Wednesday, January 22, 2025
ಸುದ್ದಿ

ಕೊಳ್ನಾಡು: ಕುಂಟ್ರಕಲ ಶ್ರೀ ಮಹಮ್ಮಾಯೀ ಭಜನಾ ಮಂದಿರದ ಚತುರ್ಥ ವರ್ಧಂತ್ಯುತ್ಸವ ಪೂಜೆ, ಭಜನೆ, ಧಾರ್ಮಿಕ ಸಭೆ – ಕಹಳೆ ನ್ಯೂಸ್

ಶ್ರೀ ಮಹಮ್ಮಾಯೀ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ, ಕೊಳ್ನಾಡು ಗ್ರಾಮ, ಬಂಟ್ವಾಳ ತಾಲೂಕು ಇದರ ಶ್ರೀ ಮಹಮ್ಮಾಯೀ ಭಜನಾ ಮಂದಿರದ ಚತುರ್ಥ ವರ್ಧಂತ್ಯುತ್ಸವವು ವೇದಮೂರ್ತಿ ಶ್ರೀ ಶಂಕರನಾರಾಯಣ ಭಟ್ ನಡಿಬೈಲು ಇವರ ನೇತೃತ್ವದಲ್ಲಿ ಜರುಗಿತು. ವರ್ಧಂತ್ಯುತ್ಸವದ ಪ್ರಯುಕ್ತ ಶ್ರೀ ಗಣಪತಿ ಹವನ, ಸ್ವಯಂವರ ಪಾರ್ವತಿ ಪೂಜೆ ನೆರವೇರಿಸಲಾಯ್ತು. ಮಂಡಳಿಯ ಮಕ್ಕಳ ತಂಡದವರು, ಮಂಡಳಿಯ ಸದಸ್ಯರು, ಊರವರು ಹಾಗೂ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗ ಇವರು ಭಜನಾ ಸೇವೆ ನಡೆಸಿಕೊಟ್ಟರು.
ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿ, ಶ್ರೀ ಚಾಮುಂಡೇಶ್ವರೀ ದೇವೀ ಕ್ಷೇತ್ರ, ಕಣಿಯೂರು ಇವರು ಆಶೀರ್ವಚನ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಜರಂಗದಳ ಪ್ರಾಂತ ಸಹಸಂಚಾಲಕರೂ, ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್ ಸದಸ್ಯರೂ ಆದ ಮುರಳಿಕೃಷ್ಣ ಹಸಂತಡ್ಕ ಧಾರ್ಮಿಕ ಉಪನ್ಯಾಸ ನೀಡಿದರು.
ಮಂಡಳಿಯ ಅಧ್ಯಕ್ಷರಾದ ಪುರುಷೋತ್ತಮ ನಾಯ್ಕ ಕುಂಟ್ರಕಲ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ರಾಮಣ್ಣ ಗೌಡ ದೇವರಮನೆ ನೋಟರಿ ವಕೀಲರು, ಅಧ್ಯಕ್ಷರು ಶ್ರೀ ಮಲರಾಯಿ ದೈವಸ್ಥಾನ ಆಡಳಿತ ಟ್ರಸ್ಟ್ (ರಿ.) ಪೂರ್ಲಪ್ಪಾಡಿ – ವಿಟ್ಲಪಡ್ನೂರು; ಶ್ರೀಮತಿ ಸುನಿತಾ ಕುಂಟ್ರಕಲ, ಅಧ್ಯಕ್ಷರು ಶ್ರೀ ಮಹಮ್ಮಾಯೀ ಮಾತೃ ಮಂಡಳಿ, ಕುಂಟ್ರಕಲ; ಆನಂದ ಪೂಜಾರಿ ಕುಳಾಲು, ಸಂಚಾಲಕರು ಶ್ರೀ ಶಾರದಾ ಸೇವಾ ಟ್ರಸ್ಟ್ (ರಿ.) ದಾಸಗಿರಿ – ಕುಳಾಲು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜರುಗಿದ ಮೊಸರುಕುಡಿಕೆಯ ಸರ್ಧೆಯ ವಿಜೇತರಿಗೆ ಹಾಗೂ ರಾಧಾಕೃಷ್ಣ ವೇಷ ಧರಿಸಿದ ಪುಟಾಣಿಗಳಿಗೆ ಬಹುಮಾನ ವಿತರಣೆ ನಡೆಸಲಾಯಿತು; ಮಂಡಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಲಾಯ್ತು.
ಅಧ್ಯಕ್ಷರಾಗಿ ತಿಮ್ಮಪ್ಪ ನಾಯ್ಕ ಕಾನ, ಕಾರ್ಯದರ್ಶಿಯಾಗಿ ಭಾಸ್ಕರ ನಾಯ್ಕ ಕುಳಾಲು ಹಾಗು ಕೋಶಾಧಿಕಾರಿಯಾಗಿ ಕೇಶವ ನಾಯ್ಕ ಆಯ್ಕೆಯಾಗಿರುತ್ತಾರೆ.