Wednesday, January 22, 2025
ಸುದ್ದಿ

ಉಳ್ಳಾಲ ಮೂಲದ ಯುವಕನ ಮೃತದೇಹ ಮುಂಬೈಯ ಚರಂಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ; ಕೊಲೆ ಶಂಕೆ – ಕಹಳೆ ನ್ಯೂಸ್

ಉಳ್ಳಾಲ : ಉಳ್ಳಾಲ ತಾಲೂಕಿನ ಬಂಡಿಕೊಟ್ಯ ನಿವಾಸಿ ಸುಧೀರ್ ಕುಮಾರ್ ಗಾಣಿಗ (32) ಎಂಬವರ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮುಂಬೈನ ಚರಂಡಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಸುಧೀರ್ ಅವರು ಧರಿಸಿದ್ದ ಅಂಗಿಯ ಜೇಬಲ್ಲಿ ಪತ್ತೆಯಾದ ವೋಟರ್ ಐಡಿಯಿಂದ ಪೊಲೀಸರು ಗುರುತು ಪತ್ತೆ ಹಚ್ಚಿದ್ದಾರೆ. ಸುಧೀರ್ ಅವರು ಆಗಸ್ಟ್ 14ರಿಂದ ನಾಪತ್ತೆಯಾಗಿದ್ದರು.

ಈ ಬಗ್ಗೆ ಮುಂಬೈನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಬಳಿಕ‌ ವಸಾಯಿ ಪೊಲೀಸ್ ಠಾಣೆ ವ್ಯಾಪ್ತಿಯ ಚರಂಡಿಯೊಂದರಲ್ಲಿ ಸುಧೀರ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಉಳ್ಳಾಲ ಮೆಸ್ಕಾಂನಲ್ಲಿ ನೌಕರೆಯಾಗಿ ನಿವೃತ್ತರಾಗಿದ್ದ ಮಾಲತಿ ಅವರ ಪುತ್ರ ಸುಧೀರ್ ಕುಮಾರ್ ಎಳೆಯ ವಯಸ್ಸಲ್ಲೇ ಮುಂಬೈಗೆ ತೆರಳಿ ಅಲ್ಲಿ ಕಾರ್ಪೆಂಟರ್ ವೃತ್ತಿಯಲ್ಲಿ ತೊಡಗಿದ್ದರು. ಸುಧೀರ್ ಅವರ ಮೃತದೇಹ ಸಿಕ್ಕಿದ ಬಗ್ಗೆ ಮಾಹಿತಿ ಮೇರೆಗೆ ಅವರ ಕುಟುಂಬ ಮುಂಬೈಗೆ ತೆರಳಿದೆ. ಸುಧೀರ್ ಸಾವಿಗೀಡಾದ ಬಗ್ಗೆ ನೈಜ ವಿಚಾರ ಪೊಲೀಸ್ ತನಿಖೆ ಯಿಂದ ತಿಳಿದು ಬರಬೇಕಿದೆ.