Wednesday, January 22, 2025
ಸುದ್ದಿ

ವಿಕಲಚೇತನರಿಗೆ ಟ್ರೈಸ್ಕೂಟರ್ ಹಾಗೂ ವೀಲ್ ಚೇರ್ – ಶಾಸಕ ರಘುಪತಿ ಭಟ್ ವಿತರಣೆ –ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

2021-22 ನೇ ಸಾಲಿನ ನಗರಸಭಾ ಅನುದಾನದ ಶೇ. 5ರ ನಿಧಿಯಡಿ 75 ಶೇಕಡಕ್ಕಿಂತ ಹೆಚ್ಚಿನ ವಿಕಲಚೇತನರಿಗೆ ಟ್ರೈಸ್ಕೂಟರ್ ಹಾಗೂ ವೀಲ್ ಚೇರ್ ಗಳನ್ನು ಇಂದು ದಿನಾಂಕ 30-08-2022 ರಂದು ನಗರ ಸಭೆಯಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಫಲಾನುಭವಿಗೆ ವಿತರಿಸಿದರು.

ಸೆಟ್ಟಿಬೆಟ್ಟು ವಾರ್ಡಿನ ರಾಘವೇಂದ್ರ ನಾಯ್ಕ್ ಬಿನ್ ನಾರಾಯಣ ನಾಯ್ಕ್, ಪೆರಂಪಳ್ಳಿ ವಾರ್ಡಿನ ಅರೆಲ್ ಡಿಸೋಜಾ ಬಿನ್ ಆಲ್ಬರ್ಟ್ ಡಿಸೋಜಾ, ಒಳಕಾಡು ವಾರ್ಡಿನ ಬಿ.ಎಸ್ ಸುರೇಶ ಬಿನ್ ಎಸ್.ವಿ ನರಸಿಂಹ ಭಟ್ ಅವರಿಗೆ ಟ್ರೈಸ್ಕೂಟರ್ ಹಾಗೂ ಕಸ್ತೂರ್ಬಾ ನಗರ ವಾರ್ಡಿನ ಭಾಸ್ಕರ ಪೂಜಾರಿ ಅವರಿಗೆ ವೀಲ್ ಚೇರ್ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮೀ ಮಂಜುನಾಥ ಕೊಳ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಪೌರಾಯುಕ್ತರಾದ ಉದಯ್ ಶೆಟ್ಟಿ ಹಾಗೂ ನಗರ ಸಭೆಯ ಸರ್ವ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.