Recent Posts

Tuesday, January 21, 2025
ಸುದ್ದಿ

ಪುತ್ತೂರು: ಚಲಿಸುತ್ತಿದ್ದ ರೈಲಿನಲ್ಲಿ ಲಕ್ಷಾಂತರ ರೂ. ಮೌಲ್ಯದ ನಗ-ನಗದು ದರೋಡೆ – ಕಹಳೆ ನ್ಯೂಸ್

ಪುತ್ತೂರು, ಆ.30: ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಇದ್ದ ವ್ಯಾನಿಟಿ ಬ್ಯಾಗ್ ಅನ್ನು ದರೋಡೆ ಮಾಡಿ ಅಪರಿಚಿತ ವ್ಯಕ್ತಿಯೋರ್ವ ಪರಾರಿಯಾದ ಘಟನೆ ಕಬಕ-ಪುತ್ತೂರು ರೈಲು ನಿಲ್ದಾಣದ ಸಮೀಪ ಮಂಗಳವಾರ ನಸುಕಿನ ಜಾವ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಕಾರವಾರ ಮೂಲದ ಶಿಕ್ಷಕ ರಮೇಶ್ ಮತ್ತು ನಿರ್ಮಲಾ ದಂಪತಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದಿದ್ದ ವ್ಯಾನಿಟಿ ಬ್ಯಾಗ್ ಕಳೆದುಕೊಂಡವರು.

ಘಟನೆ ವಿವರ: ರಮೇಶ್ ಮತ್ತು ನಿರ್ಮಲಾ ದಂಪತಿ ಆ.29ರಂದು ರಾತ್ರಿ ಬೆಂಗಳೂರಿನಿಂದ ಕಾರವಾರಕ್ಕೆ ರೈಲಿನಲ್ಲಿ ಹೊರಟಿದ್ದರು. ಇವರಿದ್ದ ರೈಲು ಮಂಗಳವಾರ ನಸುಕಿನ ಜಾವ 2:20ರ ಸುಮಾರಿಗೆ ಕಬಕ ಪುತ್ತೂರು ರೈಲ್ವೇ ನಿಲ್ದಾಣಕ್ಕೆ ತಲುಪಿತ್ತು. ಅಲ್ಲಿಂದ 2:30 ಪುನಃ ಸಂಚಾರ ಆರಂಭಿಸಿದ ರೈಲು ಪುತ್ತೂರು ಹಾರಾಡಿ ಸೇತುವೆ ದಾಟಿ ಮುಂದೆ ಸಿಟಿ ಗುಡ್ಡೆ ತುಲುಪುತ್ತಿದ್ದಂತೆ ನಿರ್ಮಲಾ ಮಲಗುವ ವೇಳೆ ತಲೆಯಡಿಯಲ್ಲಿ ಇಟ್ಟಿದ್ದ ಚಿನ್ನಾಭರಣ ಮತ್ತು ನಗದು ಹೊಂದಿದ್ದ ವ್ಯಾನಿಟಿ ಬ್ಯಾಗ್‌ನ್ನು ಅಪರಿಚಿತ ವ್ಯಕ್ತಿ ಎಗರಿಸಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ ಆ ವ್ಯಕ್ತಿ ನಿರ್ಮಲಾರನ್ನು ಬಲವಾಗಿ ತಳ್ಳಿದ್ದಾರೆ. ಈ ವೇಳೆ ನಿರ್ಮಲಾ ಅವರ ಕುತ್ತಿಗೆಯಲ್ಲಿದ್ದ ವ್ಯಾನಿಟಿ ಬ್ಯಾಗ್ ನ ಕೈ ತುಂಡಾಗಿದ್ದು, ದರೋಡೆಕೋರನು ವ್ಯಾನಿಟಿ ಬ್ಯಾಗ್‌ನೊಂದಿಗೆ ರೈಲಿನಿಂದ ಹೊರಗೆ ಹಾರಲು ಯತ್ನಿಸಿದ್ದಾನೆ. ಮತ್ತೆ ಆತನನ್ನು ಸೆರೆ ಹಿಡಿದ ಮಹಿಳೆ, ತುರ್ತು ಸಂದರ್ಭ ರೈಲು ನಿಲ್ಲಿಸುವ ಚೈನ್ ಎಳೆದಿದ್ದಾರೆ. ಅದರಂತೆ ರೈಲಿನ ವೇಗ ತಗ್ಗಿದಾಗ ಅಪರಿಚಿತ ನಿರ್ಮಲಾರಿಂದ ಬಿಡಿಸಿಕೊಂಡು ರೈಲಿನಿಂದ ಹಾರಿದ್ದಾನೆ. ಈ ವೇಳೆ ಆಯತಪ್ಪಿದ ನಿರ್ಮಲಾ ಕೂಡಾ ಆಯತಪ್ಪಿ ರೈಲಿನಿಂದ ಹಳಿಯ ಮೇಲೆ ಬಿದ್ದಿದ್ದಾರೆ. ದರೋಡೆಕೋರನು ಬ್ಯಾಗಿನೊಂದಿಗೆ ಪರಾರಿಯಾಗಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.

ಗಾಯಗೊಂಡ ನಿರ್ಮಲಾರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ದರೋಡೆಗೊಳಗಾದ ಬ್ಯಾಗ್ ನಲ್ಲಿ 40 ಸಾವಿರ ರೂ. ನಗದು ಮತ್ತು ಚಿನ್ನಾಭರಣ ಸೇರಿ ಒಟ್ಟು 8 ಲಕ್ಷ ರೂ. ಮೌಲ್ಯದ ಸೊತ್ತುಗಳಿದ್ದವು ಎಂದು ರಮೇಶ್ ಮತ್ತು ನಿರ್ಮಲಾ ಮಂಗಳೂರು ರೈಲ್ವೇ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.