Wednesday, January 22, 2025
ಸುದ್ದಿ

ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 91.50 ರೂ. ಇಳಿಕೆ ! – ಕಹಳೆ ನ್ಯೂಸ್

ನವದೆಹಲಿ, ಸೆಪ್ಟೆಂಬರ್ 1: ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ 91.5 ರೂಪಾಯಿ ಇಳಿದಿದೆ. ಈ ಹಿಂದೆ 1,976 ರೂ. ಇದ್ದ ಸಿಲಿಂಡರ್‌ ಬೆಲೆ ಈಗ 1,885 ಕ್ಕೆ ಲಭ್ಯವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸೆಪ್ಟೆಂಬರ್ 1 ರಂದು ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಬೆಲೆಯ ಪ್ರಕಾರ, ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.

ಮೇ ತಿಂಗಳಲ್ಲಿ 19 ಕೆಜಿ ಸಿಲಿಂಡರ್‌ನ ಬೆಲೆ ಸಾರ್ವಕಾಲಿಕ ಗರಿಷ್ಠ 2,354 ರೂ.ಗೆ ತಲುಪಿತ್ತು. ಆದರೆ ಈಗ ದೆಹಲಿಯಲ್ಲಿ 1,885 ರೂ. ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈ ಪ್ರಮುಖ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಕುಸಿದಿದೆ.

ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 2,095 ರೂ.ನಿಂದ 1,995 ರೂ.ಗೆ ಇಳಿಕೆಯಾಗಿದೆ. ಅದೇ ರೀತಿ ಮುಂಬೈನಲ್ಲಿ 1,936 ರೂ. ಬದಲಿಗೆ 1,844 ರೂ., ಮತ್ತು ಚೆನ್ನೈನಲ್ಲಿ 2,141 ರೂ. ಬದಲಿಗೆ 2,045 ರೂ., ದೆಹಲಿಯಲ್ಲಿ 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 1053 ರೂ. ಇದೆ. ಆದರೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಬದಲಾಗಿಲ್ಲ.

ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆ ಸತತ ಐದು ತಿಂಗಳಿಂದ ಕಡಿಮೆಯಾಗಿದೆ. ಮೇ 19, 2022 ರಂದು ಗರಿಷ್ಠ 2,354 ರೂ.ಗೆ ತಲುಪಿದ್ದ ಗ್ಯಾಸ್ ಸಿಲಿಂಡರ್ ಬೆಲೆ ಜೂನ್ 1 ರಂದು 2,219 ರೂ.ಗಳಷ್ಟಾಗಿತ್ತು. ಒಂದು ತಿಂಗಳ ನಂತರ ಸಿಲಿಂಡರ್ ಬೆಲೆ 98 ರೂ.ನಷ್ಟು ಕುಸಿದು 2,021 ರೂ.ಗೆ ಇಳಿದಿತ್ತು. ಈ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಜುಲೈ 6 ರಂದು 2,012 ರೂ.ಗೆ ಇಳಿಸಿವೆ. ಆಗಸ್ಟ್‌ನಿಂದ ಸಿಲಿಂಡರ್ ಬೆಲೆ 1976 ರೂ. ಇತ್ತು.

ಪ್ರತಿ ತಿಂಗಳ ಮೊದಲ ದಿನದಂದು ಕೆಲವು ಹೊಸ ಮತ್ತು ಕೆಲವು ಪರಿಷ್ಕೃತ ನಿಯಮಗಳು ಜಾರಿಗೆ ಬರುತ್ತವೆ. ಇವುಗಳಲ್ಲಿ ಎಲ್‌ಪಿಜಿ ಮತ್ತು ಇಂಧನ ದರಗಳಲ್ಲಿ ಪರಿಷ್ಕರಣೆಯೂ ಒಳಗೊಂಡಿದ್ದು, ಇದೀಗ ವಾಣಿಜ್ಯ ಬಳಕೆಯ ಗ್ಯಾಸ್‌ ಸಿಲಿಂಡರ್‌ ದರವನ್ನು ಇಳಿಕೆ ಮಾಡಲಾಗಿದೆ.