Wednesday, January 22, 2025
ಸುದ್ದಿ

ತಾನು ಪೂಜೆ ಮಾಡುತ್ತಿದ್ದ ದೇವಸ್ಥಾನದ ದೇವರ ವಿಗ್ರಹವನ್ನು ಕದ್ದೊಯ್ದ ಅರ್ಚಕ – ಕಹಳೆ ನ್ಯೂಸ್

ಮಡಿಕೇರಿ: ತಾನು ಪೂಜೆ ಮಾಡುತ್ತಿದ್ದ ದೇವರ ವಿಗ್ರಹವನ್ನು ದೇವಸ್ಥಾನದ ಅರ್ಚಕನೇ ಕದ್ದಿರುವ ಘಟನೆ ವಿರಾಜಪೇಟೆ ಸಮೀಪದ ಪೆರುಂಬಾಡಿ – ಬಾಳುಗೋಡು ದೇವಸ್ಥಾನವೊಂದರಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅರ್ಚಕನು ವಿಗ್ರಹವನ್ನು ಚೀಲದಲ್ಲಿ ಹಾಕಿ ಕೊಂಡು ಹೋಗುತ್ತಿರುವುದನ್ನು ಗಮನಿಸಿದ ಸ್ಥಳೀಯ ವ್ಯಕ್ತಿಯೋರ್ವ ವಿಷಯವನ್ನು ದೇವಸ್ಥಾನದ ಆಡಳಿತ ಮಂಡಳಿಗೆ ತಿಳಿಸಿದ್ದು, ತಕ್ಷಣವೇ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಆಡಳಿತ ಮಂಡಳಿಯವರಿಗೆ ವಿಗ್ರಹ ಕಳವಾಗಿರುವುದು ಕಂಡುಬಂದಿದೆ. ಕೂಡಲೇ ದೇವಸ್ಥಾನದ ಅರ್ಚಕನಿಗೆ ಕರೆ ಮಾಡಿದ ಆಡಳಿತ ಮಂಡಳಿ “ವಿಗ್ರಹವನ್ನು ಕೊಂಡೊಯ್ಯುವುದನ್ನು ಸ್ಥಳೀಯರು ನೋಡಿದ್ದಾರೆ, ಹೀಗಾಗಿ ಕೂಡಲೇ ವಿಗ್ರಹದೊಂದಿಗೆ ದೇವಸ್ಥಾನಕ್ಕೆ ಬರಬೇಕೆಂದು” ತಿಳಿಸಿದ್ದಾರೆ.
ಬಳಿಕ ವಿಗ್ರಹದೊಂದಿಗೆ ಅರ್ಚಕನು ದೇವಸ್ಥಾನಕ್ಕೆ ಬಂದು ತಪ್ಪನ್ನು ಒಪ್ಪಿಕೊಂಡಿದ್ದು, ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ಇದೇ ದೇವಸ್ಥಾನದಲ್ಲಿ ಅರ್ಚಕನಾಗಿದ್ದರು.