ್ಲೀಷ್ ಕಂಠಪಾಠ: ಸಾನ್ವಿ ಚನಿಲ-ಪ್ರಥಮ, ಕನ್ನಡ ಭಾಷಣ: ಸಾನ್ವಿ.ಎಸ್-ಪ್ರಥಮ, ಭಕ್ತಿಗೀತೆ: ಅನ್ನಿಕ-ಪ್ರಥಮ, ಲಘು ಸಂಗೀತ: ಸುಪ್ರಜರಾವ್-ಪ್ರಥಮ, ಅಭಿನಯಗೀತೆ: ಅನನ್ಯ ನಾವುಡ-ಪ್ರಥಮ, ಕಥೆ ಹೇಳುವುದು: ಚಿಂತನ.ಸಿ-ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ: ನಾಗಾಭೂಷಣಕಿಣಿ-ಪ್ರಥಮ, ಛದ್ಮವೇಷ: ಶ್ರೀರಂಜಿನಿ-ಪ್ರಥಮ, ಚಿತ್ರಕಲೆ: ನಿಲಿಷ್ಕಾ-ಪ್ರಥಮ, ಆಶುಭಾಷಣ: ಸಾನ್ವಿ.ಎಸ್-ದ್ವಿತೀಯ, ಕನ್ನಡ ಕಂಠಪಾಠ: ವಿಭು.ಜಿ.ಭಟ್-ತೃತೀಯ, ಹಾಸ್ಯ: ಅದ್ವಿಕ್-ತೃತೀಯ ಸ್ಥಾನವನ್ನು ಪಡೆಯುವುದರ ಮೂಲಕ ಸಮಗ್ರ ಪ್ರಶಸ್ತಿಯ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಅಂತೆಯೇ ಕಿರಿಯರ ವಿಭಾಗದಲ್ಲಿ ಇಂಗ್ಲೀಷ್ ಕಂಠಪಾಠ: ರಿತ್ವಿಜ್.ಆರ್-ಪ್ರಥಮ, ಛದ್ಮವೇಷ: ಚಮನ್.ಪಿ.ಡಿ-ಪ್ರಥಮ, ಧಾರ್ಮಿಕ ಪಠಣ ಸಂಸ್ಕೃತ: ಅಭಿಷ್ಠಶಂಕರ ಶರ್ಮ-ಪ್ರಥಮ, ಭಕ್ತಿಗೀತೆ ಅನಘ.ಹೆಚ್.ಭಟ್-ಪ್ರಥಮ, ಕಥೆ ಹೇಳುವುದು-ಆರಾಧ್ಯಕೃಷ್ಣ-ದ್ವಿತೀಯ, ಆಶುಭಾಷಣ: ಪ್ರಥಮ್-ದ್ವಿತೀಯ, ಲಘು ಸಂಗೀತ: ವೈಷ್ಣವಿ.ಕೆ-ದ್ವಿತೀಯ, ಅಭಿನಯಗೀತೆ: ವೈಷ್ಣವಿ.ಎಂ-ತೃತೀಯ ಸ್ಥಾನ ಗಳಿಸಿ ಸಮಗ್ರ ಪಥಮ ಪ್ರಶಸ್ತಿ ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿರುತ್ತಾರೆ.