Thursday, January 23, 2025
ಸುದ್ದಿ

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಇವರ ಶುಭ ಹಸ್ತದಿಂದ `ಸನಾತನ ಪಂಚಾಂಗ – 2023′ ರ ಲೋಕಾರ್ಪಣೆ – ಕಹಳೆ ನ್ಯೂಸ್

ಧರ್ಮಸ್ಥಳ : ಆ. 30ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರು ತಮ್ಮ ಶುಭ ಹಸ್ತದಿಂದ ‘ಸನಾತನ ಪಂಚಾಂಗ – 2023 ರ ಲೋಕಾರ್ಪಣೆಯನ್ನು ಮಾಡಿ ಪಂಚಾಂಗದ ರಚನೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು ! ಈ ಸಂದರ್ಭದಲ್ಲಿ ರಾಜ್ಯಸಭೆಗೆ ನೂತನವಾಗಿ ಆಯ್ಕೆಯಾದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ವೇಳೆ ಉದ್ಯಮಿಗಳು ಹಾಗೂ ಹಿಂದೂ ಜಾಗರಣ ವೇದಿಕೆಯ ಶ್ರೀ. ಪದ್ಮನಾಭ ಶೆಟ್ಟಿಗಾರ್, ವಕೀಲರಾದ ಶ್ರೀ. ಉದಯಕುಮಾರ್ ಬಂದಾರು, ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸಂಯೋಜಕರು ಹಾಗೂ ‘ಒಕ್ಕಲಿಗ ಯಾನೆ ಗೌಡರ ಯುವ ವೇದಿಕೆ ನಿಡ್ಲೆ ಗ್ರಾಮದ ಅಧ್ಯಕ್ಷರಾದ ಶ್ರೀ. ಗಿರೀಶ್ ಗೌಡ ನಿಡ್ಲೆ, ಸನಾತನ ಸಂಸ್ಥೆಯ ಶ್ರೀ. ಆನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಶಿಧರ್ ಎಂ. ಗೌಡ ಮತ್ತಿತರರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸನಾತನ ಪಂಚಾಂಗವು ಕಳೆದ 17 ವರ್ಷಗಳಿಂದ 7 ಭಾಷೆಗಳಲ್ಲಿ ಲಕ್ಷಾಂತರ ಪ್ರತಿಗಳಲ್ಲಿ ಮುದ್ರಣವಾಗುತ್ತಿದೆ. ಈ ಪಂಚಾಂಗದಲ್ಲಿ ಪ್ರತಿ ತಿಂಗಳುಗಳಲ್ಲಿ ಬರುವ ಹಬ್ಬ-ಹರಿದಿನಗಳನ್ನು ಧರ್ಮಶಾಸ್ತ್ರದಂತೆ ಹೇಗೆ ಆಚರಿಸಬೇಕು ಎಂಬುದರ ಮಾಹಿತಿ, ದೇವತೆಗಳ ಸಾತ್ತ್ವಿಕ ಚಿತ್ರಗಳು, ಧಾರ್ಮಿಕ ವಿಧಿಗಳ ಆಚರಣೆಯ ಪದ್ದತಿ, ಮುಂಬರುವ ಆಪತ್ಕಾಲದಲ್ಲಿ ನಮ್ಮ ಜೀವದ ರಕ್ಷಣೆ ಮಾಡಿಕೊಳ್ಳುವ ಉಪಾಯಗಳು ಇದರೊಂದಿಗೆ ಧರ್ಮರಕ್ಷಣೆ, ರಾಷ್ಟ್ರಜಾಗೃತಿ ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಹೇಗೆ ಮಾಡಬೇಕೆಂಬ ಕುರಿತ ಹಲವಾರು ಲೇಖನಗಳು ಇವೆ.